ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಆರ್ಲೇಕರ್ ಅವರಿಗೆ ‘ಸನಾತನ ಪಂಚಾಂಗ 2026’ ಉಡುಗೋರೆ

ಪಂಚಾಂಗವನ್ನು ವೀಕ್ಷಿಸುತ್ತಿರುವ ರಾಜ್ಯಪಾಲ ಶ್ರೀ. ರಾಜೇಂದ್ರ ಆರ್ಲೇಕರ್ ಮತ್ತು ಪಕ್ಕದಲ್ಲಿ ಶ್ರೀ. ನಂದಕುಮಾರ ಕೈಮಲ್

ಕೊಚ್ಚಿ (ಕೇರಳ) – ಇಲ್ಲಿ ನಡೆಯುತ್ತಿರುವ ’28ನೇ ಅಂತರರಾಷ್ಟ್ರೀಯ ಪುಸ್ತಕ ಮೇಳ’ದಲ್ಲಿ ಕಾರ್ಯಕ್ರಮವೊಂದಕ್ಕೆ ಕೇರಳದ ರಾಜ್ಯಪಾಲ ಶ್ರೀ. ರಾಜೇಂದ್ರ ವಿಶ್ವನಾಥ ಆರ್ಲೇಕರ್ ಆಗಮಿಸಿದ್ದರು. ಈ ಮೇಳದಲ್ಲಿ ಸನಾತನ ಸಂಸ್ಥೆಯ ಮಳಿಗೆಯನ್ನೂ ಸ್ಥಾಪಿಸಲಾಗಿದೆ. ಈ ಕಾರ್ಯಕ್ರಮದ ನಂತರ ರಾಜ್ಯಪಾಲ ಆರ್ಲೇಕರ್ ಅವರು ಎಲ್ಲಾ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾಗ, ಅವರಿಗೆ ಸನಾತನ ಸಂಸ್ಥೆಯ ಪರವಾಗಿ ಶ್ರೀ. ನಂದಕುಮಾರ ಕೈಮಲ್ ಅವರು ‘ಸನಾತನ ಪಂಚಾಂಗ 2026’ ಅನ್ನು ಉಡುಗೊರೆಯಾಗಿ ನೀಡಿದರು.