ಜೈ ಶ್ರೀರಾಮ್’ ಎಂದಿದ್ದಕ್ಕೆ ಪೆಣ್ (ರಾಯಗಡ) ನಲ್ಲಿರುವ ಅಪ್ರಾಪ್ತ ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ಶಿಕ್ಷಕನಿಂದ ಅಮಾನುಷವಾಗಿ ಥಳಿತ!

ರಾಯಗಡ, ನವೆಂಬರ್ 13 (ವರದಿ) – ತರಗತಿಯಲ್ಲಿ ‘ಜೈ ಶ್ರೀರಾಮ್’ ಎಂದಿದಕ್ಕೆ, ರಾಯಗಡ ಜಿಲ್ಲೆಯ ಪೆಣ್‌ನಲ್ಲಿರುವ ‘ನ್ಯೂ ಇಂಗ್ಲಿಷ್ ಸ್ಕೂಲ್, ಜೋಹೆ’ ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿದ್ದ ಹಿಂದೂ ವಿದ್ಯಾರ್ಥಿಗೆ ಜಮೀರ್ ಕುತುಬುದ್ದೀನ್ ಮೊಮಿನ್ ಎಂಬ ಶಿಕ್ಷಕನು ಅಮಾನುಷವಾಗಿ ಥಳಿಸಿದ್ದಾನೆ. ಈ ಘಟನೆಯ ನಂತರ, ಸ್ಥಳೀಯ ಹಿಂದೂ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗಿ ಮತಾಂಧ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಈ ಪ್ರಕರಣದಲ್ಲಿ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ದಾದರ್ ಸಾಗರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮತಾಂಧ ಜಮೀರ್ ಮೊಮಿನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ನವೆಂಬರ್ 11 ರಂದು ಸಂಭವಿಸಿದೆ.

‘ನ್ಯೂ ಇಂಗ್ಲಿಷ್ ಸ್ಕೂಲ್, ಜೋಹೆ’ ಶಾಲೆಯು ಕೊಲ್ಲಾಪುರದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ ನಡೆಸಲ್ಪಡುತ್ತದೆ. ನವೆಂಬರ್ 11 ರಂದು, ಪೆಣ್ ನಿವಾಸಿಯಾದ ಭಾನುದಾಸ್ ಪಾಟೀಲ್ ಅವರ ಮಗ ತರಗತಿಯಲ್ಲಿ ಇದ್ದಾಗ ಜಮೀರ್ ಕುತುಬುದ್ದೀನ್ ಮೊಮಿನ್ ತರಗತಿಗೆ ಬಂದು ತರಗತಿಯಲ್ಲಿ ತಮ್ಮ ಮೊಬೈಲ್ ಫೋನ್ ನೋಡುತ್ತಿರುವಾಗ, ತರಗತಿಯ ಮಕ್ಕಳಲ್ಲಿ ಯಾರೋ ‘ಜೈ ಶ್ರೀರಾಮ್’ ಎಂದು ಹೇಳಿದರು. ಭಾನುದಾಸ್ ಪಾಟೀಲ್ ಅವರ ಮಗನೇ ‘ಜೈ ಶ್ರೀರಾಮ್’ ಎಂದು ಜಯಘೋಷ ಮಾಡಿದನೆಂದು ತಿಳಿದು ಜಮೀರ್ ಮೊಮಿನ್ ಅವರು ಆ ಮಗುವಿಗೆ ಮುಷ್ಟಿಯಿಂದ ಅಮಾನುಷವಾಗಿ ಥಳಿಸಿದರು. ಈ ಥಳಿತದಿಂದ ಭಾನುದಾಸ್ ಪಾಟೀಲ್ ಅವರ ಮಗನ ಶರ್ಟ್ ಮತ್ತು ಪ್ಯಾಂಟ್ ಹರಿದುಹೋಯಿತು. ಶಾಲೆಯಲ್ಲಿ ನಡೆದ ಥಳಿತದ ಘಟನೆಯನ್ನು ವಿದ್ಯಾರ್ಥಿಯು ಪೋಷಕರಿಗೆ ತಿಳಿಸಿದನು. ಅದರ ನಂತರ, ಭಾನುದಾಸ್ ಪಾಟೀಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಸಂಪಾದಕೀಯ ನಿಲುವು

  • ಇದೇ ವಿಷಯವನ್ನು ಒಬ್ಬ ಹಿಂದೂ ಶಿಕ್ಷಕನು ಒಬ್ಬ ಮುಸ್ಲಿಂ ಹುಡುಗನ ವಿಷಯದಲ್ಲಿ ಮಾಡಿದ್ದರೆ, ಇಲ್ಲಿಯವರೆಗೆ ಎಷ್ಟು ಗದ್ದಲವಾಗುತ್ತಿತ್ತು ಎಂದು ಹೇಳಬೇಕಾಗಿಲ್ಲ. ಹಿಂದೂಗಳು ಸಹಿಷ್ಣುಗಳಾಗಿರುವುದರಿಂದಲೇ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕಲು ಧೈರ್ಯ ಮಾಡುತ್ತಾರೆ!
  • ಇದು ಕೇವಲ ಹಿಂದೂ ದ್ವೇಷದಿಂದಲೇ ನಡೆದ ಕೃತ್ಯವಾಗಿದೆ. ಹಿಂದೂಗಳ ದೇವರುಗಳ ಬಗ್ಗೆ ಅತಿಯಾದ ದ್ವೇಷ ಹೊಂದಿರುವ ಮತಾಂಧ ‘ಶಿಕ್ಷಕರು’ ಎನ್ನಲು ಅರ್ಹರಲ್ಲ!
  • ಭಾರತದಲ್ಲಿ ಹಿಂದೂ ಮಕ್ಕಳು ‘ಜೈ ಶ್ರೀರಾಮ್’ ಎಂದು ಹೇಳಿಯೇ ಹೇಳುತ್ತಾರೆ! ಮತಾಂಧ ಶಿಕ್ಷಕರಿಗೆ ಅದನ್ನು ಕೇಳಲು ಇಷ್ಟವಿಲ್ಲದಿದ್ದರೆ, ಅವರು ಪಾಕಿಸ್ತಾನಕ್ಕೆ ಹೋಗಬೇಕು!