‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗ ಬಲಿ’ ಘೋಷಣೆಗಳು ಈಗ ಗಲಭೆ ಸೃಷ್ಟಿಸುವ ನೆಪಗಳಾಗಿವೆಯಂತೆ! Swamy Prasad Maurya Controversy

  • ಉತ್ತರಪ್ರದೇಶದ ಮಾಜಿ ಸಚಿವ ಹಾಗೂ ‘ಅಪನಿ ಜನತಾ ಪಾರ್ಟಿ’ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ ಅವರಿಂದ ಮತ್ತೆ ಹಿಂದೂ ದ್ವೇಷದ ಹೇಳಿಕೆ!

ಮಥುರಾ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ‘ಅಪನಿ ಜನತಾ ಪಾರ್ಟಿ’ಯ ಅಧ್ಯಕ್ಷ ಸ್ವಾಮಿ ಪ್ರಸಾದ ಮೌರ್ಯ ಅವರು ಮತ್ತೆ ಹಿಂದೂ ದ್ವೇಷದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗ ಬಲಿ’ ಎಂಬ ಧಾರ್ಮಿಕ ಘೋಷಣೆಗಳು ಈಗ ಗಲಭೆಗಳನ್ನು ಸೃಷ್ಟಿಸಲು ಮತ್ತು ದ್ವೇಷವನ್ನು ಹರಡಲು ಒಂದು ನೆಪವಾಗಿವೆ ಎಂದು ಮೌರ್ಯ ಹೇಳಿದ್ದಾರೆ. (‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗಬಲಿ’ ಘೋಷಣೆಗಳು ಗಲಭೆಗಳನ್ನು ಸೃಷ್ಟಿಸುವ ಘೋಷಣೆಗಳಲ್ಲ, ಬದಲಿಗೆ ಗಲಭೆಕೋರರನ್ನು ಹದ್ದುಬಸ್ತಿನಲ್ಲಿಡುವ ಘೋಷಣೆಗಳಾಗಿವೆ ಎಂಬುದು ಸ್ವಾಮಿ ಪ್ರಸಾದ ಮೌರ್ಯ ಅವರಿಗೆ ಒಂದು ದಿನ ಅರ್ಥವಾಗಬಹುದು ! – ಸಂಪಾದಕರು)

1. ಸ್ವಾಮಿ ಪ್ರಸಾದ ಮೌರ್ಯ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮೇಲೆ ಆರೋಪ ಮಾಡಿ, ಅವರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಿರಪರಾಧಿ ಮುಸಲ್ಮಾನರ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯವರೇ ನ್ಯಾಯಾಲಯದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ಅರಾಜಕತೆ ಹೆಚ್ಚುತ್ತಿದೆ ಎಂದಿದ್ದಾರೆ. (ಉತ್ತರ ಪ್ರದೇಶದಲ್ಲಿ ಅಪರಾಧ ಕಡಿಮೆಯಾಗಿರುವುದು ವಿವಿಧ ವರದಿಗಳಿಂದ ಸಾಬೀತಾಗಿದೆ. ಹೀಗಿದ್ದರೂ, ಹಾಲಿ ಸರಕಾರದ ಮೇಲೆ ಅನಗತ್ಯವಾಗಿ ಆರೋಪ ಹೊರಿಸುತ್ತಿರುವ ಸ್ವಾಮಿ ಪ್ರಸಾದ ಮೌರ್ಯ ಅವರ ಸುಳ್ಳುತನವೇ ಇಲ್ಲಿ ಎದ್ದು ಕಾಣುತ್ತದೆ! – ಸಂಪಾದಕರು)

2. ಫತೇಪುರದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಮೌರ್ಯ, ಅಲ್ಲಿ ಗೋರಿಯನ್ನು ಕೆಡವಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ; ಬದಲಿಗೆ ಮುಸಲ್ಮಾನರ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

3. ಭಾಜಪ ಸರಕಾರವು ಸಂವಿಧಾನವನ್ನು ಉಲ್ಲಂಘಿಸುತ್ತಿದ್ದು, ಕೋಮುವಾದಿ ಕಟ್ಟರತೆಯ ಸಿದ್ಧಾಂತವು ಅಧಿಕಾರದ ಮೇಲೆ ಪ್ರಾಬಲ್ಯ ಸಾಧಿಸುತ್ತಿದೆ ಎಂದು ಮೌರ್ಯ ಆರೋಪಿಸಿದರು.

4. ದಲಿತರ ಮೇಲಿನ ದೌರ್ಜನ್ಯಗಳು ಮತ್ತು ರಾಜ್ಯದಲ್ಲಿನ ಅರಾಜಕತೆಯ ವಿರುದ್ಧ ನವೆಂಬರ್ 3, 2025 ರಂದು ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದರು. (ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಿ ಹಿಂದೂಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿರುವ ಮೌರ್ಯ ಅವರ ಕುತಂತ್ರವನ್ನು ಗಮನಿಸಿರಿ! – ಸಂಪಾದಕರು)

ಮೌರ್ಯರ ಮಾನಸಿಕತೆ ಹದಗೆಟ್ಟಿದೆ ! – ಸಂತ ದಿನೇಶ ಶರ್ಮಾ

ಮಥುರಾದ ಸಾಧು-ಸಂತರು ಸ್ವಾಮಿ ಪ್ರಸಾದ ಮೌರ್ಯ ಅವರ ಹೇಳಿಕೆಗಳಿಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಂತ ದಿನೇಶ ಶರ್ಮಾ ಅವರು, ಮೌರ್ಯ ಅವರ ಮಾನಸಿಕತೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದರೆ, ಅವರು ಸನಾತನ ಧರ್ಮದ ಘೋಷಣೆಗಳನ್ನೂ ಸಹ ರಾಜಕೀಯ ಉದ್ದೇಶಗಳಿಗಾಗಿ ವಿವಾದಾತ್ಮಕಗೊಳಿಸುತ್ತಿದ್ದಾರೆ ಎಂದು ಹೇಳಿದರು. ಸರಕಾರವು ತಕ್ಷಣವೇ ಮೌರ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಸಂತರು ಆಗ್ರಹಿಸಿದ್ದಾರೆ.