|

(‘ಮನಿ ಲಾಂಡರಿಂಗ್’ ಎಂದರೆ ಕಪ್ಪು ಹಣವನ್ನು ಬಿಳಿ ಮಾಡುವ ಪ್ರಕ್ರಿಯೆ)
ಮುಂಬಯಿ – ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಅವನನ್ನು ಮುಂಬಯಿ ಸೆಷನ್ಸ್ ನ್ಯಾಯಾಲಯದ ವಿಶೇಷ ಎಂ.ಪಿ – ಎಂ.ಎಲ್.ಎ. ನ್ಯಾಯಾಲಯವು ‘ಮನಿ ಲಾಂಡರಿಂಗ್’ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 19 ರಂದು ನಡೆಯಲಿದ್ದು, ಆಗ ಅವನಿಗೆ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಈ ಮನಿ ಲಾಂಡರಿಂಗ್ ಪ್ರಕರಣವು ಜಿಹಾದಿ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಆಸ್ತಿಗಳಿಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ನವಾಬ್ ಮಲಿಕ್ ಅವನನ್ನು 2002 ರಲ್ಲಿ ಬಂಧಿಸಲಾಗಿತ್ತು. ಸದ್ಯ ನವಾಬ್ ಮಲಿಕ್ ಜಾಮೀನಿನ ಮೇಲೆ ಹೊರಗಿದ್ದಾನೆ. ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್, ಸಲೀಂ ಪಟೇಲ್, 1993 ರ ಮುಂಬಯಿ ಸ್ಫೋಟದ ಆರೋಪಿ ಸರ್ದಾರ್ ಖಾನ್ ಮತ್ತು ನವಾಬ್ ಮಲಿಕ್ ಅವರು ಗೋವಾವಾಲಾ ಕಾಂಪೌಂಡ್‌ನಲ್ಲಿರುವ ಮುನಿರಾ ಪ್ಲಂಬರ್ ಎಂಬ ಮಹಿಳೆಯ 3 ಎಕರೆ ಭೂಮಿಯನ್ನು ವಂಚನೆ ಮಾಡಿ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
೧. ವಿಚಾರಣೆಯ ವೇಳೆ ನವಾಬ್ ಮಲಿಕ್ ಪರ ವಕೀಲರು ಮಾತನಾಡಿ, ‘ನಾವು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಈ ಅರ್ಜಿಯ ಹಿಂದಿನ ವಿಚಾರಣೆಯ ವೇಳೆ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ‘ಆರೋಪಿ ಪಕ್ಷಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಾಗುವುದು ಮತ್ತು ಅಲ್ಲಿಯವರೆಗೆ ಆರೋಪಗಳನ್ನು ನಿಗದಿಪಡಿಸಲಾಗುವುದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು; ಆದರೆ ನ್ಯಾಯಾಲಯವು ವಿಷಾದ ವ್ಯಕ್ತಪಡಿಸಿ, ‘ನನ್ನ ಪೀಠದ ಪರವಾಗಿ ಯಾರಾದರೂ ಅಂತಹ ಹೇಳಿಕೆ ನೀಡುವುದು ಹೇಗೆ ಸಾಧ್ಯ? ಇದು ಸರಿಯಲ್ಲ’ ಎಂದು ಹೇಳಿತ್ತು ಎಂದರು.
೨. ಆರೋಪಿಯ ವಕೀಲರು, ಉಚ್ಚ ನ್ಯಾಯಾಲಯದ ತೀರ್ಪು ಪ್ರಕಟವಾಗುವವರೆಗೆ ಅಥವಾ ಸರಕಾರಿ ವಕೀಲರು ಹೇಳಿಕೆ ನೀಡುವವರೆಗೆ ಆರೋಪ ನಿಗದಿಪಡಿಸುವುದನ್ನು ಮುಂದೂಡುವಂತೆ ವಿನಂತಿಸಿದರು; ಆದರೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಕಟ್ಟುನಿಟ್ಟಾಗಿ, ‘ಯಾವುದೇ ಪ್ರಕರಣದಲ್ಲಿ 4 ವಾರಗಳೊಳಗೆ ಆರೋಪಗಳನ್ನು ನಿಗದಿಪಡಿಸಲು ಉಚ್ಚ ನ್ಯಾಯಾಲಯವು ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ’ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!