‘ಆಪರೇಷನ್ ಸಿಂದೂರ್’ ಒಂದು ಧರ್ಮಯುದ್ಧವಾಗಿತ್ತು ಮತ್ತು ಅದು ಮುಂದೆಯೂ ಮುಂದುವರಿಯಲಿದೆ!

ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆ

ಸತನಾ (ಮಧ್ಯಪ್ರದೇಶ) – ‘ಆಪರೇಷನ್ ಸಿಂದೂರ್’ ಒಂದು ಧರ್ಮಯುದ್ಧವಾಗಿತ್ತು ಮತ್ತು ಅದು ಮುಂದೆಯೂ ಮುಂದುವರಿಯಲಿದೆ. ನಾವು ಯಾವುದೇ ನಿರಪರಾಧಿಗಳಿಗೆ ನೋವುಂಟು ಮಾಡಿಲ್ಲ ಅಥವಾ ನಮಾಜ್ ಮಾಡುವಾಗ ಅಥವಾ ಯಾವುದೇ ಧಾರ್ಮಿಕ ಪ್ರಾರ್ಥನೆಯ ಸಮಯದಲ್ಲಿ ದಾಳಿ ಮಾಡಿಲ್ಲ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿದ್ದಾರೆ. ೫೩ ವರ್ಷಗಳ ನಂತರ ಅವರು ತಮ್ಮ ಬಾಲ್ಯದ ಶಾಲೆಯಾದ ಸರಸ್ವತಿ ಉನ್ನತ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ೧೯೭೧-೭೨ರಲ್ಲಿ ಅವರು ನಾಲ್ಕನೇ ತರಗತಿಯಲ್ಲಿ ಈ ಶಾಲೆಯಲ್ಲಿ ಓದಿದ್ದರು.

ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಮಾತು ಮುಂದುವರೆಸಿ, ‘ಆಪರೇಷನ್ ಸಿಂದೂರ್’ ಇಡೀ ದೇಶವನ್ನು ಒಗ್ಗೂಡಿಸಿತು. ಈ ಕಾರ್ಯಾಚರಣೆಯು ನಾವು ಧರ್ಮಯುದ್ಧದ ಅನುಯಾಯಿಗಳು ಮತ್ತು ಈ ನೀತಿಯನ್ನು ಮುಂದೆಯೂ ಪಾಲಿಸುತ್ತೇವೆ ಎಂದು ಪಾಕಿಸ್ತಾನಕ್ಕೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದೆ, ಎಂದು ಹೇಳಿದರು.

ಕಠಿಣ ಪರಿಶ್ರಮ ಪಡುವವರು ಮಾತ್ರ ದೇಶದ ಭವಿಷ್ಯವನ್ನು ರೂಪಿಸಬಹುದು!

ಸೇನಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ, ಕಠಿಣ ಪರಿಶ್ರಮ ಪಡುವವರು ಮಾತ್ರ ದೇಶದ ಭವಿಷ್ಯವನ್ನು ರೂಪಿಸಬಹುದು. ನೀವು ಸಮವಸ್ತ್ರದಲ್ಲೇ ಇರಿ ಅಥವಾ ನಾಗರಿಕ ಉಡುಪಿನಲ್ಲಿ ಇರಿ, ರಾಷ್ಟ್ರದ ಸೇವೆಗೆ ಕೊಡುಗೆ ನೀಡಿ. ಈ ದೇಶ ನಮ್ಮದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ೨೦೪೭ರ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸಲು ಸಾಧ್ಯವಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಸೇನಾ ಮುಖ್ಯಸ್ಥರು ಹೇಳುವ ಮಾತುಗಳನ್ನು ಭಾರತದ ಯಾವೊಬ್ಬ ರಾಜಕಾರಣಿಯೂ ಹೇಳಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ!