ಗಾಯಗೊಂಡವರಿಗೆ ₹ ೫ ಸಾವಿರ ಸಿಗಲಿದೆ!

ಬೆಂಗಳೂರು – ನಾಯಿ ಕಚ್ಚಿ ವ್ಯಕ್ತಿ ಮೃತಪಟ್ಟರೆ, ಆತನ ಕುಟುಂಬಕ್ಕೆ ಪರಿಹಾರವಾಗಿ ₹ ೫ ಲಕ್ಷ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರೊಂದಿಗೆ ನಾಯಿ ಕಚ್ಚಿ ಗಾಯಗೊಂಡವರಿಗೆ ₹ ೫ ಸಾವಿರ ನೀಡಲಾಗುವುದು. ರಾಜ್ಯದಲ್ಲಿ ನಾಯಿಗಳ ದಾಳಿಯ ಹೆಚ್ಚುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮ ಕೈಗೊಂಡಿದೆ.
ನಾಯಿ ಕಚ್ಚಿದ್ದಕ್ಕೆ ಚರ್ಮದ ಮೇಲೆ ರಂಧ್ರ, ಆಳವಾದ ಗಾಯ, ದೇಹದ ಮೇಲೆ ನೀಲಿ-ಕಪ್ಪು ಗುರುತುಗಳು ಮೂಡಿದರೆ, ಸಂಬಂಧಪಟ್ಟ ಸಂತ್ರಸ್ತರಿಗೆ ₹ ೫ ಸಾವಿರ ಸಿಗಲಿದೆ. ಇದರಲ್ಲಿ ₹ ೩ ಸಾವಿರದ ೫೦೦ ರೂಪಾಯಿ ನೇರವಾಗಿ ಸಂತ್ರಸ್ತರಿಗೆ ನೀಡಲಾಗುವುದು, ಉಳಿದ ಹಣವನ್ನು ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ಗೆ ನೀಡಲಾಗುವುದು ಮತ್ತು ಆ ಮೂಲಕ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು.
ತಮಿಳುನಾಡು ರಾಜ್ಯದಲ್ಲೂ ನಾಯಿಗಳ ಕಾಟ!
ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ನಾಯಿಗಳ ದಾಳಿ ಮತ್ತು ರೇಬೀಸ್‌ನಿಂದ ಹಲವರು ಮೃತಪಟ್ಟಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ೨೦೨೪ ರಲ್ಲಿ ತಮಿಳುನಾಡಿನಲ್ಲಿ ನಾಯಿ ಕಚ್ಚಿದ ೫ ಲಕ್ಷಕ್ಕೂ ಹೆಚ್ಚು ಘಟನೆಗಳು ದಾಖಲಾಗಿದ್ದು, ೨೮ ಜನರು ರೇಬೀಸ್‌ನಿಂದ ಮೃತಪಟ್ಟಿದ್ದಾರೆ. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಬೀದಿ ನಾಯಿಗಳ ಲಸಿಕೆ, ಸಂತಾನಶಕ್ತಿಹರಣ ಮತ್ತು ವ್ಯವಸ್ಥಿತ ನಿಯಂತ್ರಣ ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಈ ಹಣವನ್ನು ಬೀದಿ ನಾಯಿಗಳಿಂದ ಜನರ ರಕ್ಷಣೆ ಮಾಡಲು ವಿಫಲರಾದ ರಾಜಕಾರಣಿಗಳ ಜೇಬಿನಿಂದಲೇ ಕೊಡಲಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!