೨೦೨೭ರ ವರೆಗೆ ಭಾರತ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಲಿದೆ! – ‘ಮೂಡೀಸ್’ ಅಂದಾಜು – Moody Report India GDP

ಅಮೆರಿಕದ ಹೆಚ್ಚುವರಿ ಆಮದು ಸುಂಕದ ಭಾರತದ ಮೇಲೆ ಯಾವುದೇ ಪರಿಣಾಮವಿಲ್ಲ!

ನ್ಯೂಯಾರ್ಕ್ (ಅಮೆರಿಕ) – ಮುಂದಿನ ೨ ವರ್ಷಗಳವರೆಗೆ ಅಂದರೆ ೨೦೨೭ರ ವರೆಗೆ ‘ಜಿ-೨೦’ ದೇಶಗಳ ಸಮೂಹದಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಲಿದೆ. ಭಾರತದ ಅಭಿವೃದ್ಧಿ ದರವು ಶೇ. ೬.೫ರಷ್ಟು ಇರಲಿದೆ ಎಂದು ಅಮೆರಿಕದ ಸಂಸ್ಥೆ ‘ಮೂಡೀಸ್’ ಅಂದಾಜು ವ್ಯಕ್ತಪಡಿಸಿದೆ. ಮೂಡೀಸ್ ತನ್ನ ‘ಗ್ಲೋಬಲ್ ಮ್ಯಾಕ್ರೋ ಔಟ್‌ಲುಕ್ ೨೦೨೬-೨೭’ ಬಿಡುಗಡೆ ಮಾಡಿದೆ ವರದಿಯಲ್ಲಿ ಈ ಅಂದಾಜನ್ನು ಹೇಳಲಾಗಿದೆ. ಅಮೆರಿಕವು ಭಾರತದ ಮೇಲೆ ಹೇರಿದ ಶೇ. ೫೦ರಷ್ಟು ಹೆಚ್ಚುವರಿ ಸುಂಕದ ಯಾವುದೇ ಪರಿಣಾಮವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

೧. ‘ಮೂಡೀಸ್’ ವರದಿಯ ಪ್ರಕಾರ, ಭಾರತದಲ್ಲಿ ಮೂಲಸೌಕರ್ಯಗಳಲ್ಲಿ ಆಗುತ್ತಿರುವ ಹೂಡಿಕೆ, ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಮತ್ತು ರಫ್ತಿನಲ್ಲಿನ ವೈವಿಧ್ಯತೆ ಆರ್ಥಿಕ ಪ್ರಗತಿಗೆ ಬಲ ನೀಡುತ್ತಿವೆ.

೨. ಭಾರತೀಯ ರಫ್ತುದಾರರು ಜಾಣತನ ತೋರಿಸಿ ಹೊಸ ಮಾರುಕಟ್ಟೆಗಳನ್ನು ಕಂಡುಕೊಂಡಿದ್ದಾರೆ! ಈ ವರದಿಯಲ್ಲಿ ಮುಂದೆ ಹೇಳಿರುವಂತೆ, ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಶೇ. ೫೦ರಷ್ಟು ತೆರಿಗೆ ವಿಧಿಸಿದಾಗ, ಭಾರತೀಯ ರಫ್ತುದಾರರು ಜಾಣತನದಿಂದ ಹೊಸ ಮಾರುಕಟ್ಟೆಗಳನ್ನು ಕಂಡುಕೊಂಡರು. ಅಮೆರಿಕಕ್ಕೆ ಆಗುವ ರಫ್ತು ಶೇ. ೧೧.೯ರಷ್ಟು ಕುಸಿದರೂ, ಭಾರತದ ಒಟ್ಟು ರಫ್ತು ಸೆಪ್ಟೆಂಬರ್ ತಿಂಗಳಲ್ಲಿ ಶೇ. ೬.೭೫ರಷ್ಟು ಹೆಚ್ಚಾಯಿತು. ಅಂದರೆ ಭಾರತೀಯ ಆರ್ಥಿಕತೆಯು ಹಿಂದಿನಂತೆ ಯಾವುದೇ ಒಂದು ದೇಶದ ಮೇಲೆ ಅವಲಂಬಿತವಾಗಿಲ್ಲ. ಈ ಪ್ರಗತಿಯಲ್ಲಿ ದೇಶದ ಆಂತರಿಕ ನೀತಿಗಳ ಪಾತ್ರ ದೊಡ್ಡದಾಗಿದೆ.

೩. ‘ಮೂಡೀಸ್’ ಪ್ರಕಾರ, ರಿಸರ್ವ್ ಬ್ಯಾಂಕಿನ ನೀತಿಯಿಂದಾಗಿ ಹಣದುಬ್ಬರ ನಿಯಂತ್ರಣದಲ್ಲಿದೆ. ಬ್ಯಾಂಕ್ ಅಕ್ಟೋಬರ್‌ನಲ್ಲಿ ‘ರೆಪೋ ದರ’ (ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಹಣವನ್ನು ಪಡೆಯುವ ದರಕ್ಕೆ ‘ರೆಪೋ ದರ’ ಎಂದು ಕರೆಯಲಾಗುತ್ತದೆ.) ಬದಲಾಯಿಸಲಿಲ್ಲ. ಇದರಿಂದ ಪ್ರಗತಿಗೆ ಒಂದು ಉತ್ತಮ ವಾತಾವರಣ ಸಿದ್ಧವಾಗುತ್ತದೆ.

ಚೀನಾದ ಅಭಿವೃದ್ಧಿ ದರ ಕಡಿಮೆಯಾಗಬಹುದು!

ಚೀನಾದ ಅಭಿವೃದ್ಧಿ ದರವು ೨೦೨೫ರಲ್ಲಿ ಶೇ. ೫ರಷ್ಟು ಆಗಬಹುದು. ಇದು ಸರಕಾರದ ಸಹಾಯ ಮತ್ತು ರಫ್ತಿನ ಮೇಲೆ ಆಧಾರಿತವಾಗಿದೆ. ‘ಮೂಡೀಸ್’ ಅಂದಾಜಿನ ಪ್ರಕಾರ, ೨೦೨೭ರ ವರೆಗೆ ಚೀನಾದ ದರ ಕಡಿಮೆಯಾಗಿ ಶೇ. ೪.೨ರಷ್ಟು ಇರಲಿದೆ.