ಯಾವುದೇ ಮುಸಲ್ಮಾನನು ”ವಂದೇ ಮಾತರಂ” ಹೇಳಲು ಸಾಧ್ಯವಿಲ್ಲ! SP MLA Abu Azmi Vande Mataram

ಸಮಾಜವಾದಿ ಪಕ್ಷದ ಶಾಸಕ ಅಬೂ ಆಝಮಿ ಅವರಿಂದ ”ವಂದೇ ಮಾತರಂ” ಹೇಳುವುದಕ್ಕೆ ತೀವ್ರ ವಿರೋಧ !

‘ವಂದೇ ಮಾತರಂ’ ಶಬ್ದಗಳು ಪೂಜೆಗೆ ಸಂಬಂಧಿಸಿರುವುದರಿಂದ ವಿರೋಧ

ಮುಂಬಯಿ – ಇಸ್ಲಾಂನಲ್ಲಿ ಭೂಮಿ ಮತ್ತು ಸೂರ್ಯನನ್ನು ಪೂಜಿಸುವುದಿಲ್ಲ. ನಾವು ಅಲ್ಲಾಹನ ಹೊರತು ಯಾರನ್ನೂ ಒಪ್ಪುವುದಿಲ್ಲ. ಹೇಗೆ ನೀವು ನಮಾಜ್ ಮಾಡಲು ಸಾಧ್ಯವಿಲ್ಲವೋ, ಹಾಗೆಯೇ ಯಾವುದೇ ಮುಸಲ್ಮಾನನು ”ವಂದೇ ಮಾತರಂ” ಹೇಳಲು ಸಾಧ್ಯವಿಲ್ಲ. ಈ ಪದಗಳು ಪೂಜೆಗೆ ಸಂಬಂಧಿಸಿವೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬೂ ಆಜ್ಮಿ ವಿಷ ಕಕ್ಕಿದ್ದಾರೆ. ”ವಂದೇ ಮಾತರಂ”ಗೆ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವಾಗ, ಆಜ್ಮಿ ಅವರು ಮುಸಲ್ಮಾನರು ತಮ್ಮ ರಾಷ್ಟ್ರನಿಷ್ಠೆಯನ್ನು ತೋರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾಜಪದ ಮುಂಬಯಿ ನಗರಾಧ್ಯಕ್ಷ ಅಮಿತ ಸಾಟಮ ಅವರು ನವೆಂಬರ್ 7 ರಂದು ನಡೆಯುವ ”ವಂದೇ ಮಾತರಂ” ಕಾರ್ಯಕ್ರಮಕ್ಕೆ ಆಜ್ಮಿ ಅವರಿಗೆ ಆಹ್ವಾನ ನೀಡಿದಾಗ ಅವರು ಈ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಆಜ್ಮಿ ಅವರು ಮಾತನಾಡಿ, ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಗೀತೆಯನ್ನು ಹಾಡಲು ಯಾರನ್ನೂ ಬಲವಂತವಾಗಿ ನಿರ್ಬಂಧಿಸುವುದು, ಧರ್ಮ, ಅಂತರಾತ್ಮ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಈ ಗೀತೆಗೆ ಕಾನೂನಿನ ಮೂಲಕ ‘ರಾಷ್ಟ್ರಗೀತೆ’ಯ ಸ್ಥಾನಮಾನ ಮತ್ತು ರಕ್ಷಣೆ ನೀಡುವಂತೆ ಕೋರಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ, ಎಂದು ಹೇಳಿದರು.

”ವಂದೇ ಮಾತರಂ” ಹೇಳುವುದಕ್ಕೆ ವಿರೋಧವಿಲ್ಲ; ಆದರೆ ನೀವು ರಾಜಕೀಯ ಮಾಡಬೇಡಿ!‌

ಆಜ್ಮಿ ಅವರು ತಮ್ಮ ಮಾತು ಮುಂದುವರಿಸಿ, ಮುಸಲ್ಮಾನರು ”ವಂದೇ ಮಾತರಂ” ಹೇಳಲು ಸಾಧ್ಯವಿಲ್ಲವೆಂದು ನೀವು ಅವರನ್ನು ‘ದೇಶದ್ರೋಹಿ’ ಎನ್ನುವುದು ಕೀಳು ಮಟ್ಟದ ರಾಜಕೀಯವಾಗಿದೆ. ”ವಂದೇ ಮಾತರಂ”ಗೆ ನಮ್ಮ ವಿರೋಧವಿರಲಿಲ್ಲ ಮತ್ತು ಇಂದಿಗೂ ಇಲ್ಲ; ಆದರೆ ರಾಜಕೀಯ ಮಾಡಬೇಡಿ. ನಾವು ವಿಧಾನಸಭೆಯಲ್ಲಿ ”ವಂದೇ ಮಾತರಂ” ನಡೆಯುವಾಗ ನಾವು ನಿಮ್ಮ ಜೊತೆ ಎದ್ದು ನಿಲ್ಲುತ್ತೇವೆ, ನಾವು ಅದನ್ನು ಗೌರವಿಸುತ್ತೇವೆ.

ನಾವು ‘ಜನ-ಗಣ-ಮನ’ ರಾಷ್ಟ್ರಗೀತೆಯನ್ನು ಹೇಳುತ್ತೇವೆ. ಇದನ್ನು ನೀವು ಹೇಳುವುದಿಲ್ಲ.

ನಿಮಗೆ ‘ಖಾನ್’ ಹೆಸರಿನ ಮಹಾಪೌರರು ಬೇಡ. ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಗಳಿಗಾಗಿ ನಿಮಗೆ ಮುಸಲ್ಮಾನರಿಂದ ”ವಂದೇ ಮಾತರಂ” ಹೇಳಿಸಬೇಕು. ಕುರಾನ್ ಓದುವವರನ್ನು ನೀವು ಪಾಕಿಸ್ತಾನಕ್ಕೆ ಕಳುಹಿಸಲು ಬಯಸುತ್ತೀರಿ. ಮುಂಬಯಿಯ ಜನರಿಗೆ ಈ ರಾಜಕೀಯ ತಿಳಿದಿದೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶಾಂತವಾಗಿ ಇದನ್ನು ನೋಡುತ್ತಿದ್ದಾರೆ. ಅಮಿತ ಸಾಟಮ್ ಮತ್ತು ಭಾಜಪ ಮಾಡುತ್ತಿರುವ ಅಲ್ಪಸಂಖ್ಯಾತರ ಅವಮಾನವನ್ನು ಇಡೀ ಜಗತ್ತು ನೋಡುತ್ತಿದೆ. ನೀವು ನಮ್ಮ ದೇಶಭಕ್ತಿಯೊಂದಿಗೆ ಸಮಾನವಾಗಿ ನಿಲ್ಲಲು ಸಾಧ್ಯವಿಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ರಾಷ್ಟ್ರಘಾತಕ ಮನಃಸ್ಥಿತಿ ಇರುವವರು ರಾಷ್ಟ್ರಕ್ಕೆ ನಿಷ್ಠರಾಗಿ ಇರುತ್ತಾರೆಯೇ?