ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಕಾರ್ಯಕ್ರಮಗಳ ಆಯೋಜನೆಯಲ್ಲಿ ವೇಗವಾಗಿ ಹೆಚ್ಚಳ! : Fazal Ur Rehman

ಫಜ್ಲುರ್ ರೆಹಮಾನ್

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮಹಮದ ಯೂನಸ್ ಸರಕಾರದ ಆಡಳಿತದಲ್ಲಿ, ದೇಶದಲ್ಲಿ ಇಸ್ಲಾಮಿಕ್ ಕಾರ್ಯಕ್ರಮಗಳ ಆಯೋಜನೆಯಲ್ಲಿ ವೇಗವಾಗಿ ಹೆಚ್ಚಳವಾಗುತ್ತಿದೆ. ಇದಕ್ಕಾಗಿ ಮಹಮದ ಯೂನಸ್ ಅವರು ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಮೊದಲಿನಿಂದಲೂ ಬಾಂಗ್ಲಾದೇಶಕ್ಕೆ ಬರುತ್ತಿದ್ದರು. ಈಗ ಪಾಕಿಸ್ತಾನದ ಕಟ್ಟರ್ ಇಸ್ಲಾಮಿಕ್ ಪಕ್ಷ ‘ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್’ ನ ಮುಖ್ಯಸ್ಥ ಮೌಲಾನಾ ಫಜಲೂರ್ ರೆಹಮಾನ್ ಅವರು ಢಾಕಾದಲ್ಲಿ ನಡೆದ ದೊಡ್ಡ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವಿನ ಧಾರ್ಮಿಕ ಸಂಬಂಧವನ್ನು ಉಲ್ಲೇಖಿಸಿ, ಎರಡೂ ದೇಶಗಳ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಕರೆ ನೀಡಿದರು. ಇಸ್ಲಾಂ ಧರ್ಮವೇ ಎರಡೂ ದೇಶಗಳನ್ನು ಜೋಡಿಸುವ ಮುಖ್ಯ ಸೂತ್ರ ಎಂದು ಅವರು ಒತ್ತಿ ಹೇಳಿದರು. (ಮುಸಲ್ಮಾನರು ಮೊದಲು ಮುಸಲ್ಮಾನರಾಗುತ್ತಾರೆ ಮತ್ತು ನಂತರ ಯಾವ ದೇಶದ ನಾಗರಿಕರಾಗುತ್ತಾರೆ ಎಂಬುದು ಇದೇ ಕಾರಣದಿಂದ ಸ್ಪಷ್ಟವಾಗುತ್ತದೆ! – ಸಂಪಾದಕರು)

ಫಜಲೂರ್ ರೆಹಮಾನ್ ಅವರು ಮಾತನಾಡುತ್ತಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸಲ್ಮಾನರು ಒಂದು ಉಮ್ಮಾಹ್‌ನ (ಜಾಗತಿಕ ಇಸ್ಲಾಮಿಕ್ ಸಮುದಾಯ) ಘಟಕಗಳಾಗಿದ್ದಾರೆ. ಅವರು ಬಾಂಗ್ಲಾದೇಶವು ಒಂದು ಹೆಜ್ಜೆ ಮುಂದಿಟ್ಟರೆ, ಪಾಕಿಸ್ತಾನ ಎರಡು ಹೆಜ್ಜೆ ಮುಂದಿಡುತ್ತದೆ ಎಂದು ಭರವಸೆ ನೀಡಿದರು. ಎರಡೂ ದೇಶಗಳ ನಡುವಿನ ಸೌಹಾರ್ದ ಮತ್ತು ಆತ್ಮೀಯತೆ ಮುಂದೆಯೂ ಮುಂದುವರಿಯುತ್ತದೆ ಎಂದರು.