
ಗೌಹಾಟಿ (ಉತ್ತರಾಖಂಡ) – ‘ಹಿಂದೂ’ ಎಂಬ ಶಬ್ದ ಕೇವಲ ಧಾರ್ಮಿಕ ಪದವಲ್ಲ, ಇದು ಸಾವಿರಾರು ವರ್ಷಗಳ ಸಂಸ್ಕೃತಿಯಾಗಿದೆ. ಭಾರತ ಮತ್ತು ಹಿಂದೂ ಇವು ಸಮಾನಾರ್ಥಕ ಪದಗಳಾಗಿವೆ. ಯಾರು ಭಾರತದ ಬಗ್ಗೆ ಹೆಮ್ಮೆ ಹೊಂದಿದ್ದಾರೋ, ಅವರೇ ಹಿಂದೂ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಯಾವುದೇ ಅಧಿಕೃತ ಘೋಷಣೆಯ ಅಗತ್ಯವಿಲ್ಲ. ಇಲ್ಲಿನ ಸಂಸ್ಕೃತಿಯನ್ನು ಗಮನಿಸಿದರೆ ಹಿಂದೂ ರಾಷ್ಟ್ರವೆಂಬುದು ಸ್ಪಷ್ಟವಾಗಿಯೇ ಇದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜೀ ಭಾಗವತ್ ಅವರು ಇಲ್ಲಿ ಹೇಳಿಕೆ ನೀಡಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
🛕 “No need to announce Bharat as a Hindu Rashtra, our civilisation already shows it.” – Sarsanghchalak Param Pujya Dr Mohanji Bhagwat in Guwahati
🇮🇳 Anyone proud of India is a Hindu; The Sangh (RSS) was established to contribute to making India a Vishwaguru
🤝 Northeast is a… pic.twitter.com/wCxwBkhidr
— Sanatan Prabhat (@SanatanPrabhat) November 19, 2025
ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರಿಸಿ, ಯಾರಿಗೆ ಭಾರತದ ಮೇಲೆ ಅಭಿಮಾನ ಮತ್ತು ಪ್ರೀತಿಯಿದೆಯೋ, ಅವನೇ ಹಿಂದೂ; ಅವನ ವೈಯಕ್ತಿಕ ಪೂಜೆಯ, ಪ್ರಾರ್ಥನೆಯ ವಿಧಾನ ಯಾವುದೇ ಇರಲಿ, ಅವನು ಹಿಂದೂವೇ ಆಗಿರುತ್ತಾನೆ ಎಂದು ಹೇಳಿದರು.
ಭಾರತವನ್ನು ವಿಶ್ವಗುರು ಮಾಡುವಲ್ಲಿ ಕೊಡುಗೆ ನೀಡಲು ಸಂಘದ ಸ್ಥಾಪನೆ!
ಪ. ಪೂ. ಸರಸಂಘಚಾಲಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ತತ್ವಜ್ಞಾನವನ್ನು ಸ್ಪಷ್ಟಪಡಿಸುತ್ತಾ, ಈ ಸಂಘಟನೆಯು ಯಾರನ್ನಾದರೂ ವಿರೋಧಿಸಲು, ಯಾರಿಗಾದರೂ ಹಾನಿ ಮಾಡಲು ಮತ್ತು ಯಾರಿಗಾದರೂ ತೊಂದರೆಯನ್ನುಂಟು ಮಾಡಲು ಪ್ರಾರಂಭವಾಗಿಲ್ಲ; ಬದಲಾಗಿ, ಒಂದು ಪ್ರಗತಿಪರ ಪ್ರಬುದ್ಧ ಸಮಾಜ ಮತ್ತು ವ್ಯಕ್ತಿಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಲಾಗಿದೆ. ವ್ಯಕ್ತಿಯ ಚಾರಿತ್ರ್ಯ ನಿರ್ಮಾಣದ ಕಡೆ ಗಮನಹರಿಸಲು ಮತ್ತು ಭಾರತವನ್ನು ವಿಶ್ವಗುರು ಮಾಡುವಲ್ಲಿ ಕೊಡುಗೆ ನೀಡುವ ಸಲುವಾಗಿ ಈ ಸಂಘಟನೆ ನಿಂತಿದೆ ಎಂದು ಅವರು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!