ಸಂಭಲ (ಉತ್ತರಪ್ರದೇಶ) ಇಲ್ಲಿನ ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮಹಮೂದ್ ಅವರ ಹೇಳಿಕೆ

ಸಂಭಲ (ಉತ್ತರಪ್ರದೇಶ) – ಭಾರತದ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಗದೇ ಇದ್ದಿದ್ದರೆ, ಭಾರತದಲ್ಲಿಯೂ ಒಬ್ಬ ಮುಸಲ್ಮಾನ ಪ್ರಧಾನಿ ಆಗುತ್ತಿದ್ದರು. ಪ್ರಸ್ತುತ ಭಾರತದಲ್ಲಿ ಸುಮಾರು 30 ರಿಂದ 32 ಕೋಟಿ ಮುಸಲ್ಮಾನರಿದ್ದಾರೆ; ಆದರೆ ನಾವು ಎಂದಿಗೂ ಪ್ರಧಾನಿಯಾಗಬಹುದು ಎಂದು ಯೋಚಿಸಲೂ ಸಾಧ್ಯವಿಲ್ಲ ಎಂದು ಇಲ್ಲಿನ ಸಮಾಜವಾದಿ ಪಕ್ಷದ ಸತತ 7 ಬಾರಿ ಚುನಾಯಿತರಾದ ಶಾಸಕ ಇಕ್ಬಾಲ್ ಮಹಮೂದ ಅವರು ಹೇಳಿಕೆ ನೀಡಿದ್ದಾರೆ.
ವಿಭಜನೆಯ ದಿನದ ಬಗ್ಗೆ ನಾವು ಪಶ್ಚಾತ್ತಾಪ ಪಡುತ್ತೇವೆ! – ಶಾಸಕ ಇಕ್ಬಾಲ್ ಮಹಮೂದ

ಶಾಸಕ ಮಹಮೂದ ಅವರು ಮಾತು ಮುಂದುವರಿಸಿ, ದೇಶ ಸ್ವತಂತ್ರವಾದಾಗ ಮಹಮ್ಮದ್ ಅಲಿ ಜಿನ್ನಾ ಅವರು ಭಾರತದ ವಿಭಜನೆ ಮಾಡಿದರು. ಯಾರಿಗೆ ಭಾರತದ ಮೇಲೆ ಪ್ರೀತಿಯಿತ್ತೋ, ಅವರು ಇಲ್ಲೇ ಉಳಿದರು ಮತ್ತು ಯಾರಿಗೆ ಜಿನ್ನಾ ಅವರೊಂದಿಗೆ ಸಂಬಂಧ ಬೆಳೆಸಬೇಕಿತ್ತೋ ಅವರು ಪಾಕಿಸ್ತಾನಕ್ಕೆ ಹೋದರು. ನಾವು ಆ ದಿನವನ್ನು ದೂಷಿಸುತ್ತೇವೆ; ಏಕೆಂದರೆ ಇಂದು ನಮ್ಮ ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಒಂದು ವೇಳೆ ಪಾಕಿಸ್ತಾನವು ಪ್ರತ್ಯೇಕವಾಗದೇ ಇದ್ದಿದ್ದರೆ, ನಾವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗುತ್ತಿದ್ದೆವು ಮತ್ತು ನಮ್ಮ ಸಮುದಾಯದಿಂದಲೂ ಪ್ರಧಾನಿಗಳು ಆಗುತ್ತಿದ್ದರು, ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ