ಬಂಗಾಳದಲ್ಲಿ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ (ಎಸ್‌ಐಆರ್) ಪ್ರಾರಂಭವಾದ ಕೇವಲ 2 ದಿನಗಳಲ್ಲಿ 150 ಬಾಂಬ್‌ ಗಳು ಜಪ್ತಿ !

(‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ – ಎಸ್‌ಐಆರ್ ಎಂದರೆ ವಿಶೇಷ ತೀವ್ರ ಪರಿಷ್ಕರಣೆ)

ಮುರ್ಶಿದಾಬಾದ (ಬಂಗಾಳ) – ಬಂಗಾಳ ರಾಜ್ಯದಲ್ಲಿ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ (ಎಸ್‌.ಐ.ಆರ್) ಪ್ರಾರಂಭವಾದ ಕೇವಲ 2 ದಿನಗಳಲ್ಲಿ 150 ಬಾಂಬ್‌ ಗಳನ್ನು ಜಪ್ತಿ ಮಾಡಲಾಗಿದೆ ಎಂದು ‘ಎಕ್ಸ್’ ನಲ್ಲಿನ ಒಂದು ಬರಹದಲ್ಲಿ (ಪೋಸ್ಟ್‌ನಲ್ಲಿ) ಮಾಹಿತಿ ನೀಡಲಾಗಿದೆ. ಡ್ರೋನ್‌ ಗಳು, ಬಾಂಬ್ ಶೋಧಿಸುವ ತಂಡಗಳು ಇತ್ಯಾದಿಗಳ ಮೂಲಕ ಅನೇಕ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದರ ವಿಡಿಯೋವನ್ನು ಸಹ ಈ ಬರಹಕ್ಕೆ ಜೋಡಿಸಲಾಗಿದೆ.

‘ಕಾಂಗ್ರೆಸ ನಾಯಕ ಅಧೀರ ರಂಜನ ಚೌಧುರಿ ಅವರು ಈ ಹಿಂದೆ, ‘ಮುರ್ಶಿದಾಬಾದನಲ್ಲಿ ಶೇ.70 ರಷ್ಟು ಮುಸ್ಲಿಮರಿದ್ದಾರೆ. ಪರಿಣಾಮವಾಗಿ ಅವರು ಭವಿಷ್ಯದಲ್ಲಿ ವಿಸ್ತೃತ ಬಾಂಗ್ಲಾದೇಶವನ್ನು ರಚಿಸುತ್ತಾರೆ, ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯ ಪ್ರಾಯೋಗಿಕ ಅನುಭವವೇ ಈ ಮೇಲಿನ ಘಟನೆಯಿಂದ ಆಗುತ್ತಿದೆ, ಎಂದೂ ಸಹ ಈ ‘ಪೋಸ್ಟ್’ ನಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಬಂಗಾಳ ಮತ್ತು ಅಲ್ಲಿನ ಹಿಂದೂಗಳನ್ನು ರಕ್ಷಿಸಬೇಕಾದರೆ, ಅಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುವುದು ಅವಶ್ಯಕವಾಗಿದೆ ಎಂಬುದನ್ನು ಈಗಲಾದರೂ ಸರಕಾರ ತಿಳಿಯಬೇಕು!