ಇದು ಮತಾಂತರ ಪ್ರಚಾರದ ಅಜೆಂಡಾ ಎಂದು ಸಂಸದ ಅನಿಲ್ ಬೊಂಡೆ ಅವರ ಆರೋಪ!

ಅಮರಾವತಿ – ನಗರದಲ್ಲಿ ‘ಇಸ್ಲಾಂ ಬಗ್ಗೆ ಕೇಳಿ?’ ಎಂಬ ಸಂದೇಶವಿರುವ ಫಲಕಗಳನ್ನು ಹಾಕಿರುವ ಕಾರಣದಿಂದಾಗಿ, ನಗರದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಫಲಕಗಳನ್ನು ‘ಇಸ್ಲಾಮಿಕ್ ಇನ್ಫರ್ಮೇಷನ್ ಸೆಂಟರ್’ (ಐಐಸಿ) ವತಿಯಿಂದ ಪಂಚವಟಿ ಚೌಕದಲ್ಲಿ ಹಾಕಲಾಗಿದ್ದು, ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಸಂಸದ ಡಾ. ಅನಿಲ್ ಬೊಂಡೆ ಅವರು ಈ ಫಲಕಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಫಲಕದ ಮೇಲೆ ಒಂದು ಸಂಪರ್ಕ ಸಂಖ್ಯೆ ಮತ್ತು ‘ಐಐಸಿ’ ಸಂಸ್ಥೆಯ ಲಾಂಛನವಿದೆ. ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ‘ಐಐಸಿ’ ವತಿಯಿಂದ ಹಾಕಿರುವ ಫಲಕಗಳಿಂದಾಗಿ ಚುನಾವಣೆಯ ಸಮಯದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ಫಲಕಕ್ಕೂ ಮೊದಲು, ಅಮರಾವತಿಯಲ್ಲಿ ‘ಐ ಲವ್ ಮಹಮ್ಮದ್’ ಫಲಕಗಳ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಇದು ಮತಾಂತರದ ಷಡ್ಯಂತ್ರ! – ಅನಿಲ್ ಬೊಂಡೆ, ಸಂಸದರು, ಭಾಜಪ
ಇದು ಮತಾಂತರದ ಷಡ್ಯಂತ್ರ. ನಗರದ ಶಾಲೆಗಳು ಮತ್ತು ಕಾಲೇಜುಗಳಿರುವ ಬಹುಸಂಖ್ಯಾತ ಹಿಂದೂ ಪ್ರಾಬಲ್ಯದ ಪ್ರದೇಶಗಳಲ್ಲಿ ಇಸ್ಲಾಂ ಬಗೆಗಿನ ಫಲಕಗಳನ್ನು ಹಾಕುವ ಮೂಲಕ, ಅಪ್ರಾಪ್ತ ಮಕ್ಕಳಲ್ಲಿ ಮತಾಂತರದ ಪ್ರಚಾರವನ್ನು ಹರಡುವ ‘ಅಜೆಂಡಾ’ವನ್ನು ಈ ಮೂಲಕ ಜಾರಿಗೊಳಿಸಲಾಗುತ್ತಿದೆ.
ಫಲಕದಲ್ಲಿನ ದೂರವಾಣಿ ಸಂಖ್ಯೆಗೆ ಪ್ರಶ್ನೆ ಕೇಳಿದಾಗ!
ಡಾ. ಅನಿಲ್ ಬೊಂಡೆ ಅವರು ಈ ಫಲಕದ ಮೇಲೆ ನೀಡಿದ್ದ ‘ಶುಲ್ಕರಹಿತ’ (Toll Free) ಸಂಖ್ಯೆಗೆ ನೇರವಾಗಿ ಕರೆ ಮಾಡಿ ಮಾಹಿತಿ ಪಡೆದರು. ಆಗ, ಈ ಸಂಸ್ಥೆಯನ್ನು ಭಾಗ್ಯನಗರ (ಹೈದರಾಬಾದ್) ನಿಂದ ನಡೆಸಲಾಗುತ್ತಿದ್ದು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸಂಸ್ಥೆಯ ಶಾಖೆಗಳಿವೆ ಎಂಬ ಮಾಹಿತಿ ಸಿಕ್ಕಿತು. ನಂತರ ಸಂಸದ ಅನಿಲ್ ಬೊಂಡೆ ಅವರು ‘ಯಾರನ್ನಾದರೂ ಕೊಲೆ ಮಾಡುವುದು ಇಸ್ಲಾಂನಲ್ಲಿ ಮಾನ್ಯವೇ?’ ಎಂಬ ಸ್ಪಷ್ಟ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಆ ಕಡೆಯಿಂದ ‘ಇಲ್ಲ’ ಎಂಬ ಉತ್ತರ ಬಂದ ನಂತರ, ಅನಿಲ್ ಬೊಂಡೆ ಅವರು ಆಕ್ರಮಕರಾದರು. ‘ಹಾಗಿದ್ದರೆ, ನೀವು ಅದೇ ಪ್ರಚಾರವನ್ನು ಫಲಕಗಳ ಮೂಲಕ ಏಕೆ ಮಾಡುತ್ತಿಲ್ಲ? ಮತ್ತು ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟಗಳನ್ನು ಏಕೆ ಖಂಡಿಸುತ್ತಿಲ್ಲ?’ ಎಂದು ಅನಿಲ್ ಬೊಂಡೆ ಪ್ರಶ್ನಿಸಿದರು; ಆದರೆ ಈ ಪ್ರಶ್ನೆಗಳಿಗೆ ಅವರಿಗೆ ಸಮರ್ಪಕ ಉತ್ತರ ಸಿಗಲಿಲ್ಲ.
ಫಲಕಗಳನ್ನು ಹಾಕಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ!
‘ಈ ಸಂಪೂರ್ಣ ಪ್ರಕರಣವನ್ನು ತಕ್ಷಣವೇ ದಾಖಲಿಸಿಕೊಂಡು, ಫಲಕಗಳನ್ನು ಹಾಕಿದವರು ಮತ್ತು ಇದರ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅನಿಲ್ ಬೊಂಡೆ ಅವರು ಪೊಲೀಸ್ ಆಯುಕ್ತ ಅರವಿಂದ್ ಚಾವರಿಯಾ ಅವರಿಗೆ ದೂರವಾಣಿ ಮೂಲಕ ಆಗ್ರಹಿಸಿದ್ದಾರೆ. (ಇಂತಹ ಆಗ್ರಹ ಯಾಕೆ ಮಾಡಬೇಕಾಗುತ್ತದೆ? ಪೊಲೀಸ್ ಮತ್ತು ಸರ್ಕಾರ’ ಜಾತ್ಯಾತೀತವಾಗಿರುವುದರಿಂದ ಅವರಿಗೆ ಇಂತಹ ಫಲಕಗಳು ಕಾಣಿಸುವುದಿಲ್ಲವೇ? – ಸಂಪಾದಕರು).
ಸಂಪಾದಕೀಯ ನಿಲುವುಈ ಧೂರ್ತ ಮತಾಂಧರ ಮತಾಂತರದ ಬಹಿರಂಗ ಷಡ್ಯಂತ್ರವನ್ನು ತಡೆಯಬೇಕು!* |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!