
ಬೀಜಿಂಗ್ – ಚೀನಾದ ದೇವಸ್ಥಾನಗಳಲ್ಲಿ ‘ಕ್ಯೂಆರ್ ಕೋಡ್’ (ಆನ್‌ಲೈನ್ ಹಣ ವರ್ಗಾವಣೆ ಕೋಡ್) ಮೂಲಕ ದಾನ ಮಾಡಿದ ನಂತರ ಭಕ್ತರು ತಮ್ಮ ಮೊಬೈಲ್ ಫೋನ್‌ಗಳನ್ನು ಅಲ್ಲಿನ ದೇಣಿಗೆ ಪೆಟ್ಟಿಗೆಗೆ ಸ್ಪರ್ಶಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಪ್ರಪಂಚದಾದ್ಯಂತ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ‘ಕ್ಯೂಆರ್ ಕೋಡ್’ (ಆನ್‌ಲೈನ್ ಹಣ ವರ್ಗಾವಣೆ ಕೋಡ್) ಮೂಲಕ ದಾನವನ್ನು ಸ್ವೀಕರಿಸಲಾಗುತ್ತದೆ. ಚೀನಾದಲ್ಲೂ ಈ ಪದ್ಧತಿ ಸಾಮಾನ್ಯವಾಗಿದೆ; ಆದರೆ ಚೀನಾದಲ್ಲಿ ಭಕ್ತರು ‘ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ ದಾನ ನೀಡಿದ ನಂತರ ತಮ್ಮ ಮೊಬೈಲ್ ಫೋನ್‌ಗಳನ್ನು ದೇಣಿಗೆ ಪೆಟ್ಟಿಗೆಗೆ ಲಘುವಾಗಿ ಸ್ಪರ್ಶಿಸುತ್ತಾರೆ. ಅನೇಕ ಭಕ್ತರು ತಮ್ಮ ಮೊಬೈಲ್ ಫೋನ್‌ಗಳ ಮೇಲೆ ಧೂಪ ಮತ್ತು ಊದಬತ್ತಿಯನ್ನು ಬೆಳಗುವುದು ಕಂಡುಬರುತ್ತದೆ. ‘ಹೀಗೆ ಮಾಡುವುದರಿಂದ ದೇವರು ದಾನವನ್ನು ಸ್ವೀಕರಿಸುತ್ತಾನೆ ಮತ್ತು ಆಶೀರ್ವಾದವನ್ನೂ ನೀಡುತ್ತಾನೆ’ ಎಂಬುದು ಅವರ ನಂಬಿಕೆಯಾಗಿದೆ.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine