ಸೋಮನಾಥದಲ್ಲಿ ಅನಧಿಕೃತ ದರ್ಗಾ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ! Gujarat Demolition Drive Stone Pelting

  • ೨ ಪೊಲೀಸರು ಗಾಯಗೊಂಡಿದ್ದಾರೆ

  • ೧೦೦ ಜನರ ವಿರುದ್ಧ ಪ್ರಕರಣ ದಾಖಲು

ಸೋಮನಾಥ (ಗುಜರಾತ್) – ಗಿರ್ ಸೋಮನಾಥ ಜಿಲ್ಲೆಯ ಪ್ರಭಾಸ ಪಾಟಣದಲ್ಲಿ ಆಡಳಿತವು ಪ್ರಾರಂಭಿಸಿದ ಅತಿಕ್ರಮಣ ತೆರವು ಕಾರ್ಯಾಚರಣೆಯ ಸಮಯದಲ್ಲಿ ಉದ್ವಿಗ್ನತೆ ಉಂಟಾಯಿತು. ಸರಕಾರಿ ಜಮೀನಿನಲ್ಲಿದ್ದ ಅನಧಿಕೃತ ದರ್ಗಾ ಒಂದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದ್ದಾಗ, ಅಲ್ಲಿ ಜಮಾಯಿಸಿದ್ದ ಮುಸ್ಲಿಮರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ನಂತರ, ಸುಮಾರು ೧೦೦ ಜನರ ಗುಂಪು ಘೋಷಣೆಗಳನ್ನು ಕೂಗುತ್ತಾ ನೇರವಾಗಿ ಪೊಲೀಸರ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿತು. ಇದರಲ್ಲಿ ೨ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

೧. ನವೆಂಬರ್ ೧೦ ರಂದು ಆಡಳಿತವು ಸೋಮನಾಥ ದೇವಾಲಯದ ಸಮೀಪವಿರುವ ೧೧ ಅನಧಿಕೃತ ಅಂಗಡಿಗಳು, ಮನೆಗಳು ಮತ್ತು ಧಾರ್ಮಿಕ ಸ್ಮಾರಕಗಳನ್ನು ತೆರವುಗೊಳಿಸಲು ಸಿದ್ಧತೆ ನಡೆಸಿತ್ತು. ಪೊಲೀಸ್ ತಂಡವು ಹಜರತ್ ರಂಗೀಲಾಶಾ ದರ್ಗಾವನ್ನು ತೆರವುಗೊಳಿಸಲು ಹೋದಾಗ, ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು, ಪುರುಷರು ಮತ್ತು ಮಕ್ಕಳೊಂದಿಗೆ ಸೇರಿ ಜಮಾಯಿಸಿದ ೧೦೦ ಜನರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು. ಪೊಲೀಸರು ಲಾಠಿ ಪ್ರಹಾರ ಮಾಡಿ ಮತ್ತು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ದಾಳಿಯಲ್ಲಿ ಪ್ರಭಾಸ ಪಾಟಣದ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ಪಟೇಲ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಕುಲದೀಪ್ ಸಿಂಗ್ ಪರ್ಮಾರ್ ಗಾಯಗೊಂಡಿದ್ದಾರೆ.

೨. ಪೊಲೀಸರು, ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ  ಎಂದು ತಿಳಿಸಿದ್ದಾರೆ. ಸರಕಾರಿ ಜಮೀನಿನ ಮೇಲಿನ ಅತಿಕ್ರಮಣ ತೆರವು ಕಾರ್ಯ ಮುಂದುವರಿಯಲಿದೆ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತವು ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

  • ಅನಧಿಕೃತ ದರ್ಗಾ ನಿರ್ಮಾಣವಾಗುವವರೆಗೂ ಆಡಳಿತ ನಿದ್ದೆ ಮಾಡುತ್ತಿತ್ತೇ?
  • ಮುಸ್ಲಿಮರು ಹಿಂಸಾತ್ಮಕರು ಎಂಬುದು ಹಿಂದಿನ ಘಟನೆಗಳಿಂದ ತಿಳಿದಿದ್ದರೂ, ಅದಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೆ ಮತ್ತು ಮುಸ್ಲಿಮರಿಂದ ಹೊಡೆತ ತಿನ್ನುವುದು ಪೊಲೀಸರ ವೈಫಲ್ಯವಲ್ಲವೇ?