ಅಸ್ಸಾಂನಲ್ಲಿ ಶಾಲಾ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ! Assam Gang Rape School Girl

ಹದಗೆಡುತ್ತಿರುವ ಸಮಾಜದ ನೈತಿಕತೆ !

ಗುವಾಹಟಿ (ಅಸ್ಸಾಂ)- ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಶಾಲಾ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ. ೭ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ 3 ಪುರುಷರು ಆಕೆಯನ್ನು ಅಪಹರಿಸಿ ಚಹಾ ತೋಟಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. (ಇಂತಹ ಕಾಮುಕರಿಗೆ ನಡು ರಸ್ತೆಯಲ್ಲೇ ಗಲ್ಲು ಶಿಕ್ಷೆ ನೀಡಬೇಕು! – ಸಂಪಾದಕರು) ನಂತರ, ಆ ದುಷ್ಕರ್ಮಿಗಳು ಸಂತ್ರಸ್ತ ಬಾಲಕಿಯನ್ನು ರಸ್ತೆಯ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. (ಸಮಾಜಕ್ಕೆ ಸಾಧನೆ ಕಲಿಸದ ಪರಿಣಾಮ! ಸಮಾಜದ ಎಲ್ಲಾ ವರ್ಗದ ಜನರಿಗೆ ಶಾಲೆಗಳಲ್ಲಿ ಇತರೆ ವಿಷಯಗಳ ಜೊತೆಗೆ ನೈತಿಕ ಶಿಕ್ಷಣ ನೀಡುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ! – ಸಂಪಾದಕರು) ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿಲ್ಲ.

ನ್ಯಾಯ ಕೋರಿ ಗ್ರಾಮಸ್ಥರು ಮತ್ತು ಸಂಬಂಧಿಕರು ಪೊಲೀಸ್ ಠಾಣೆಯ ಬಳಿ ಜಮಾಯಿಸಿದರು.

ಸಂತ್ರಸ್ತ ಬಾಲಕಿ ಶಾಲೆಯಿಂದ ನಿಗದಿತ ಸಮಯಕ್ಕೆ ಮನೆಗೆ ಬಾರದ ಕಾರಣ ಆಕೆಯ ಕುಟುಂಬಸ್ಥರು ಹುಡುಕಲು ಆರಂಭಿಸಿದರು. ಮಧ್ಯಾಹ್ನ 5 ಗಂಟೆ ಸುಮಾರಿಗೆ ಒಬ್ಬ ರಿಕ್ಷಾ ಚಾಲಕ, ಚಹಾ ತೋಟದ ಬಳಿ ರಸ್ತೆಯ ಬದಿಯಲ್ಲಿ ಆಕೆಯನ್ನು ನೋಡಿರುವುದಾಗಿ ಕುಟುಂಬಕ್ಕೆ ತಿಳಿಸಿದನು. ಕುಟುಂಬಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಆ ಹುಡುಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯ ದೇಹದ ಮೇಲೆ ಗಾಯಗಳಿದ್ದವು ಮತ್ತು ಆಕೆಯ ಬಟ್ಟೆ ಹರಿದಿತ್ತು. ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ನಂತರ ಅವರು ಸ್ಥಳಕ್ಕೆ ಬಂದರು. ನಂತರ ಸಂತ್ರಸ್ತ ಬಾಲಕಿಯನ್ನು ತಿನ್ಸುಕಿಯಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು.

ಇದಕ್ಕೂ ಮೊದಲು, ಸೆಪ್ಟೆಂಬರ್ 22, 2025 ರಂದು ಅಸ್ಸಾಂನ ದಿಬ್ರುಗಢ್ ಜಿಲ್ಲೆಯ ದುಲಿಯಾಜನ್‌ನಲ್ಲಿರುವ ಚಹಾ ತೋಟದ ಇಬ್ಬರು ಸಿಬ್ಬಂದಿಗಳು 8 ವರ್ಷದ ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿ, ಶವವನ್ನು ಕಾಲುವೆಯಲ್ಲಿ ಎಸೆದಿದ್ದರು.