|

ಮುಂಬಯಿ – ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೇಂದ್ರವಾಗಿದ್ದ ಮತ್ತು ಕೋಟಿಗಟ್ಟಲೆ ಭಾರತೀಯರಲ್ಲಿ ಕ್ರಾಂತಿಯ ಜ್ವಾಲೆಯನ್ನು ಹೊತ್ತಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಜ್ಯಾದ್ಯಂತ ಒಂದು ವಾರ ವಿಶೇಷ ‘ರಾಷ್ಟ್ರಭಕ್ತಿ ಜಾಗರಣ ಉಪಕ್ರಮ’ವನ್ನು ನಡೆಸಲಾಯಿತು. ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಸಂಪೂರ್ಣ ‘ವಂದೇ ಮಾತರಂ’ ಗಾಯನದ ಮೂಲಕ ನಾಗರಿಕರು ಮಾತೃಭೂಮಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
೧. ಈ ಉಪಕ್ರಮಕ್ಕೆ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಿಂದ ಸ್ವಯಂಪ್ರೇರಿತ ಪ್ರತಿಕ್ರಿಯೆ ವ್ಯಕ್ತವಾಯಿತು. ಸತಾರಾ, ಸೋಲಾಪುರ, ಕೊಲ್ಲಾಪುರ, ಪುಣೆ, ಅಹಿಲ್ಯಾನಗರ, ರತ್ನಗಿರಿ, ಮುಂಬಯಿ ಮುಂತಾದ ಸ್ಥಳಗಳಲ್ಲಿ ನಾಗರಿಕರು ರಾಷ್ಟ್ರಧ್ವಜ ಮತ್ತು ಕ್ರಾಂತಿಕಾರಿಗಳ ಫಲಕಗಳನ್ನು ಕೈಯಲ್ಲಿ ಹಿಡಿದು ‘ವಂದೇ ಮಾತರಂ’ ಘೋಷಣೆ ಮೊಳಗಿಸಿದರು. ಮಹಾರಾಷ್ಟ್ರದ ಜೊತೆಗೆ ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲೂ ಈ ಉಪಕ್ರಮವನ್ನು ನಡೆಸಲಾಯಿತು.
೨. ಮಹಾರಾಷ್ಟ್ರದ ೬೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಾದ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ೫ ಸಾವಿರಕ್ಕೂ ಹೆಚ್ಚು ರಾಷ್ಟ್ರಭಕ್ತ ನಾಗರಿಕರು, ಮಾಜಿ ಸೈನಿಕರು, ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ವಿವಿಧ ಸಾಮಾಜಿಕ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಕೊಲ್ಲಾಪುರದಲ್ಲಿ ಶಾಸಕ ರಾಜೇಶ್ ಕ್ಷೀರಸಾಗರ ಮತ್ತು ಇತರ ಗಣ್ಯರು ಈ ಉಪಕ್ರಮವನ್ನು ಉದ್ಘಾಟಿಸಿ ದೇಶಭಕ್ತಿಯ ಸಂದೇಶ ನೀಡಿದರು.
‘ವಂದೇ ಮಾತರಂ’ನ ಪ್ರೇರಣೆ ಮುಂದಿನ ಪೀಳಿಗೆಗೂ ತಲುಪಲಿ! – ಹಿಂದೂ ಜನಜಾಗೃತಿ ಸಮಿತಿ
ಈ ಸಂಬಂಧ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ್ ಅವರು, ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ‘ವಂದೇ ಮಾತರಂ’ ಈ ಗೀತೆಯು ಇಂದು ಅಂದರೆ ೧೫೦ ವರ್ಷಗಳ ನಂತರವೂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ರಾಷ್ಟ್ರಪ್ರೇಮದ ಜ್ವಾಲೆಯನ್ನು ಹೊತ್ತಿಸುತ್ತಿದೆ. ಈ ಗೀತೆಯ ಪ್ರೇರಣೆ ಮುಂದಿನ ಪೀಳಿಗೆಯವರಿಗೆ ತಲುಪಲಿ, ಇದಕ್ಕಾಗಿ ನಾವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂಪೂರ್ಣ ‘ವಂದೇ ಮಾತರಂ’ ಹಾಡಬೇಕು ಎಂದು ಕರೆ ನೀಡುತ್ತಿದ್ದೇವೆ, ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!