(‘ಡಿಜಿಟಲ್ ಪಾದ್ರಿ’ ಎಂದರೆ ಅಂತರ್ಜಾಲದ ಮೂಲಕ ಧರ್ಮ ಪ್ರಚಾರ ಮಾಡುವ ಪಾದ್ರಿ)

ಲಂಡನ್ (ಬ್ರಿಟನ) – ಬ್ರಿಟನ್ ನಲ್ಲಿ ರಾಷ್ಟ್ರೀಯತೆ ಮತ್ತು ಕ್ರೈಸ್ತ ಕಟ್ಟರವಾದದ ಕುರಿತು ಒಂದು ಹೊಸ ಧಾರ್ಮಿಕ ಚಳುವಳಿ ಹುಟ್ಟಿಕೊಳ್ಳುತ್ತಿದೆ. ಈ ಚಳುವಳಿಯನ್ನು ‘ಕ್ರೈಸ್ತ ರಾಷ್ಟ್ರೀಯತೆ’ ಎಂದು ಕರೆಯಲಾಗುತ್ತಿದೆ. ಬ್ರಿಟನ್ ಕ್ರೈಸ್ತ ಸಂಸ್ಕೃತಿಗೆ ಮರಳಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಈ ಚಳುವಳಿಯಲ್ಲಿ ಕ್ರೈಸ್ತ ಚಿಹ್ನೆಗಳು ಇನ್ನು ಮುಂದೆ ಪ್ರೀತಿ ಮತ್ತು ಕರುಣೆಯ ಸಂಕೇತಗಳಾಗಿ ಉಳಿದಿಲ್ಲ, ಬದಲಿಗೆ ಕೋಪ, ಕಟ್ಟರತೆ ಮತ್ತು ರಾಷ್ಟ್ರೀಯತೆಯ ಸಂಕೇತಗಳಾಗಿ ಪರಿಣಮಿಸುತ್ತಿವೆ. ಬಿಷಪ್ ಸೆರಿಯನ್ ಡ್ಯೂರ್ ಅವರು ಕ್ರೈಸ್ತ ಧರ್ಮದ ಈ ಹೊಸ ಸ್ವರೂಪದ ಮುಖವಾಗಿದ್ದಾರೆ. ಅವರು ‘ಚರ್ಚ್ ಆಫ್ ಇಂಗ್ಲೆಂಡ್’ ಅನ್ನು ‘ಕಳೆದುಹೋದ ಸಂಸ್ಥೆ’ ಎಂದು ಕರೆಯುತ್ತಾರೆ. ಅವರು ಕಡಲತೀರದಲ್ಲಿ ತೆರೆದ ಆಕಾಶದಡಿ ಸಾಮೂಹಿಕ ‘ಬ್ಯಾಪ್ಟಿಸಮ್’ (ದೀಕ್ಷಾಸ್ನಾನ) ನಡೆಸುತ್ತಾರೆ. ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಒಂದಾಗುತ್ತಾರೆ. ಈ ಹೊಸ ಧಾರ್ಮಿಕ ಚಳುವಳಿ ಚರ್ಚ್‌ಗಳಿಂದಲ್ಲ, ಬದಲಿಗೆ ಅಂತರ್ಜಾಲದಿಂದ ಹೊರಹೊಮ್ಮುತ್ತಿದೆ. ಧರ್ಮವನ್ನು ರಾಷ್ಟ್ರೀಯತೆಯೊಂದಿಗೆ ಜೋಡಿಸುವ ಪಾದ್ರಿಗಳು ಯೂಟ್ಯೂಬ್, ‘ಪಾಡ್‌ಕಾಸ್ಟ್’ ಮತ್ತು ‘ಟೆಲಿಗ್ರಾಂ’ ವಾಹಿನಿಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯರಾಗುತ್ತಿದ್ದಾರೆ.
ಈ ಚಳುವಳಿಯಡಿಯಲ್ಲಿ ಬ್ರಿಟನ್ ನಲ್ಲಿ ಸಾವಿರಾರು ಜನರು ಬ್ರಿಟಿಷ್ ಧ್ವಜಗಳು ಮತ್ತು ಶಿಲುಬೆಗಳನ್ನು ಹಿಡಿದು ಮೆರವಣಿಗೆ ನಡೆಸುತ್ತಾರೆ. ಅವರ ಫಲಕಗಳ ಮೇಲೆ ಬ್ರಿಟನ್ ನಲ್ಲಿ ಇಸ್ಲಾಂ ಇರಬಾರದು. ನಾವು ಕಟ್ಟರವಾದಿ ಇಸ್ಲಾಂ ವಿರುದ್ಧ ಯುದ್ಧ ಮಾಡುತ್ತೇವೆ. ನಾವು ಕ್ರೈಸ್ತ ಧರ್ಮವನ್ನು ಸರಕಾರದ ಕೇಂದ್ರಬಿಂದುವಿಗೆ ತರುತ್ತೇವೆ ಎಂದು ಬರೆದಿರುತ್ತಾರೆ. (ಭಾರತದಲ್ಲಿ ಹಿಂದೂಗಳು ಹಿಂದೂ ಧರ್ಮವನ್ನು ಸರಕಾರದ ಕೇಂದ್ರಬಿಂದುವಿಗೆ ತರಲು ಇಂತಹ ಮೆರವಣಿಗೆಗಳನ್ನು ನಡೆಸಿದ್ದರೆ, ಅಷ್ಟೊತ್ತಿಗಾಗಲೇ ಸಾಮ್ಯವಾದಿಗಳು, ಪ್ರಗತಿಪರರು ಮತ್ತು ಜಾತ್ಯತೀತವಾದಿಗಳು ತಕ್ಷಣವೇ ವಿರೋಧ ವ್ಯಕ್ತಪಡಿಸುತ್ತಿದ್ದರು ಮತ್ತು ಅಸಹಿಷ್ಣುತೆ ಎಂದು ಬೆಂಕಿ ಉಗುಳುತ್ತಿದ್ದರು! – ಸಂಪಾದಕರು)
‘ಚರ್ಚ್ ಆಫ್ ಇಂಗ್ಲೆಂಡ್’ನ ಮುಖ್ಯ ಧರ್ಮಗುರುಗಳು ಸೇರಿದಂತೆ ಹಲವು ಕ್ರೈಸ್ತ ನಾಯಕರು ಈ ಹೊಸ ಚಳುವಳಿಯು ಕ್ರೈಸ್ತ ಧರ್ಮವನ್ನು ಭ್ರಷ್ಟಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ವೇಲ್ಸ್ ಮತ್ತು ಅನೇಕ ಹಿರಿಯ ಧಾರ್ಮಿಕ ನಾಯಕರು ಒಂದು ಪತ್ರವನ್ನು ಪ್ರಕಟಿಸಿದ್ದು, ಇದರಲ್ಲಿ ಅತಿ-ಬಲಪಂಥೀಯ ಗುಂಪುಗಳು ದ್ವೇಷವನ್ನು ಹರಡಲು ಶಿಲುಬೆ ಮತ್ತು ಬೈಬಲ್ ಅನ್ನು ಬಳಸುತ್ತಿವೆ ಎಂದು ಹೇಳಿದ್ದಾರೆ.
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ