|

ಭೋಪಾಲ್ (ಮಧ್ಯಪ್ರದೇಶ) – ರಾಜಾ ರಾಮ್ ಮೋಹನ್ ರಾಯ್ ಅವರು ಬ್ರಿಟಿಷರ ಏಜೆಂಟ್ ಆಗಿದ್ದರು. ಅವರು ಇಂಗ್ಲೆಂಡ್ ದೇಶದ ಏಜೆಂಟ್ ಆಗಿ ಕೆಲಸ ಮಾಡಿದರು. ಅಷ್ಟೇ ಅಲ್ಲದೇ, ಅವರು ಭಾರತದಲ್ಲಿ ಮತಾಂತರದಂತಹ ಕೆಲಸಗಳನ್ನು ಪ್ರಾರಂಭಿಸಿದರು. ರಾಜಾ ರಾಮ್ ಮೋಹನ್ ರಾಯ್ ಅವರನ್ನು ತಡೆಯಲು ಯಾರಾದರೂ ಧೈರ್ಯ ತೋರಿಸಿದ್ದರೆ, ಅದು ಬಿರ್ಸಾ ಮುಂಡಾ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರಮಾರ್ ಹೇಳಿದ್ದಾರೆ. ಅವರು ಬಿರ್ಸಾ ಮುಂಡಾ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬ್ರಿಟಿಷರಿಂದ ಮಿಷನರಿ ಶಿಕ್ಷಣದ ನೆಪದಲ್ಲಿ ಹಿಂದೂಗಳ ಮತಾಂತರ!
ಶಿಕ್ಷಣ ಸಚಿವ ಇಂದರ್ ಸಿಂಗ್ ಪರಮಾರ್ ಅವರು ಮುಂದೆ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಮಿಷನರಿ ಶಾಲೆಗಳಿದ್ದವು. ಆ ಶಾಲೆಗಳ ಮೂಲಕ ಮತಾಂತರ ನಡೆಯುತ್ತಿತ್ತು. ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಮತಾಂತರಿಸಲಾಗುತ್ತಿತ್ತು. ಬಿರ್ಸಾ ಮುಂಡಾ ಅವರು ಈ ವಿಷಯವನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ, ತಮ್ಮ ಸಮುದಾಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡುವ ಧೈರ್ಯ ತೋರಿಸಿದರು. ಬಿರ್ಸಾ ಮುಂಡಾ ಅವರಿಗೆ ಶಿಕ್ಷಣ ಪಡೆಯಬೇಕಿತ್ತು; ಆದರೆ ಆಗ ಕೇವಲ ಮಿಷನರಿ ಶಾಲೆಗಳಿದ್ದವು. ಶಿಕ್ಷಣ ಪಡೆಯುವಾಗ, ಶಿಕ್ಷಣದ ನೆಪದಲ್ಲಿ ಬ್ರಿಟಿಷರು ಮತಾಂತರ ಮಾಡುತ್ತಿದ್ದಾರೆಂಬುದು ಅವರಿಗೆ ಅರಿವಾಯಿತು. ಆದ್ದರಿಂದ ಬಿರ್ಸಾ ಮುಂಡಾ ಅವರು ಆ ಮಿಷನರಿ ಶಾಲೆಯನ್ನು ತೊರೆದರು. ನಂತರ ಅವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟರು ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದರು.
ಪರಮಾರ್ ಅವರನ್ನು ಟೀಕಿಸಿದ ಕಾಂಗ್ರೆಸ್
ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಅವರು ಪರಮಾರ್ ಅವರ ಹೇಳಿಕೆಯನ್ನು ಖಂಡಿಸಿ, ರಾಜಾ ರಾಮ್ ಮೋಹನ್ ರಾಯ್ ಅವರು ಸಮಾಜ ಸುಧಾರಕರಾಗಿದ್ದರು. ಸತಿ ಪದ್ಧತಿಯನ್ನು ನಿಲ್ಲಿಸುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಇದನ್ನು ಬ್ರಿಟಿಷರ ಏಜೆಂಟಗಿರಿ ಎನ್ನುತ್ತೀರಾ? ಯಾರು ಬ್ರಿಟಿಷರ ಏಜೆಂಟ್ ಆಗಿದ್ದರೋ, ಅವರೇ ಇಂದು ರಾಜಾ ರಾಮ್ ಮೋಹನ್ ರಾಯ್ ಅವರನ್ನು ಟೀಕಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಪರಮಾರ್ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷಕ್ಕೆ ಸಂಬಂಧವಿಲ್ಲ! – ಭಾಜಪ
ರಾಜಾ ರಾಮ್ ಮೋಹನ್ ರಾಯ್ ಅವರ ಬಗ್ಗೆ ಪರಮಾರ್ ನೀಡಿದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದಕ್ಕೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಬಿಜೆಪಿ ಯಾವಾಗಲೂ ದೇಶಕ್ಕೆ ಕೊಡುಗೆ ನೀಡಿದ ಸಮಾಜ ಸುಧಾರಕರನ್ನು ಗೌರವಿಸಿದೆ. ಪರಮಾರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ತಪ್ಪಾಗಿ ಅರ್ಥೈಸಿದೆ ಎಂದು ಬಿಜೆಪಿಯ ಮಧ್ಯಪ್ರದೇಶದ ವಕ್ತಾರ ಶಿವಮ್ ಶುಕ್ಲಾ ಸ್ಪಷ್ಟಪಡಿಸಿದರು.
ಸಂಪಾದಕೀಯ ನಿಲುವುಈ ಹೇಳಿಕೆಯ ಸತ್ಯಾಂಶವನ್ನು ದೇಶದ ಮುಂದೆ ತರಬೇಕು. ಪರಮಾರ್ ಹೇಳುವುದು ನಿಜವಾಗಿದ್ದರೆ, ಇಲ್ಲಿಯವರೆಗೆ ಸುಳ್ಳು ಇತಿಹಾಸವನ್ನು ದೇಶದ ಮುಂದೆ ಮಂಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!