ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ವರದಿ ಮಾಡುತ್ತಿರುವ ಮಹಿಳಾ ಹಿಂದೂ ಪತ್ರಕರ್ತೆಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ : Bangladesh Journalist Threat

ಪ್ರತಿಭಟನೆಯ ಸಮಯದಲ್ಲಿ ತ್ರಿನಾ ರಾಯ್ ಚೌಧರಿ (ಬಲದಿಂದ ಎರಡನೇ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಅವಧಿಯಲ್ಲಿ ಹಿಂದೂಗಳ ಮೇಲೆ ನಡೆದ ಘಟನೆಗಳ ಬಗ್ಗೆ ವರದಿ ಮಾಡಿದ ಮಹಿಳಾ ಪತ್ರಕರ್ತೆ ತ್ರಿನಾ ರಾಯ ಚೌಧರಿ ಅವರಿಗೆ ಮತಾಂಧ ಮುಸ್ಲಿಮರಿಂದ ಸಾಮೂಹಿಕ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಈ ಹಿಂದೆ ಅವರ ಪತ್ರಕರ್ತ ಪತಿ ಪ್ರೋಮಿಥಿಯಾಸ್ ಚೌಧರಿ ಅವರ ಮೇಲೆ ದಾಳಿ ಮಾಡಲಾಗಿತ್ತು. ಈ ಘಟನೆಯ ನಂತರ, ಬಾಂಗ್ಲಾದೇಶದ ಹಲವು ಸ್ಥಳಗಳಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿ, ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ; ಆದರೆ ಪೊಲೀಸರು ಇನ್ನೂ ನಿಷ್ಕ್ರಿಯರಾಗಿದ್ದಾರೆ.

1. ಪ್ರೋಮಿಥಿಯಾಸ್ ಚೌಧರಿ ಮತ್ತು ಅವರ ಪತ್ನಿ ತ್ರಿನಾ ರಾಯ ಚೌಧರಿ ಇಬ್ಬರೂ ‘ದಿ ನ್ಯೂಸ್ ಡಾಟ್ ಕಾಮ್’ ಎಂಬ ಸುದ್ದಿ ವೆಬ್‌ಸೈಟ್ ನಡೆಸುತ್ತಿದ್ದಾರೆ. ಪ್ರೋಮಿಥಿಯಾಸ್ ಅವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದರೇ ತ್ರಿನಾ ಅವರು ಮುಖ್ಯ ವರದಿಗಾರ್ತಿಯಾಗಿದ್ದಾರೆ. ಅವರಿಬ್ಬರೂ ಢಾಕಾ ನಗರದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಬೆರಿಸಾಲ್ ಜಿಲ್ಲೆಯ ವೆಸ್ಟ್ ಗೋಯಿಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ‘ಆನಂದಲೋಕ್’ ಎಂಬ ಆಶ್ರಮವನ್ನು ಸಹ ಸ್ಥಾಪಿಸಿದ್ದಾರೆ, ಅದರ ಮೂಲಕ ಸುತ್ತಮುತ್ತಲಿನ ಹಿಂದೂಗಳಿಗೆ ಸಹಾಯ ಮಾಡುತ್ತಾರೆ.

2. ತ್ರಿನಾ ರಾಯ ಅವರು, ಸುತ್ತಮುತ್ತಲಿನ ಕಟ್ಟರವಾದಿಗಳೊಂದಿಗೆ ತಮಗೆ ಯಾವಾಗಲೂ ವಾಗ್ವಾದಗಳು ನಡೆಯುತ್ತಿರುತ್ತವೆ ಎಂದು ತಿಳಿಸಿದರು; ಆದರೆ ಅಕ್ಟೋಬರ್ 29 ರಂದು ಪರಿಸ್ಥಿತಿ ನೇರವಾಗಿ ಹಲ್ಲೆ ಮತ್ತು ಅತ್ಯಾಚಾರದ ಬೆದರಿಕೆಗಳವರೆಗೆ ತಲುಪಿತು. ಆ ದಿನ ಮಧ್ಯಾಹ್ನ, ನನ್ನ ಪತಿ ಪ್ರೋಮಿಥಿಯಾಸ್ ಅವರನ್ನು ನಾಜಿಮ್ ಮುಲ್ಲಾ ತನ್ನ ಅಂಗಡಿಗೆ ಕರೆದಿದ್ದ. ಇಬ್ಬರೂ ಒಟ್ಟಿಗೆ ಕಲಿತಿದ್ದರಿಂದ ಸಾಮಾನ್ಯ ಮಾತುಕತೆ ಇರಬಹುದು ಎಂದು ಅವರು ಭಾವಿಸಿದ್ದರು; ಆದರೆ ಅವರು ಅಂಗಡಿ ತಲುಪಿದಾಗ, ನಾಜಿಮ್ ಮತ್ತು ಶಾಹೀನ್ ನಡುವೆ ಹಣದ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಆ ಜಗಳದಲ್ಲಿ ನನ್ನ ಪತಿಯನ್ನು ಎಳೆಯಲಾಯಿತು. ನಾಜಿಮ್ ಮತ್ತು ಶಾಹೀನ್ ಇಬ್ಬರೂ ಅವರ ಮೇಲೆ ಕೂಗಾಡಿದರು, “ನೀನು ನಮ್ಮ ಸಾಲ ತೀರಿಸು, ನೀನು ಇಸ್ಕಾನ್‌ನವನು.” ಇದರ ನಂತರ ಹಲ್ಲೆ ಮಾಡಲಾಯಿತು. “ನಾನು ನಿಮ್ಮ ಸ್ನೇಹಿತ” ಎಂದು ಪತಿ ಹೇಳಿದಾಗ, ಆ ಇಬ್ಬರೂ “ನೀನು ಕಾಫೀರ್ ಹಿಂದೂ, ಸ್ನೇಹಿತ ಹೇಗಾಗಲು ಸಾಧ್ಯ? ಈ ದೇಶ ನಮ್ಮದು, ನಿನಗೆ ಇಲ್ಲಿ ದಯೆ ತೋರಿ ಇರಲು ಅವಕಾಶ ನೀಡಲಾಗಿದೆ. ಇಲ್ಲಿಂದ ಹೊರಟು ಹೋಗು” ಎಂದು ಬೆದರಿಕೆ ಹಾಕಿದರು. ಅಲ್ಲದೆ, “ನಿನ್ನ ಹೆಂಡತಿ ಬಹಳ ಅಪಾಯಕಾರಿಯಾಗಿದ್ದಾಳೆ. ಆಕೆಗೆ ಮುಸ್ಲಿಮರಿಂದ ಸಾಮೂಹಿಕ ಅತ್ಯಾಚಾರ ಮಾಡಿಸುತ್ತೇವೆ ಮತ್ತು ಆಗ ನಾವೆಲ್ಲ ಯಾರು ಎಂದು ಆಕೆಗೆ ತಿಳಿಯುತ್ತದೆ” ಎಂದರು.

ಪೊಲೀಸರಿಂದಲೂ ಅನ್ಯಾಯ

ತ್ರಿನಾ ಅವರು, “ಅಕ್ಟೋಬರ್ 29 ರಂದೇ ನಾವು ಪೊಲೀಸರಿಗೆ ದೂರು ನೀಡಿದ್ದೆವು; ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, ನಮಗೆ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸ್ ಠಾಣೆಯ ಅಧಿಕಾರಿ ಮುಸ್ಲಿಂ ಆಗಿದ್ದು, ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾವು ದೂರಿನಲ್ಲಿ ಇಸ್ಕಾನ್‌ನ ಬಗ್ಗೆ ಉಲ್ಲೇಖಿಸಿದಾಗ, ಅವರು, “ಇದನ್ನು ಬರೆದರೆ ಗಲಭೆ ಉಂಟಾಗುತ್ತದೆ, ಆದ್ದರಿಂದ ಆ ಪದವನ್ನು ತೆಗೆದುಹಾಕಿ” ಎಂದರು. ಪೊಲೀಸರು, “ನಾವು ನಿಮ್ಮ ಮೇಲೆ ಮೊಕದ್ದಮೆ ದಾಖಲಿಸುತ್ತೇವೆ ಮತ್ತು ಮಸೀದಿ ಕೆಡವಲು ಜನರನ್ನು ಸೇರಿಸುತ್ತಿದ್ದೀರಿ ಎಂದು ಹೇಳುತ್ತೇವೆ” ಎಂದು ಬೆದರಿಕೆ ಹಾಕಿ ನಮ್ಮನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.

ತ್ರಿನಾ ಅವರು, ಈಗ ಬಾಂಗ್ಲಾದೇಶದಲ್ಲಿ ತಮ್ಮ ವಾಸ ಅಪಾಯಕಾರಿಯಾಗಿದೆ ಎಂದು ಹೇಳಿದರು. ಕಳೆದ ಕೆಲವು ತಿಂಗಳುಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ದಾಳಿಗಳು, ಅತ್ಯಾಚಾರ ಮತ್ತು ಕೊಲೆಗಳು ಹೆಚ್ಚುತ್ತಿರುವುದರಿಂದ ಬಾಂಗ್ಲಾದೇಶದ ಹಿಂದೂ ಸಮುದಾಯದ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚು ಹದಗೆಡುತ್ತಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಲ್ಲಿವರೆಗೆ ಯಾವುದೇ ದೈಹಿಕ ದೌರ್ಜನ್ಯ ನಡೆದಿಲ್ಲ ಎನ್ನುವುದೇ ದೊಡ್ಡ ವಿಷಯ ಎಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಇದೆ! ಇದರಲ್ಲಿ ಬದಲಾವಣೆ ತರಲು ಅಂದರೆ ಹಿಂದೂಗಳನ್ನು ರಕ್ಷಿಸಲು ಯಾರೂ ಇಲ್ಲ ಎನ್ನುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!