ಮಹಾರಾಷ್ಟ್ರದಲ್ಲಿ ಮಾದಕವಸ್ತುಗಳ ವೈಭವೀಕರಣ ಬೇಡ ! – ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನ

ಮುಂಬಯಿ – ಮಾದಕವಸ್ತು ಮಾರಾಟ ಮತ್ತು ಸೇವನೆಯಿಂದಾಗಿ ಗೋವಾ ರಾಜ್ಯದಲ್ಲಿ ಕುಖ್ಯಾತಿ ಗಳಿಸಿದ ‘ಸನ್ ಬರ್ನ್’ ಉತ್ಸವವು ಡಿಸೆಂಬರ್ ತಿಂಗಳಲ್ಲಿ ಮುಂಬಯಿಯಲ್ಲಿ ನಡೆಯಲಿದೆ. ಗೋವಾದಲ್ಲಿ ನಡೆದ ಸನ್‌ಬರ್ನ್ ಉತ್ಸವದಲ್ಲಿ ಒಬ್ಬ ಯುವತಿ ಮೃತಪಟ್ಟಿದ್ದಳು, ಅಲ್ಲದೆ ಮಾದಕವಸ್ತುಗಳ ವಿತರಕನನ್ನು ವಸ್ತುಗಳೊಂದಿಗೆ ಬಂಧಿಸಲಾಗಿತ್ತು. ಇಂತಹ ಗಂಭೀರ ಪ್ರಕರಣಗಳು ನಡೆದಿದ್ದರೂ ಸಹ ಮುಂಬಯಿಯಲ್ಲಿ ಸನ್‌ಬರ್ನ್ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಮಾದಕ ವಸ್ತುಗಳ ಅಡ್ಡೆಯಾಗಿರುವ ಈ ಉತ್ಸವಕ್ಕೆ ಅನುಮತಿ ನಿರಾಕರಿಸಬೇಕು ಎಂದು ‘ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನ’ವು ಮುಂಬಯಿಯ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದೆ. ನವೆಂಬರ್ 3 ರಂದು ಜಿಲ್ಲಾಧಿಕಾರಿ ಆಚಲ ಸೂದ ಗೋಯಲ್ ಅವರಿಗೆ ಮನವಿ ಸಲ್ಲಿಸಲಾಯಿತು.
🚫 Anti-Narcotics Campaign activists gave a memorandum to the Mumbai Collector opposing the Sunburn Festival in December.
💊 The festival is infamous in Goa for drug peddling and deaths, yet it now seeks entry into Mumbai.
⚠️ Activists reminded of incidents like the 2009 death… pic.twitter.com/LuiLVBIbYO
— Sanatan Prabhat (@SanatanPrabhat) November 6, 2025
ಈ ಸಂದರ್ಭದಲ್ಲಿ ಮಿಠಿಬಾಯಿ ಕಾಲೇಜಿನ ಪ್ರಾಧ್ಯಾಪಕ ಶ್ರೀಪಾದ ಸಾಮಂತ, ವಾಂದ್ರೆಯ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಲಕ್ಷ್ಮಣ ಜಠಾರ ಹಾಗೂ ಶ್ರೀಯುತರಾದ ಪ್ರಭಾಕರ ಭೋಸಲೆ, ವಿನಾಯಕ ಶಿಂದೆ, ಸುಭಾಷ ಅಹಿರ, ವಿಲಾಸ ನಿಕಮ, ಸಾಗರ ಚೋಪದಾರ, ಸತೀಶ ಸೋನಾರ, ಸೌ. ಧನಶ್ರೀ ಕೇಳಶೀಕರ ಮೊದಲಾದವರು ಉಪಸ್ಥಿತರಿದ್ದರು. ಮುಂಬಯಿ ಸಹ ಪೊಲೀಸ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣ ಚೌಧರಿ, ಹೆಚ್ಚುವರಿ ಪೊಲೀಸ್ ಆಯುಕ್ತರು ಅಭಿಮನ್ಯು ದೇಶಮುಖ, ‘ಮುಂಬಯಿ ಪೋರ್ಟ್ ಟ್ರಸ್ಟ್’ನ ಎಸ್ಟೇಟ್ ಮ್ಯಾನೇಜರ ಶಿರಸಾಟ ಅವರನ್ನು ಸಹ ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನದ ಮೂಲಕ ಭೇಟಿ ಮಾಡಲಾಯಿತು. ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತರಿಗೂ ಈ ವಿಷಯಕ್ಕೆ ಸಂಬಂಧಿಸಿದ ಮನವಿಯನ್ನು ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನದ ವತಿಯಿಂದ ನೀಡಲಾಗಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!