ಪನವೇಲ್‌ ನಿಂದ ಛತ್ರಪತಿ ಶಿವಾಜಿ ಟರ್ಮಿನಸ್‌ ಲೋಕಲ್‌ನಲ್ಲಿ ಕ್ರೈಸ್ತ ಮಹಿಳೆಯಿಂದ ಬಹಿರಂಗ ಧರ್ಮಪ್ರಚಾರ !

ಪನವೇಲ – ಪನವೇಲ್‌ ನಿಂದ ಛತ್ರಪತಿ ಶಿವಾಜಿ ಟರ್ಮಿನಸ್‌ ಕಡೆಗೆ ಹೋಗುವ ಲೋಕಲ್ ರೈಲಿನಲ್ಲಿ ಓರ್ವ ಕ್ರೈಸ್ತ ಮಹಿಳೆಯು ಮಧುರವಾದ ಮತ್ತು ಎದುರಿಗಿರುವವರನ್ನು ಮರುಳು ಮಾಡುವಂತೆ ಮಾತನಾಡಿ ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಸಂಬಂಧಿಸಿದ ಮಹಿಳೆಯು ದೊಡ್ಡ ಧ್ವನಿಯಲ್ಲಿ ಪ್ರಯಾಣಿಕರಿಗೆ ಬೈಬಲ್‌ ನ ವಿಚಾರಗಳನ್ನು ಹೇಳುವುದನ್ನು ಕಾಣಬಹುದು; ಆದರೆ ಯಾರೂ ಮುಂದೆ ಬಂದು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿರುವ ಈ ಮತಾಂತರದ ಪ್ರಯತ್ನವನ್ನು ವಿರೋಧಿಸುತ್ತಿಲ್ಲ. ‘ಜೈ ಮಹಾರಾಷ್ಟ್ರ’ ಎಂಬ ವಾಹಿನಿಯು ಈ ಸುದ್ದಿಯನ್ನು ಪ್ರಕಟಿಸಿದೆ.

1. ಈ ಘಟನೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ‘ಬಹುಸಂಖ್ಯಾತ ಪ್ರಯಾಣಿಕರು ಹಿಂದೂಗಳಾಗಿರುವಾಗ ರೈಲ್ವೆ ಆಡಳಿತವು ಇದನ್ನು ಗಮನಿಸಿ ಕ್ರೈಸ್ತ ಧರ್ಮದ ಪ್ರಚಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ. ‘ಬಹುಸಂಖ್ಯಾತ ಹಿಂದೂ ಪ್ರಯಾಣಿಕರು ಇರುವ ಲೋಕಲ್‌ ನಲ್ಲಿ ಇಂತಹ ವರ್ತನೆ ಆಕ್ಷೇಪಾರ್ಹ ಮತ್ತು ಮಾನಸಿಕ ಕಿರುಕುಳ ನೀಡುವಂತದ್ದು’ ಎಂದೂ ಕೆಲವರು ಹೇಳಿದ್ದಾರೆ.

2. ಪುರುಷರ ಭೋಗಿಯಲ್ಲಿ ಹೋಗಿ ಈ ಮಹಿಳೆ ದೊಡ್ಡ ಧ್ವನಿಯಲ್ಲಿ, “ಯೇಸು ಜೀವಂತನಾಗಿದ್ದಾನೆ. ಯೇಸು ನನ್ನ ಪಾಪ, ನನ್ನ ನಾಚಿಕೆಯನ್ನು ತೆಗೆದುಕೊಂಡಿದ್ದಾನೆ. ಅವನು ಅನಂತ ಕಾಲ ಜೀವಂತನಾಗಿದ್ದಾನೆ. ಯಾರು ಅವನ ಮೇಲೆ ನಂಬಿಕೆ ಇಡುತ್ತಾರೋ ಅವರಿಗೆ ಸ್ವರ್ಗ ಸಿಗುತ್ತದೆ. ಯೇಸುವನ್ನು ತಮ್ಮವನ್ನಾಗಿಸಿ. ಅವನು ಎಲ್ಲರನ್ನೂ ಪ್ರೀತಿಸಿದ್ದಾನೆ, ಎಂದು ಹೇಳುತ್ತಾಳೆ. ಕಳೆದ ಒಂದೂಕಾಲು ತಿಂಗಳಿಂದ ಇದು ನಡೆಯುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

3. ಇನ್ನೊಬ್ಬ ಪುರುಷ ಕೂಡಾ ರೈಲ್ವೆ ನಿಲ್ದಾಣದಲ್ಲಿ ಮತಾಂತರದ ಕುರಿತು ಮಾತನಾಡುತ್ತಿರುತ್ತಾನೆ. ಕೆಲಸಕ್ಕೆ ಇರಿಸಿಕೊಂಡಂತೆ ಸರಕಾರಿ ಸ್ಥಳದಲ್ಲಿ ಪ್ರತಿದಿನ ಇಲ್ಲಿ ಕೆಲವರಿಂದ ಮತಾಂತರ ಮಾಡಲಾಗುತ್ತಿದೆ. ಹಿಂದೆ ಕದ್ದುಮುಚ್ಚಿ ನಡೆಯುತ್ತಿದ್ದ ಧರ್ಮಪ್ರಚಾರ ಈಗ ಬಹಿರಂಗವಾಗಿ ನಡೆಯುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಮೇಲಿನ ಈ ರೀತಿಯ ಘಟನೆಗಳಿಂದಾಗಿ ಪನವೇಲ್‌ ನಲ್ಲಿ ಕ್ರೈಸ್ತ ಮತಾಂತರದ ವಿಷಯವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಧಾರ್ಮಿಕ ಸಂವೇದನೆಗಳಿಗೆ ಸಂಬಂಧಿಸಿದ ವ್ಯಾಪಕವಾದ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ.

ಸಂಪಾದಕೀಯ ನಿಲುವು

  • ಲೋಕಲ್‌ ಟ್ರೈನ್‌ನಲ್ಲಿ ಹಿಂದೂಗಳು ಭಜನೆಗಳನ್ನು ಹೇಳಿದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಆಡಳಿತವು ಈ ಕ್ರೈಸ್ತ ಮಹಿಳೆಯ ಮೇಲೆ ಕ್ರಮ ಕೈಗೊಳ್ಳುವುದೇ?
  • ಲೋಕಲ್‌ನಲ್ಲಿ ಒಬ್ಬನೇ ಒಬ್ಬ ಹಿಂದೂ ಕೂಡಾ ಮುಂದೆ ಬಂದು ಈ ಮಹಿಳೆಯನ್ನು ತಡೆಯದಿರುವುದು ವಿಷಾದನೀಯ. ‘ನನಗೇಕೆ ಅದರ ಚಿಂತೆ?’ ಎಂಬ ಹಿಂದೂಗಳ ಈ ಮನಸಿಕತೆಯಿಂದಲೇ ಇಂದು ಸಾವಿರಾರು ಹಿಂದೂಗಳು ಮತಾಂತರಗೊಂಡಿದ್ದಾರೆ!
  • ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಈ ಮತಾಂತರ ಪ್ರಯತ್ನಗಳನ್ನು ರೈಲ್ವೆ ಆಡಳಿತವು ತಕ್ಷಣವೇ ತಡೆಗಟ್ಟಬೇಕು!