ಸೂಕ್ಷ್ಮ ಮತ್ತು ಪ್ರಚೋದನಕಾರಿ ವಿಷಯಗಳನ್ನು ಪ್ರಸಾರ ಮಾಡಬೇಡಿರಿ!

ನವ ದೆಹಲಿ – ದೆಹಲಿ ಬಾಂಬ್ ಸ್ಫೋಟದ ವರದಿ ಮಾಡುವಾಗ ನಿರ್ಲಕ್ಷ್ಯ ತೋರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರಕಾರವು ಖಾಸಗಿ ಸುದ್ದಿ ವಾಹಿನಿಗಳಿಗೆ, ‘ಸೂಕ್ಷ್ಮ ಮತ್ತು ಪ್ರಚೋದನಕಾರಿ ವಿಷಯಗಳನ್ನು ಪ್ರಸಾರ ಮಾಡಬೇಡಿರಿ’ ಎಂದು ಎಚ್ಚರಿಕೆ ನೀಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕುರಿತು ಅಧಿಸೂಚನೆಯನ್ನು ಪ್ರಕಟಿಸಿದೆ. ಇದರಲ್ಲಿ, ಕೆಲವು ಮಾಧ್ಯಮಗಳು ಆರೋಪಿಗಳನ್ನು ತೋರಿಸಿದ ರೀತಿ ನೋಡಿದರೆ, ಅದು ಹಿಂಸಾಚಾರವನ್ನು ಬೆಂಬಲಿಸುವಂತೆ ಕಾಣುತ್ತಿತ್ತು. ಕೆಲವು ಸುದ್ದಿ ವಾಹಿನಿಗಳು, ‘ಸ್ಫೋಟಕ ವಸ್ತುಗಳನ್ನು ತಯಾರಿಸುವ ವಿಧಾನಗಳು’ ಎಂಬರ್ಥ ಬರುವಂತಹ ವಿಡಿಯೋಗಳು ಅಥವಾ ಮಾಹಿತಿಯನ್ನು ಪ್ರಸಾರ ಮಾಡುತ್ತವೆ. ಇದರಿಂದ ಅಜಾಗರೂಕತೆಯಿಂದ ಹಿಂಸಾಚಾರವು ಭುಗಿಲೇಳಬಹುದು, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಒದಗಬಹುದು, ಎಂದು ತಿಳಿಸಲಾಗಿದೆ.
ಸಂಪಾದಕೀಯ ನಿಲುವುಪ್ರಸಾರ ಮಾಧ್ಯಮಗಳು ಬಾಂಬ್ ಸ್ಫೋಟ, ಅಪಹರಣ, ಗಲಭೆ ಮುಂತಾದ ಸೂಕ್ಷ್ಮ ಪ್ರಕರಣಗಳ ವರದಿಗಳನ್ನು ಎಷ್ಟು ಬೇಜವಾಬ್ದಾರಿಯಿಂದ ಪ್ರಸಾರ ಮಾಡುತ್ತವೆ ಎಂಬುದು ಈ ಹಿಂದೆ ಕಂದಹಾರ್ ವಿಮಾನ ಅಪಹರಣ ಪ್ರಕರಣ, ಮುಂಬಯಿ ಮೇಲಿನ ದಾಳಿ ಮುಂತಾದ ಘಟನೆಗಳಿಂದ ತಿಳಿದುಬಂದಿದೆ. ಹೀಗಿರುವಾಗ, ಸರಕಾರ ಕೇವಲ ಎಚ್ಚರಿಕೆ ನೀಡಿ ಸುಮ್ಮನೆ ಕುಳಿತುಕೊಳ್ಳದೇ, ಇಂತಹ ಬೇಜವಾಬ್ದಾರಿತನ ತೋರಿದ ಮಾಧ್ಯಮಗಳ ಮೇಲೆ ನಿಷೇಧವನ್ನೇ ಹೇರಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!