ನಮ್ಮ ದೇಶ ಭಯೋತ್ಪಾದಕ ದಾಳಿಯ ಕರಿನೆರಳಿನಲ್ಲಿದೆ ಎಂಬ ಸ್ಥಿತಿ ಮುಂದುವರೆದಿದೆ! – ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು

ಪುಣೆಯಲ್ಲಿ ‘ಸಿಂಘಲ್ ಫೌಂಡೇಶನ್’ ಆಯೋಜಿಸಿದ ‘ಭಾರತಾತ್ಮ ವೇದ ಪುರಸ್ಕಾರ’ ಸಮಾರಂಭ ನೆರವೇರಿತು!

ಪುಣೆ – ‘ಭಾರತವು ಭಯೋತ್ಪಾದಕರ ವಿರುದ್ಧ ಕೈಗೊಂಡ ‘ಆಪರೇಷನ್ ಸಿಂದೂರ್’ ಮತ್ತು ಇತರ ಕಾರ್ಯಾಚರಣೆಗಳಿಂದಾಗಿ ದೆಹಲಿಯಲ್ಲಿ ಭಯೋತ್ಪಾದಕರು ದಾಳಿ ನಡೆಸಿದರು’ ಎಂಬ ತೀರ್ಮಾನಕ್ಕೆ ಬರುವುದು ತಪ್ಪಾಗಿದೆ. ದೆಹಲಿಯಲ್ಲಿ ದೊಡ್ಡ ಸ್ಫೋಟ ನಡೆಸುವ ಸಂಚು ಇತ್ತು; ಆದರೆ ಗುಪ್ತಚರ ಸಂಸ್ಥೆಗಳು ಅದನ್ನು ಸಮಯಕ್ಕೆ ಸರಿಯಾಗಿ ತಡೆದವು. ದ್ವೇಷದಿಂದ ಭಯೋತ್ಪಾದನೆ ಹುಟ್ಟುತ್ತದೆ ಎಂಬುದು ಈ ದಾಳಿಯಲ್ಲಿ ಭಾಗವಹಿಸಿದ ವೈದ್ಯರಿಂದ ಸ್ಪಷ್ಟವಾಗಿದೆ. ದೇಶದ ಗಡಿಗಳು ಸುರಕ್ಷಿತವಾಗಿಲ್ಲ ಮತ್ತು ನಮ್ಮ ದೇಶ ಭಯೋತ್ಪಾದಕ ದಾಳಿಗಳ ನೆರಳಿನಲ್ಲಿದೆ ಎಂಬ ಸ್ಥಿತಿ ಮುಂದುವರೆದಿದೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭವಿಷ್ಯದ ಸಂಕಷ್ಟಗಳನ್ನು ಗುರುತಿಸಿ ಕೆಲಸಗಳನ್ನು ವಿಭಜಿಸಬೇಕು, ಇತರ ಜನರ ಮೇಲೆ ಜವಾಬ್ದಾರಿಯನ್ನು ವಹಿಸಬೇಕು ಎಂದು ‘ಶ್ರೀ ರಾಮಜನ್ಮಭೂಮಿ ಮಂದಿರ ನ್ಯಾಸ’ದ ಕೋಶಾಧ್ಯಕ್ಷ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು ಅಭಿಪ್ರಾಯಪಟ್ಟರು. ‘ಸಿಂಘಲ್ ಫೌಂಡೇಶನ್’ ವತಿಯಿಂದ ‘ಭಾರತಾತ್ಮ ವೇದ ಪುರಸ್ಕಾರ’ವನ್ನು ದಾದಾಸಾಹೇಬ ದರೋಡೆ ಸಭಾಂಗಣದಲ್ಲಿ ಆಚಾರ್ಯ ಪ್ರದ್ಯುನ್ಮ ಮಹಾರಾಜ ಅವರ ಹಸ್ತದಿಂದ ವಿತರಿಸಲಾಯಿತು. ಈ ಸಮಾರಂಭದ ನಂತರ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

‘ಶ್ರೇಷ್ಠ ವೈದಿಕ ವಿದ್ಯಾರ್ಥಿ’ ಪುರಸ್ಕಾರವನ್ನು ಗೌರಿ ಕೇದಾರೇಶ್ವರ ಶರ್ಮಾ ಅವರಿಗೆ, ‘ಆದರ್ಶ ವೈದಿಕ ಶಿಕ್ಷಕ’ ಪುರಸ್ಕಾರವನ್ನು ಅನಂತ ಕೃಷ್ಣ ಭಟ್ಟ ಅವರಿಗೆ, ಮತ್ತು ‘ಶ್ರೇಷ್ಠ ವೈದಿಕ ಸಂಸ್ಥೆ’ ಪುರಸ್ಕಾರವನ್ನು ‘ದತ್ತಾತ್ರೇಯ ವೇದವಿದ್ಯಾ ಗುರುಕುಲಂ’ (ಆಂಧ್ರಪ್ರದೇಶ) ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಜಯ ಸಿಂಘಲ, ರವೀಂದ್ರ ಮುಳ್ಯೆ ಮುಂತಾದವರು ಉಪಸ್ಥಿತರಿದ್ದರು.

ದಾಳಿಯಲ್ಲಿ ಗುಪ್ತಚರ ಸಂಸ್ಥೆಯವರೇ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ತನಿಖೆಯೂ ಮುಖ್ಯವಾಗಿದೆ!

ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು ಮಾತು ಮುಂದುವರೆಸಿ, ಈ ದಾಳಿಯಲ್ಲಿ ಆಧುನಿಕ ವೈದ್ಯರ ಪಾಲ್ಗೊಳ್ಳುವಿಕೆ ಇದ್ದು, ಶಿಕ್ಷಿತ ವರ್ಗ ಮೌನವಾಗಿದೆ. ಇದರಿಂದ ಇದು ಒಂದು ದೊಡ್ಡ ಷಡ್ಯಂತ್ರದಂತೆ ಭಾಸವಾಗುತ್ತದೆ. ದಾಳಿಯಲ್ಲಿ ಭಾಗಿ ಆದವರು ಆಧುನಿಕ ವೈದ್ಯರನ್ನಾಗಿ ಮಾಡಿದ್ದು ಯಾರು? ಅದಕ್ಕಾಗಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದು ಯಾರು? ಅನುಮತಿ ನೀಡಿದ್ದು ಯಾರು? ಕಾಲೇಜುಗಳಲ್ಲಿ ಏನು ನಡೆಯುತ್ತಿತ್ತು? ಇದರ ಬಗ್ಗೆ ಕಾಲಕಾಲಕ್ಕೆ ತನಿಖೆ ಏಕೆ ನಡೆಯಲಿಲ್ಲ?, ಈ ಎಲ್ಲ ವಿಷಯಗಳ ಬಗ್ಗೆ ಯೋಚಿಸುವ ಸಮಯ ಬಂದಿದೆ. ಈ ದಾಳಿಯ ಆಳಕ್ಕೆ ಹೋಗಲು ತನಿಖಾ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ಈ ದಾಳಿಯಲ್ಲಿ ಗುಪ್ತಚರ ಸಂಸ್ಥೆಯ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ತನಿಖೆಯೂ ಮುಖ್ಯವಾಗಿದೆ.