
ನವದೆಹಲಿ – ಸರಕಾರಿ ಕಚೇರಿಗಳಲ್ಲಿ ಅಕ್ಟೋಬರ್‌ನಿಂದ ಪ್ರಾರಂಭವಾದ ಸ್ವಚ್ಛತಾ ಅಭಿಯಾನದಲ್ಲಿ ಸರಕಾರಕ್ಕೆ ಗುಜರಿ ಮಾರಾಟದಿಂದ ೮೦೦ ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯ ಬಂದಿದೆ. ಕಳೆದ ೫ ವರ್ಷಗಳಲ್ಲಿ, ಇಂತಹ ಅಭಿಯಾನಗಳಿಂದ ಸರಕಾರವು ಗುಜರಿ ಮಾರಾಟದಿಂದ ಒಟ್ಟು ೪ ಸಾವಿರದ ೧೦೦ ಕೋಟಿ ರೂ. ಗಳಿಸಿದೆ. ಈ ಮೊತ್ತವು ಒಂದು ದೊಡ್ಡ ಬಾಹ್ಯಾಕಾಶ ಯೋಜನೆ ಅಥವಾ ‘ಚಂದ್ರಯಾನ ಮಿಷನ್’ನ ಒಟ್ಟು ನಿಧಿಯಷ್ಟಿದೆ. (ಗುಜರಿ ಮಾರಾಟದಿಂದ ಹಣ ಗಳಿಸುವ ಏಕೈಕ ದೇಶ ಭಾರತ! ಇದು ಸ್ವಚ್ಛತೆಯ ಬಗ್ಗೆ ಭಾರತ ಎಷ್ಟೊಂದು ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ತೋರಿಸುತ್ತದೆ. ಮಹಾಶಕ್ತಿಯಾಗುವ ಕನಸು ಕಾಣುತ್ತಿರುವ ದೇಶಕ್ಕೆ ಇದು ನಾಚಿಕೆಗೇಡಿನ ಸಂಗತಿ! – ಸಂಪಾದಕರು)
ಕೇಂದ್ರ ಕಾರ್ಮಿಕ ಸಚಿವ ಜಿತೇಂದ್ರ ಸಿಂಗ್ ಅವರು, ಈ ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಸರಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು ೯ ಕೋಟಿ ೨೩ ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಿವೆ. ೨೦೨೧ ರಲ್ಲಿ, ಸರಕಾರವು ಪ್ರತಿ ವರ್ಷ ಅಕ್ಟೋಬರ್ ೨ ರಿಂದ ಅಕ್ಟೋಬರ್ ೩೧ ರವರೆಗೆ ವಿಶೇಷ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿತು ಎಂದು ತಿಳಿಸಿದರು. (ಸ್ವಚ್ಛತೆಗಾಗಿ ಅಭಿಯಾನವನ್ನು ನಡೆಸಬೇಕಾಗಿರುವುದು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! ಸ್ವಚ್ಛತೆಯು ಸೇವೆಯ ಒಂದು ಭಾಗವಾಗಿದೆ ಎಂದು ಸರಕಾರವು ಸರಕಾರಿ ನೌಕರರಿಗೆ ಯಾವಾಗ ಕಲಿಸುತ್ತದೆ? – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!