
ಮುಂಬಯಿ – ಮಾಲ್ವಣಿ ನಂತರ ಈಗ ದಕ್ಷಿಣ ಮುಂಬಯಿನಲ್ಲಿಯೂ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರು ಪತ್ತೆಯಾಗಿದ್ದಾರೆ. ಗಿರ್‌ಗಾಂವ್‌ನಲ್ಲಿ ಒಬ್ಬ ತರಕಾರಿ ವ್ಯಾಪಾರಿಯಾಗಿರುವ ರೋಹಿಂಗ್ಯಾ ನುಸುಳುಕೋರ ಸ್ಥಳೀಯ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದರ ನಂತರ ಮುಂಬಯಿನ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಬೇಡಿಕೆ ಇಡುತ್ತಿದ್ದಾರೆ. ಈ ಪ್ರಕರಣದ ನಂತರ, ರಾಜ್ಯ ಕೌಶಲ್ಯ ಅಭಿವೃದ್ಧಿ ಸಚಿವರು ಮತ್ತು ಮುಂಬಯಿ ಉಪನಗರದ ಸಹ-ಪಾಲಕ ಸಚಿವರಾದ ಮಂಗಲ್ ಪ್ರಭಾತ ಲೋಧಾ ಅವರು ಮುಂಬಯಿ ಪೊಲೀಸ್ ಆಯುಕ್ತ ದೇವೇನ ಭಾರತಿ ಅವರನ್ನು ಭೇಟಿ ಮಾಡಿ, ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ಗಿರ್‌ಗಾಂವ್‌ನಲ್ಲಿನ ನುಸುಳುಕೋರರ ಬಳಿ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಎಲ್ಲಾ ಆಧಾರ್ ಕಾರ್ಡ್‌ಗಳಲ್ಲಿ ಒಂದೇ ರೀತಿಯ ಜನ್ಮ ದಿನಾಂಕ ಕಂಡುಬಂದಿದೆ. ಕೆಲವು ದಿನಗಳ ಹಿಂದೆ ಪಶ್ಚಿಮ ಮುಂಬಯಿ ಉಪನಗರದ ಮಾಲ್ವಣಿಯಲ್ಲಿರುವ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮುಂಬಯಿ ಮಹಾನಗರ ಪಾಲಿಕೆ ಆಡಳಿತದಿಂದ ಕ್ರಮ ಕೈಗೊಳ್ಳಲಾಗಿತ್ತು; ಆದರೂ ಮುಂಬಯಿನ ವಿವಿಧ ಭಾಗಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರು ಕಂಡುಬರುತ್ತಿದ್ದಾರೆ. ಈ ಕುರಿತು ಸಚಿವ ಮಂಗಲ್ ಪ್ರಭಾತ ಲೋಧಾ ಅವರು ಪೊಲೀಸ್ ಆಯುಕ್ತ ದೇವೇನ ಭಾರತಿ ಅವರಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ನುಸುಳುವಿಕೆಗೆ ಶಾಸಕ ಅಸ್ಲಂ ಶೇಖ್ ಅವರ ಬೆಂಬಲ ! – ಮಂಗಲ್ ಪ್ರಭಾತ ಲೋಧಾ, ಕೌಶಲ್ಯ ಅಭಿವೃದ್ಧಿ ಸಚಿವ
ಹೀಗಾದರೆ, ನುಸುಳುಕೋರರಿಗೆ ಬೆಂಬಲ ನೀಡುವವರನ್ನು ದೇಶದ ಶತ್ರುಗಳು ಎಂದು ಘೋಷಿಸಿ, ಅವರ ಮೇಲೆಯೂ ಏಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ? ಇದು ಜನರಿಗೆ ತಿಳಿಯಬೇಕು !
ಮಾಲ್ವಣಿಯಲ್ಲಿ ಕೆಡವಲಾದ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ಕಟ್ಟಡವನ್ನು ಮತ್ತೆ ನಿರ್ಮಿಸಲು ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಅವರು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಆಡಳಿತದಲ್ಲಿರುವ ಕೆಲವು ಹಿರಿಯ ಅಧಿಕಾರಿಗಳು ಸಹ ಇದಕ್ಕಾಗಿ ಅಸ್ಲಂ ಶೇಖ್ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ಪಡೆದು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಂಗಲ ಪ್ರಭಾತ ಲೋಧಾ ಹೇಳಿದ್ದಾರೆ.
ಸಂಪಾದಕೀಯ ನಿಲುವು
|
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!