ಬಾಂಗ್ಲಾದೇಶದ ಮುಸ್ಲಿಂ ನುಸುಳುಕೋರರು ಭಾರತದಿಂದ ಪಲಾಯನ ಮಾಡುತ್ತಿದ್ದಾರೆ! : SIR Fear

ವಿಶೇಷ ಆಳವಾದ ವಿಮರ್ಶೆಯ ಪರಿಣಾಮ !

ಕೊಲಕಾತಾ(ಪಶ್ಚಿಮ ಬಂಗಾಳ) – ದೇಶದ ೧೨ ರಾಜ್ಯಗಳಲ್ಲಿ ವಿಶೇಷ ಆಳವಾದ ಪರಿಶೀಲನೆಯ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಅಸಂಖ್ಯಾತ ಬಾಂಗ್ಲಾದೇಶದ ಮುಸ್ಲಿಂ ನುಸುಳುಕೋರರು ಭಾರತದಿಂದ ಪಲಾಯನ ಮಾಡಲು ಪ್ರಾರಂಭಿಸಿದ್ದಾರೆ. ಪಶ್ಚಿಮ ಬಂಗಾಳದ ಗಡಿಯ ಬಳಿ ದೊಡ್ಡ ಸಂಖ್ಯೆಯಲ್ಲಿ ನುಸುಳುಕೋರರು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತಿರುವುದು ಕಂಡುಬರುತ್ತಿದೆ. ಈ ನುಸುಳುಕೋರರ ಬಳಿ ಭಾರತೀಯ ಪೌರತ್ವದ ಯಾವುದೇ ಬಲವಾದ ಪುರಾವೆಗಳು ಇಲ್ಲದ ಕಾರಣ ಅವರು ಪಲಾಯನ ಆರಂಭಿಸಿದ್ದಾರೆ.

ಗಡಿಯಲ್ಲಿ ಸಿಲುಕಿದ ನುಸುಳುಕೋರರು

ಪಶ್ಚಿಮ ಬಂಗಾಳದ ಹಾಕಿಂಪುರ ಗಡಿಯ ಬಳಿ ೫೦೦ ಕ್ಕೂ ಹೆಚ್ಚು ನುಸುಳುಕೋರರು ಸಿಲುಕಿಕೊಂಡಿದ್ದಾರೆ. ಈ ನುಸುಳುಕೋರರು ಹಲವು ವರ್ಷಗಳಿಂದ ಕೊಲಕಾತಾ ಸುತ್ತಮುತ್ತ ವಾಸಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಮನೆಗೆಲಸ ಮಾಡುವವರು ಅಥವಾ ಕೂಲಿ ಕಾರ್ಮಿಕರಾಗಿದ್ದಾರೆ. ಈಗ ಗಡಿಯ ಬಳಿ ಕುಳಿತಿರುವ ಬಾಂಗ್ಲಾದೇಶದ ಕುಟುಂಬಗಳು ‘ಕಾಗದಪತ್ರಗಳಿಲ್ಲ, ಆದ್ದರಿಂದ ಸಿಕ್ಕಿಬೀಳುತ್ತೇವೆ’ ಈ ಒಂದೇ ವಾಕ್ಯವನ್ನು ಹೇಳುತ್ತಿವೆ. ಈ ಭಯವು ಅವರನ್ನು ಬಾಂಗ್ಲಾದೇಶದ ಕಡೆಗೆ ತಳ್ಳುತ್ತಿದೆ. ಒಬ್ಬ ವ್ಯಕ್ತಿ, ಪರಿಶೀಲನೆ ಪ್ರಾರಂಭವಾಗಿದೆ ಎಂದು ತಿಳಿಯುತ್ತಿದ್ದಂತೆ ತಾನು ಹೆದರಿ ತಕ್ಷಣ ಭಾರತ-ಬಾಂಗ್ಲಾದೇಶ ಗಡಿಯ ಬಳಿ ಬಂದೆ ಎಂದು ಹೇಳಿದ್ದಾನೆ. ಒಬ್ಬ ಮಹಿಳೆ ತಾನು ೧೦ ವರ್ಷಗಳಿಗಿಂತ ಹೆಚ್ಚು ಕಾಲ ಮನೆಗೆಲಸ ಮಾಡುತ್ತಿದ್ದೆ ಮತ್ತು ತನ್ನ ಬಳಿ ಭಾರತೀಯ ಪೌರತ್ವದ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾಳೆ. ಈಗ ಅವಳು ಸತ್ಖಿರಾ (ಬಾಂಗ್ಲಾದೇಶ) ಗೆ ಮರಳಲು ಬಯಸಿದ್ದಾಳೆ.

ಗಡಿ ಭದ್ರತಾ ದಳ (BSF) ಇದನ್ನು ಹಿಮ್ಮುಖ ವಲಸೆ ಎಂದು ಕರೆದಿದೆ. ಗಡಿ ಭದ್ರತಾ ದಳವು ಬಾಂಗ್ಲಾದೇಶೀಯರು ಭಾರತಕ್ಕೆ ಪ್ರವೇಶಿಸುವುದನ್ನು ತಡೆಯುತ್ತಿದ್ದರೆ, ಈ ಬಾರಿ ಬಾಂಗ್ಲಾದೇಶದ ಭದ್ರತಾ ದಳವು ಅವರನ್ನು ಒಳಗೆ ಬಿಡುತ್ತಿಲ್ಲ. ಹೀಗಾಗಿ ನೂರಾರು ಬಾಂಗ್ಲಾದೇಶೀಯರು ಗಡಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ. (ಭಾರತ ಸರಕಾರವು ತಕ್ಷಣವೇ ಬಾಂಗ್ಲಾದೇಶದೊಂದಿಗೆ ಚರ್ಚಿಸಿ ಈ ನುಸುಳುಕೋರರು ಮರಳಿ ಕಳುಹಿಸಲು ಕ್ರಮಗಳನ್ನು ಕೈಗೊಳ್ಳಬೇಕು, ಇಲ್ಲದಿದ್ದರೆ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಬಹುದು! – ಸಂಪಾದಕರು)

ಸಂಪಾದಕೀಯ ನಿಲುವು

ಪಲಾಯನ ಮಾಡುತ್ತಿರುವ ನುಸುಳುಕೋರರು ಹಿಂದಿರುಗುವುದಿಲ್ಲವಲ್ಲ, ಇದರ ಕಡೆಗೆ ಸರಕಾರ ಮತ್ತು ಆಡಳಿತ ಗಮನ ನೀಡಬೇಕು, ಇದೇ ಸಾಮಾನ್ಯ ಜನರ ನಿರೀಕ್ಷೆ ಇದೆ !

 

೧೨ ಸಾವಿರಕ್ಕೂ ಹೆಚ್ಚು ನುಸುಳುಕೋರರನ್ನು ಬಂಧಿಸಲಾಗಿದೆ!

ಗಡಿ ಭದ್ರತಾ ದಳದ ಮೂಲಗಳ ಪ್ರಕಾರ, ಪರಿಶೀಲನೆಯ ಘೋಷಣೆಯಾದಾಗಿನಿಂದ ಬಾಂಗ್ಲಾದೇಶಕ್ಕೆ ಹಿಂದಿರುಗಲು ಪ್ರಯತ್ನಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ೩ ತಿಂಗಳಲ್ಲಿ ಗಡಿ ಭದ್ರತಾ ದಳವು ಪಶ್ಚಿಮ ಬಂಗಾಳ ಗಡಿಯಿಂದ ಬಾಂಗ್ಲಾದೇಶದ ೧೨ ಸಾವಿರಕ್ಕೂ ಹೆಚ್ಚು ನುಸುಳುಕೋರರನ್ನು ಬಂಧಿಸಿದೆ.

ಸಂಪಾದಕೀಯ ನಿಲುವು

ದೇಶದ ಆಡಳಿತವು ನುಸುಳುಕೋರರನ್ನು ಹೊರಹಾಕಲು ವಿಫಲವಾಗುತ್ತಿರುವಾಗ, ಪರಿಶೀಲನೆಯಿಂದಾಗಿ ನುಸುಳುಕೋರರು ತಾವಾಗಿಯೇ ಹಿಂದಿರುಗುತ್ತಿದ್ದರೆ, ಅವರನ್ನು ಹಿಡಿದು ಸಾಕುವುದರಿಂದ ಏನು ಪ್ರಯೋಜನ?