ಡಿಸೆಂಬರ್ ೨೫ ರಿಂದ ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭ! Navi Mumbai Airport Operational

ದೆಹಲಿ, ಗೋವಾ, ಕೊಚ್ಚಿ ಮತ್ತು ಕರ್ಣಾವತಿಗೆ ವಿಮಾನ ಹಾರಾಟ!

ನವಿ ಮುಂಬಯಿ – ಡಿಸೆಂಬರ್ ೨೫ ರಿಂದ ನವಿ ಮುಂಬಯಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಔಪಚಾರಿಕ ಪ್ರಯಾಣಿಕರ ಸೇವೆಗಳು ಪ್ರಾರಂಭವಾಗಲಿವೆ. ಈ ವಿಮಾನ ನಿಲ್ದಾಣವನ್ನು ಅಕ್ಟೋಬರ್ ೮ ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಉದ್ಘಾಟನೆಯಾದ ಕೇವಲ ಎರಡು ತಿಂಗಳಲ್ಲಿ, ವಿಮಾನ ನಿಲ್ದಾಣವು ಪೂರ್ಣ ಸಾಮರ್ಥ್ಯದೊಂದಿಗೆ ವಿಮಾನ ಹಾರಾಟ ಸೇವೆಗೆ ಸಿದ್ಧವಾಗಿದೆ. ಮೊದಲ ದಿನದಿಂದಲೇ ಪ್ರಯಾಣಿಕರು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಪ್ರಯಾಣದ ಅನುಭವವನ್ನು ಪಡೆಯಲಿದ್ದಾರೆ.

ಡಿಸೆಂಬರ್ ೨೬ ರಿಂದ ‘ಆಕಾಶಾ ಏರ್’ ಕಂಪನಿಯು ದೆಹಲಿ, ಗೋವಾ, ಕೊಚ್ಚಿ ಮತ್ತು ಕರ್ಣಾವತಿಗೆ  ಹೋಗುವ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಆಕಾಶಾ ಏರ್ ನಂತರ, ಇಂಡಿಗೋ ಸಹ ತನ್ನ ವಿಮಾನಗಳ ಹಾರಾಟದ ವೇಳಾಪಟ್ಟಿಯನ್ನು ಘೋಷಿಸಿದೆ. ಟಿಕೆಟ್ ದರಗಳು ೭ ಸಾವಿರದ ೩೨೪ ರೂಪಾಯಿಗಳಿಂದ ಪ್ರಾರಂಭವಾಗಲಿವೆ.