ಅನಿಲ ಅಂಬಾನಿ ಅವರ 3 ಸಾವಿರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು – Anil Ambani ED Case

ಜಾರಿ ನಿರ್ದೇಶನಾಲಯದ ಕ್ರಮ

ನವದೆಹಲಿ – ಉದ್ಯಮಿ ಅನಿಲ ಅಂಬಾನಿ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (‘ಇಡಿ’) ಕ್ರಮ ಕೈಗೊಳ್ಳುತ್ತಾ ಅವರ 3 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಕಚೇರಿ, ಅಪಾರ್ಟ್‌ಮೆಂಟ್ ಮತ್ತು ಭೂಮಿ ಸೇರಿವೆ. ಈ ಆಸ್ತಿಯು ದೆಹಲಿ, ನೋಯ್ಡಾ ಮತ್ತು ಮುಂಬಯಿ ನಗರಗಳಲ್ಲಿದೆ. ವಿಶೇಷವೆಂದರೆ ಅನಿಲ ಅಂಬಾನಿ ಅವರ ಮುಂಬಯಿ ಪಾಲಿ ಹಿಲ್‌ ನಲ್ಲಿರುವ ಬಂಗಲೆಯ ಮೇಲೆಯೂ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗಿದೆ.

ಅನಿಲ ಅಂಬಾನಿ ಅವರ ‘ರಿಲಯನ್ಸ್ ಗ್ರೂಪ್’ ಬ್ಯಾಂಕಿನ 20 ಸಾವಿರ ಕೋಟಿಗಿಂತಲೂ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪವಿದೆ.