ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸಲ್ಮಾನ ಟ್ಯಾಕ್ಸಿ ಚಾಲಕನಿಂದ ಹಿಂದೂ ಟ್ಯಾಕ್ಸಿ ಚಾಲಕನ ಮೇಲೆ ಮಚ್ಚಿನಿಂದ ದಾಳಿಗೆ ಯತ್ನ

ಬೆಂಗಳೂರು – ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೊಹೇಲ್ ಅಹಮದ ಎಂಬ ಟ್ಯಾಕ್ಸಿ ಚಾಲಕನು ಜಗದೀಶ ಎಂಬ ಟ್ಯಾಕ್ಸಿ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಪೊಲೀಸರು ಸೊಹೇಲ್‌ ನನ್ನು ಬಂಧಿಸಿದ್ದಾರೆ. ಈ ಘಟನೆ ನವೆಂಬರ್ 16ರ ತಡರಾತ್ರಿ ಟರ್ಮಿನಲ್ 2ರ ಪ್ರವೇಶದ್ವಾರದಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಸೊಹೇಲ್ ಮತ್ತು ಜಗದೀಶ ನಡುವೆ ವಾಗ್ವಾದ ನಡೆದಿತ್ತು, ಅದರಿಂದಾಗಿ ಈ ಘಟನೆ ಸಂಭವಿಸಿದೆ.

ಸೊಹೇಲ್ ವಿಮಾನ ನಿಲ್ದಾಣದ ಆವರಣಕ್ಕೆ ಮಚ್ಚಿನೊಂದಿಗೆ ಹೇಗೆ ತಲುಪಿದನು?

ಆರೋಪಿ ಸೊಹೇಲ್ ದೊಡ್ಡ ಮಚ್ಚಿನೊಂದಿಗೆ ವಿಮಾನ ನಿಲ್ದಾಣಕ್ಕೆ ಹೇಗೆ ತಲುಪಿದನು? ಅದನ್ನು ಅವನು ಎಲ್ಲಿಂದ ಖರೀದಿಸಿದನು? ಅದನ್ನು ಅಲ್ಲಿಗೆ ಏಕೆ ತಂದನು? ಮತ್ತು ಅವನ ನಿಜವಾದ ಉದ್ದೇಶ ಏನು ಆಗಿತ್ತು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಈಗ ಅವನ ಇತಿಹಾಸವನ್ನು ಪರಿಶೀಲಿಸುತ್ತಿದ್ದಾರೆ.

ಜಗಳಕ್ಕೆ ಕಾರಣವೇನು?

ಟರ್ಮಿನಲ್‌ ನಲ್ಲಿ ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ ಜಗದೀಶ ಎಂಬ ಚಾಲಕನು ಒಬ್ಬ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಮುಂದೆ ಬಂದನು. ಇದರಿಂದ ಸೊಹೇಲ್‌ ಗೆ ಕೋಪ ಬಂದು, ಆ ಪ್ರಯಾಣಿಕರನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳತೊಡಗಿದನು. ಇದರಿಂದ ಇಬ್ಬರು ಚಾಲಕರ ನಡುವೆ ಜಗಳ ಪ್ರಾರಂಭವಾಯಿತು ಮತ್ತು ನಂತರ ಸೊಹೇಲ್ ಮಚ್ಚುವನ್ನು ಹೊರತೆಗೆದನು. (ಮತಾಂಧ ಮುಸಲ್ಮಾನರ ಈ ದಾದಾಗಿರಿ ಹಿಂದೂಗಳ ಸಂದರ್ಭದಲ್ಲಿ ಎಲ್ಲೆಡೆ ಕಂಡುಬರುತ್ತದೆ ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಅವರಿಗೆ ಇನ್ನಷ್ಟು ಧೈರ್ಯ ಬರುತ್ತದೆ. ಹೀಗಿರುವಾಗ, ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ ಎಂಬ ಕೂಗು ಎಬ್ಬಿಸಲಾಗುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಹಿರಂಗವಾಗಿ ಮಚ್ಚು ತೆಗೆದುಕೊಂಡು ಬಂದು ದಾಳಿ ಮಾಡಲು ಪ್ರಯತ್ನಿಸಲಾಗಿದೆ ಎಂದರೆ, ಅಲ್ಲಿನ ಭದ್ರತಾ ವ್ಯವಸ್ಥೆ ಸಡಿಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ!