ಗಡಚಿರೋಲಿ: ಅನಧಿಕೃತ ಹಾಸ್ಟೆಲ್‌ನಲ್ಲಿ ಕ್ರಿಶ್ಚಿಯನ್ ಮತಾಂತರ ಬಯಲು!

  • ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ೯೧ ವಿದ್ಯಾರ್ಥಿಗಳ ರಕ್ಷಣೆ!

  • ಪ್ರತಿ ವಿದ್ಯಾರ್ಥಿಯ ಬಳಿ ಬೈಬಲ್ ಪತ್ತೆ!

ಗಡಚಿರೋಲಿ – ಇಲ್ಲಿನ ಅಹೇರಿ ನಗರದ ಸಮೀಪವಿರುವ ನಾಗೇಪಲ್ಲಿಯಲ್ಲಿ ಕಳೆದ ೧೧ ವರ್ಷಗಳಿಂದ ನಡೆಯುತ್ತಿದ್ದ ಅನಧಿಕೃತ ಹಾಸ್ಟೆಲ್‌ನಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ೯೧ ವಿದ್ಯಾರ್ಥಿಗಳನ್ನು ರಕ್ಷಿಸಿದೆ. ೪೯ ಬಾಲಕಿಯರು ಮತ್ತು ೪೨ ಬಾಲಕರನ್ನು ಈ ಜಾಲದಿಂದ ರಕ್ಷಿಸಲಾಗಿದೆ. ಹಾಸ್ಟೆಲ್‌ನಲ್ಲಿ ಕ್ರಿಶ್ಚಿಯನ್ ಮತಾಂತರ ನಡೆಯುತ್ತಿರುವುದು ಬಹಿರಂಗಗೊಂಡಿದೆ. ಹಾಸ್ಟೆಲ್‌ನಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, “ನಮ್ಮ ಧರ್ಮ ಕ್ರಿಶ್ಚಿಯನ್ ಆಗಿದ್ದು, ನಾವು ಮತ್ತು ನಮ್ಮ ಪೋಷಕರು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದೇವೆ” ಎಂದು ಹೇಳಿದ್ದಾರೆ.

‘ಫ್ರೆಂಡ್ ಮಿಷನರಿ ಪ್ರೇಯರ್ ಬ್ಯಾಂಡ್ ಚೆನ್ನೈ’ ಎಂಬ ಸಂಸ್ಥೆಯು ‘ಆಶೀರ್ವಾದ’ ಹಾಸ್ಟೆಲ್ ಅನ್ನು ನಡೆಸುತ್ತಿತ್ತು. ಈ ಹಾಸ್ಟೆಲ್‌ಗೆ ಸರಕಾರದ ಯಾವುದೇ ಇಲಾಖೆಯ ಮಾನ್ಯತೆ ಇರಲಿಲ್ಲ.

ಹಾಸ್ಟೆಲ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ನಡೆಯುತ್ತಿದ್ದ ಬಗ್ಗೆ ಮಾಹಿತಿ!

ವಿದ್ಯಾರ್ಥಿಗಳು ನೀಡಿರುವ ಮಾಹಿತಿಯ ಪ್ರಕಾರ, ಹಾಸ್ಟೆಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ನಡೆಯುತ್ತದೆ. ಪ್ರತಿ ವಿದ್ಯಾರ್ಥಿಯ ಬಳಿಯೂ ‘ಬೈಬಲ್’ ಪತ್ತೆಯಾಗಿದೆ. ಹಾಸ್ಟೆಲ್‌ನ ಗೋಡೆಗಳ ಮೇಲೆಯೂ ಕ್ರಿಶ್ಚಿಯನ್ ಧರ್ಮದ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
ಹಾಸ್ಟೆಲ್‌ನಲ್ಲಿ ೧ ರಿಂದ ೪ನೇ ತರಗತಿಯ ವಿದ್ಯಾರ್ಥಿಗಳಿಂದ ತಿಂಗಳಿಗೆ ₹ ೬೦೦, ೫ ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಂದ ₹ ೧,೦೦೦ ಮತ್ತು ೯ ರಿಂದ ೧೨ನೇ ತರಗತಿಯ ವಿದ್ಯಾರ್ಥಿಗಳಿಂದ ₹ ೧,೨೦೦ ಪಡೆಯಲಾಗುತ್ತಿತ್ತು. (ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬುದರ ಕೂಡ ತನಿಖೆ ಮಾಡಬೇಕು! – ಸಂಪಾದಕರು).

ಸಂಪಾದಕೀಯ ನಿಲುವು

  • ಕಳೆದ ೧೧ ವರ್ಷಗಳಿಂದ ಹಾಸ್ಟೆಲ್ ಅನಧಿಕೃತವಾಗಿ ನಡೆಯುತ್ತಿದ್ದರೂ, ಸರ್ಕಾರದ ಗಮನಕ್ಕೆ ಬರಲಿಲ್ಲ ಹೇಗೆ? ಈ ಪ್ರಕರಣದಲ್ಲಿ ಸರ್ಕಾರವು ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು!
  • ಹಿಂದೂಗಳನ್ನು ಮತಾಂತರ ಮಾಡುವದರ ಹಿಂದೆ ಯಾರ ಕೈವಾಡವಿದೆ ಎಂದು ಪತ್ತೆ ಹಚ್ಚಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!