ಲೋಣಿ ಕಾಳಭೋರ್ (ಪುಣೆ) ನಲ್ಲಿ ಮತಾಂಧರಿಂದ ವಿವಾಹಿತ ಹಿಂದೂ ಮಹಿಳೆಗೆ ಬೈಗುಳ ನೀಡುತ್ತಾ ಥಳಿತ! : Women Beaten

ಮಹಿಳೆಯ ಬಟ್ಟೆ ಹರಿಯಲು ಯತ್ನ!

ಲೋಣಿ ಕಾಳಭೋರ್ (ಪುಣೆ ಜಿಲ್ಲೆ) – ಶಾಲೆಯಿಂದ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಓರ್ವ ವಿವಾಹಿತ ಹಿಂದೂ ಮಹಿಳೆಗೆ ಮತಾಂಧರು ಅವಮಾನಕರ ಮಾತುಗಳನ್ನಾಡುತ್ತಾ ಬೈದು ಥಳಿಸಿದ್ದಾರೆ. ಈ ಘಟನೆ ಕದಮವಾಕವಸ್ತಿ (ಹವೇಲಿ ತಾಲ್ಲೂಕು) ಗ್ರಾಮ ಪಂಚಾಯತಿ ವ್ಯಾಪ್ತಿಯ ಪಠಾರೆ ವಸ್ತಿ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೩೦ ವರ್ಷದ ಮಹಿಳೆ ಲೋಣಿ ಕಾಳಭೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲೋಣಿ ಕಾಳಭೋರ್ ಪೊಲೀಸರು ಮಹಮದ್ ಇರಾನಿ, ಅಲಿ ಇರಾನಿ, ಹೈದರ್ ಇರಾನಿ, ಫಾತೂ ಇರಾನಿ, ನೂರ್ಜಾನ್ ಇರಾನಿ ಮತ್ತು ರಬಾಬ್ ಇರಾನಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

. ದೂರುದಾರ ಮಹಿಳೆ ಮಗಳನ್ನು ಶಾಲೆಯಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿರುವ ವಸ್ತಿಯಲ್ಲಿ ಮತಾಂಧರು ಹೊಂಚು ಹಾಕಿ ಕುಳಿತಿದ್ದರು. ಆ ಸಮಯದಲ್ಲಿ ಮಹಮದ್ ಮತ್ತು ಅಲಿ ಇರಾನಿ ಅವರು ಮಹಿಳೆಯ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ. (ಹಿಂದೂ ಮಹಿಳೆಯರು ತಮ್ಮ ಹಳ್ಳಿಗಳಲ್ಲಿಯೂ ಸುರಕ್ಷಿತರಾಗಿಲ್ಲ. ಹಿಂದೂ ಮಹಿಳೆಯರು ಸ್ವಸಂರಕ್ಷಣಾ ತರಬೇತಿ ಪಡೆಯುವುದು ಅವಶ್ಯಕ ಎಂಬುದನ್ನು ಇದು ತೋರಿಸುತ್ತದೆ! – ಸಂಪಾದಕರು)

. ದೂರುದಾರ ಮಹಿಳೆ ಅದನ್ನು ನಿರ್ಲಕ್ಷಿಸಿ ಮುಂದೆ ನಡೆದರು. ಅದೇ ಸಮಯದಲ್ಲಿ ಕೆಲವರು ಮುಂದೆ ಬಂದು ಮಹಿಳೆಯನ್ನು ತಡೆದು, ಆಕೆಯ ಕೂದಲನ್ನು ಹಿಡಿದು ಕೆಳಗೆ ಬೀಳಿಸಿದ್ದಾರೆ. ಆಕೆಗೆ ಕೈ ಮತ್ತು ಕಾಲಿನಿಂದ ಹೊಡೆದಿದ್ದಾರೆ.

. ಮಹಮದ್ ಎಂಬಾತನು ಸಂತ್ರಸ್ತ ಮಹಿಳೆಯನ್ನು ಉದ್ದೇಶಿಸಿ ಮತ್ತೆ ಅಶ್ಲೀಲ ಹೇಳಿಕೆ ನೀಡಿ, ಆಕೆಯ ಎದೆಯ ಮೇಲೆ ಕೈ ಇಟ್ಟು ಸ್ತ್ರೀ ಮನಸ್ಸಿಗೆ ಮುಜುಗರ ಉಂಟುಮಾಡುವ ಕೃತ್ಯವನ್ನು ಮಾಡಿದ್ದಾನೆ.

. ಕೆಲವು ಮತಾಂಧ ಮಹಿಳೆಯರು ದೂರುದಾರ ಮಹಿಳೆಯ ಬಟ್ಟೆ ಹರಿಯಲು ಪ್ರಯತ್ನಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಮೇಲೆ ದಾಳಿ ಮಾಡುವ ಮತಾಂಧರ ಚಾಳಿ ಹಳೆಯದೇ ಆಗಿದೆ. ಇಂತಹವರನ್ನು ಹದ್ದುಬಸ್ತಿನಲ್ಲಿಡಲು ಕಾನೂನಿನ ಕಠಿಣ ಕ್ರಮದ ಜೊತೆಗೆ ಪರಿಣಾಮಕಾರಿ ಹಿಂದೂ ಸಂಘಟನೆಯೇ ಕಾಲದ ಅಗತ್ಯವಾಗಿದೆ!