ಗಿರ್ ಸೋಮನಾಥ್‌ನ ಕಚ್ಛಿ ಪೀರ್ ದರ್ಗಾ ಮೇಲೆ ಪೊಲೀಸರ ದಾಳಿ! – Police Raid Kachchi Peer Dargah

  • ಕತ್ತಿಗಳು, ಖಡ್ಗಗಳು, ಚಾಕುಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆ!

  • ದರ್ಗಾದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಸ್ಲಿಂ ಮಹಿಳೆಯ ಬಂಧನ!

ಸೋಮನಾಥ (ಗುಜರಾತ್) – ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಕೋಡಿನಾರ್‌ನಲ್ಲಿರುವ ಕಚ್ಛಿ ಪೀರ್ ದರ್ಗಾ ಮೇಲೆ ಗುಜರಾತ್ ಪೊಲೀಸರು ದಾಳಿ ನಡೆಸಿದರು. ಈ ದಾಳಿಯ ಸಂದರ್ಭದಲ್ಲಿ ಪೊಲೀಸರಿಗೆ ಕತ್ತಿಗಳು, ಖಡ್ಗಗಳು, ಚಾಕುಗಳು ಸೇರಿದಂತೆ ಹಲವು ಮಾರಕ ಶಸ್ತ್ರಾಸ್ತ್ರಗಳು ದೊರೆತಿವೆ.

ಪೊಲೀಸರು ಪ್ರಕರಣ ದಾಖಲಿಸಿ, ದರ್ಗಾದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಮಿನಶಾ ಇಸ್ಮಾಯಿಲ್‌ಶಾ ಕನೌಜಿಯಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸರು ಅಮಿನಶಾ ಇಸ್ಮಾಯಿಲ್‌ಶಾಳಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹದ ಕುರಿತು ವಿಚಾರಿಸಿದಾಗ, ಆಕೆ ಯಾವುದೇ ಅಧಿಕೃತ ಪುರಾವೆಯನ್ನು ತೋರಿಸಲು ಸಾಧ್ಯವಾಗಲಿಲ್ಲ. ನಂತರ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳು ದರ್ಗಾವನ್ನು ಹೇಗೆ ತಲುಪಿದವು ಎಂಬುದರ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

‘ದರ್ಗಾಗಳು ಮತ್ತು ಮಸೀದಿಗಳು ಈಗ ಭಯೋತ್ಪಾದಕರಿಗೆ ಅಡಗಿಕೊಳ್ಳುವ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕೇಂದ್ರಗಳಾಗುತ್ತಿವೆ’ ಎಂದು ಯಾರಿಗಾದರೂ ಅನಿಸಿದರೆ ತಪ್ಪೇನು?’