ಉತ್ತರ ಪ್ರದೇಶದ ಶಾಲೆಗಳಲ್ಲಿ 10 ದಿನಗಳ ಕಾಲ ಪುಸ್ತಕದ ಚೀಲವಿಲ್ಲದೆ ವಿದ್ಯಾರ್ಥಿಗಳ ತರಗತಿ! – Classes Without School Bags For 10 Days In UP

ಅಧ್ಯಯನದ ಭಾರ ಕಡಿಮೆ ಮಾಡಿ, ಶಿಕ್ಷಣವನ್ನು ಹೆಚ್ಚು ಆನಂದದಾಯಕವಾಗಿಸುವುದರ ಮೇಲೆ ಸರಕಾರದ ಒತ್ತು

ಲಖನೌ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ವಿದ್ಯಾರ್ಥಿಗಳ ಅಧ್ಯಯನದ ಹೊರೆಯನ್ನು ಕಡಿಮೆ ಮಾಡಿ, ಶಿಕ್ಷಣವನ್ನು ಹೆಚ್ಚು ಆನಂದದಾಯಕವಾಗಿಸುವುದರ ಮೇಲೆ ಒತ್ತು ನೀಡಿದೆ. ಈ ಉಪಕ್ರಮದ ಅಡಿಯಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿ 10 ದಿನಗಳ ಕಾಲ ಪುಸ್ತಕದ ಚೀಲವಿಲ್ಲದೆಯೇ ತರಗತಿಗಳನ್ನು ನಡೆಸಲಾಗುವುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳ ಬದಲು ಆಟ, ಚಟುವಟಿಕೆಗಳು ಮತ್ತು ಪ್ರತ್ಯಕ್ಷ ಅನುಭವಗಳ ಮೂಲಕ ಕಲಿಯುವ ಅವಕಾಶ ಸಿಗಲಿದೆ. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಈ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.

1. 6ನೇ ತರಗತಿಯಿಂದ 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಡೀ ವರ್ಷದಲ್ಲಿ 10 ದಿನ ಪುಸ್ತಕದ ಚೀಲವಿಲ್ಲದೆ ಶಾಲೆಗೆ ಹೋಗುವುದು ಕಡ್ಡಾಯಗೊಳಿಸಲಾಗಿದೆ.

2. ಶನಿವಾರದಂದು ಈ ತರಗತಿಗಳ ವಿದ್ಯಾರ್ಥಿಗಳನ್ನು ಆಟಗಳು, ಕಲೆ, ಪ್ರವಾಸ, ಭಾಷಣ ಮತ್ತು ಚರ್ಚಾಕೂಟಗಳಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುವುದು.

3. ಇದರ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಅವರನ್ನು ಒತ್ತಡದಿಂದ ಮುಕ್ತವಾಗಿಡುವುದು ಆಗಿದೆ.

ಸಂಪಾದಕೀಯ ನಿಲುವು

ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಇಡೀ ಜೀವನವೇ ಆನಂದಮಯವಾಗಲು, ಅವರಿಗೆ ಈಗಿನಿಂದಲೇ ಸಾಧನೆಯನ್ನು ಕಲಿಸಿರಿ!