ಕಾಂಗ್ರೆಸ್ ಇರುವುದರಿಂದಲೇ ಮುಸಲ್ಮಾನರಿಗೆ ಗೌರವವಿದೆ, ಕಾಂಗ್ರೆಸ್ ಇಲ್ಲದಿದ್ದರೆ ನೀವು ಏನೂ ಅಲ್ಲ! : Revanth Reddy

ತೆಲಂಗಾಣದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಹೇಳಿಕೆ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ

ಭಾಗ್ಯನಗರ (ತೆಲಂಗಾಣ) – ಕಾಂಗ್ರೆಸ್ ಪಕ್ಷವು ಯಾವಾಗಲೂ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಬಂದಿದೆ. ಕಾಂಗ್ರೆಸ್ ಇಲ್ಲದೆ ಮುಸಲ್ಮಾನರಿಗೆ ನ್ಯಾಯ ಸಿಗುವುದು ಕಷ್ಟವಾಗುತ್ತದೆ. ಹಿಂದಿನ ಸರಕಾರವು ಮುಸಲ್ಮಾನರನ್ನು ನಿರ್ಲಕ್ಷಿಸಿತ್ತು ಎಂದು ತೆಲಂಗಾಣದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಮ್ಮ ಸರಕಾರವು ಮುಸಲ್ಮಾನ ಸಮುದಾಯದ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಪ್ರಾರಂಭಿಸಿದೆ, ಉದಾಹರಣೆಗೆ, ವಕ್ಫ್ ಮಂಡಳಿಯನ್ನು ಬಲಪಡಿಸುವುದು ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ವಿಸ್ತರಿಸುವುದು ಎಂದು ರೇವಂತ್ ರೆಡ್ಡಿ ಅವರು ತಿಳಿಸಿದರು. (ಎಷ್ಟು ರಾಜಕೀಯ ಪಕ್ಷಗಳು ಹಿಂದೂಗಳಿಗಾಗಿ ಯೋಜನೆಗಳನ್ನು ಪ್ರಾರಂಭಿಸಿವೆ ಮತ್ತು ಹಿಂದೂಗಳ ಒಳಿತನ್ನು ಮಾಡಿವೆ? ಒಂದೂ ಇಲ್ಲ, ಇದೇ ವಸ್ತುಸ್ಥಿತಿಯಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

  • ಮುಖ್ಯಮಂತ್ರಿ ರೆಡ್ಡಿ ಅವರು ಸತ್ಯವನ್ನೇ ಹೇಳಿದ್ದಾರೆ. ಮೋಹನದಾಸ ಗಾಂಧಿಯವರು ಕಾಂಗ್ರೆಸ್ಸಿಗೆ ಬಂದಾಗಿನಿಂದ, ಅಂದರೆ 1920 ರಿಂದ, ಕಾಂಗ್ರೆಸ್ ಮುಸಲ್ಮಾನರನ್ನು ತಲೆಯ ಮೇಲೆ ಹೊತ್ತುಕೊಳ್ಳಲು ಪ್ರಾರಂಭಿಸಿತು, ಅದು ಇಂದಿಗೂ ಮುಂದುವರಿದಿದೆ!
  • ಹಿಂದೂಗಳ ವಿಷಯದಲ್ಲಿ, ನಮ್ಮ ಪಕ್ಷ ಇರುವುದರಿಂದ ಹಿಂದೂಗಳಿಗೆ ಗೌರವವಿದೆ, ಇಲ್ಲದಿದ್ದರೆ ಏನೂ ಇಲ್ಲ ಎಂದು ಹೇಳುವ ಒಂದೇ ಒಂದು ಪಕ್ಷವೂ ಭಾರತದಲ್ಲಿಲ್ಲ. ಈ ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು!
  • ಜಾತ್ಯತೀತ ಸಂವಿಧಾನದ ಹೆಸರಿನಲ್ಲಿ ಕಾಂಗ್ರೆಸ್ ನಿರಂತರವಾಗಿ ಮುಸಲ್ಮಾನರಿಗಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ; ಆದರೆ ಹಿಂದೂತ್ವದ ಹೆಸರಿನಲ್ಲಿ ಸರಕಾರ ಸ್ಥಾಪಿಸುವವರು ಹಿಂದೂಗಳಿಗಾಗಿ ಅಪೇಕ್ಷಿತವಾಗಿರುವ ಕಾರ್ಯಗಳನ್ನು ಮಾಡುತ್ತಿರುವುದು ಕಾಣಿಸುವುದಿಲ್ಲ!