ಪಶ್ಚಿಮ ಬಂಗಾಳದಲ್ಲಿ ೨೦ ಸಾವಿರ ಜಿಲೆಟಿನ್ ಕಡ್ಡಿಗಳು ವಶಕ್ಕೆ

  • ಗಣಿಗಾರಿಕೆಯಲ್ಲಿ ಸ್ಫೋಟಕ್ಕಾಗಿ ಬಳಕೆ

  • ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ ನಡೆಸಲು ಸಂದೇಹ

ಬೀರ್‌ಭೂಮ್ (ಪಶ್ಚಿಮ ಬಂಗಾಳ) – ಪಶ್ಚಿಮ ಬಂಗಾಳ ಪೊಲೀಸರು ಬೀರ್‌ಭೂಮ್ ಜಿಲ್ಲೆಯಲ್ಲಿ ೨೦ ಸಾವಿರ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೂಲಕ ಪಶ್ಚಿಮ ಬಂಗಾಳದಲ್ಲಿ ಸ್ಫೋಟ ನಡೆಸುವ ಉದ್ದೇಶವಿತ್ತೇ? ಎಂಬ ದೃಷ್ಟಿಯಿಂದ ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿ ಕಟ್ಟೆಚ್ಚರ ಹೆಚ್ಚಿಸಲಾಗಿದ್ದು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾರುಕಟ್ಟೆಗಳಂತಹ ಜನಸಂದಣಿ ಇರುವ ಸ್ಥಳಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

೧. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ೫೦ ಚೀಲಗಳಲ್ಲಿ ತುಂಬಿದ್ದ ೨೦ ಸಾವಿರ ಜಿಲೆಟಿನ್ ಕಡ್ಡಿಗಳನ್ನು ಒಂದು ಪಿಕಪ್ ವ್ಯಾನ್‌ನಿಂದ (ಸಣ್ಣ ಸರಕು ಸಾಗಣೆ ವಾಹನ) ವಶಪಡಿಸಿಕೊಳ್ಳಲಾಗಿದೆ. ಈ ವಾಹನ ಜಾರ್ಖಂಡ್ ರಾಜ್ಯದ ಪಾಕುಡ್‌ನಿಂದ ಪಶ್ಚಿಮ ಬಂಗಾಳದ ಕಡೆಗೆ ಬರುತ್ತಿತ್ತು. ಸುಲ್ತಾನ್‌ಪುರ-ನಲ್ಹಾಟಿ ರಸ್ತೆಯಲ್ಲಿ ತಪಾಸಣೆ ನಡೆಸುವಾಗ ಪೊಲೀಸರು ಈ ವಾಹನವನ್ನು ಹಿಡಿದರು. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ.

೨. ಜಿಲೆಟಿನ್ ಕಡ್ಡಿಗಳನ್ನು ಗಣಿಗಾರಿಕೆ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಈ ಕಡ್ಡಿಗಳಿಂದ ಅಪಾಯಕಾರಿ ಸ್ಫೋಟಕಗಳನ್ನು ತಯಾರಿಸಬಹುದು ಮತ್ತು ಡಿಟೋನೇಟರ್ ಸಹಾಯದಿಂದ ಅವುಗಳನ್ನು ಸ್ಫೋಟಿಸಲು ಬರುತ್ತದೆ ಎನ್ನಲಾಗಿದೆ.