ದೆಹಲಿಯ ಹೆಸರನ್ನು ಬದಲಿಸಿ ‘ಇಂದ್ರಪ್ರಸ್ಥ’ ಮಾಡಿ! – ಸಂಸದ ಪ್ರವೀಣ್ ಖಂಡೇಲ್ವಾಲ್ ಅವರಿಂದ ಅಮಿತ್ ಶಹಾ ಅವರಲ್ಲಿ ಮನವಿ

ಕೇಂದ್ರ ಸರಕಾರವು ಈ ಕುರಿತು ಚಿಂತನೆ ಮಾಡಿ ಈ ಬದಲಾವಣೆ ಮಾಡಬೇಕೆಂದು ಧರ್ಮಾಭಿಮಾನಿ ಹಿಂದೂಗಳು ಬಯಸುತ್ತಾರೆ!

ನವದೆಹಲಿ – ದೆಹಲಿಯ ಹೆಸರನ್ನು ಬದಲಿಸಿ ‘ಇಂದ್ರಪ್ರಸ್ಥ’ ಎಂದು ಇಡಬೇಕು ಎಂದು ದೆಹಲಿಯ ಚಾಂದನಿ ಚೌಕ್ ಕ್ಷೇತ್ರದ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರಿಗೆ ಪತ್ರವನ್ನೂ ಸಹ ಬರೆದಿದ್ದಾರೆ. ಇದರ ಜೊತೆಗೆ ಹಳೆ ದೆಹಲಿ ರೈಲ್ವೆ ನಿಲ್ದಾಣಕ್ಕೆ ‘ಇಂದ್ರಪ್ರಸ್ಥ ಜಂಕ್ಷನ್’ ಮತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ‘ಇಂದ್ರಪ್ರಸ್ಥ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರು ನಾಮಕರಣ ಮಾಡಬೇಕೆಂದು ಸಂಸದ ಖಂಡೇಲ್ವಾಲ್ ಅವರು ಸಲಹೆ ನೀಡಿದ್ದಾರೆ.

ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಪಾಂಡವರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ಕೂಡ ಖಂಡೇಲ್ವಾಲ್ ಅವರು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಯುವ ಪೀಳಿಗೆಗೆ ತಮ್ಮ ಸಂಸ್ಕೃತಿಯನ್ನು ಕಲಿಯಲು ಸಹಾಯವಾಗುತ್ತದೆ ಎಂದವರು ಹೇಳಿದ್ದಾರೆ.

ಖಂಡೇಲ್ವಾಲ್ ಅವರು ತಮ್ಮ ಮನವಿ ಪತ್ರದಲ್ಲಿ ಬರೆದಿರುವ ಅಂಶಗಳು,

೧. ಭಾರತದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯಲ್ಲಿ ದೆಹಲಿಗೆ ವಿಶೇಷ ಸ್ಥಾನವಿದೆ. ಇದು ಕೇವಲ ಒಂದು ಮಹಾನಗರವಲ್ಲ, ಆದರೆ ಭಾರತೀಯ ಸಂಸ್ಕೃತಿಯ ಆತ್ಮ, ಧರ್ಮ, ನೈತಿಕತೆ ಮತ್ತು ಸಾರ್ವಜನಿಕ ಕಲ್ಯಾಣದ ಪರಂಪರೆಯ ಕೇಂದ್ರವಾಗಿ ಉಳಿದಿದೆ.

೨. ದೆಹಲಿಯ ಇತಿಹಾಸವು ನೇರವಾಗಿ ಪಾಂಡವರ ಕಾಲಕ್ಕೆ ಸಂಬಂಧಿಸಿದೆ ಮತ್ತು ಅದಕ್ಕಾಗಿಯೇ ದೆಹಲಿಯ ಭವ್ಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳು ಇಂದ್ರಪ್ರಸ್ಥ ಹೆಸರಿನೊಂದಿಗೆ ಆಳವಾದ ಸಂಬಂಧ ಹೊಂದಿವೆ.

೩. ಮಹಾಭಾರತದ ಸಮಯದಲ್ಲಿ ಪಾಂಡವರು ಯಮುನಾ ನದಿಯ ದಡದಲ್ಲಿ ತಮ್ಮ ರಾಜಧಾನಿಯನ್ನು ಇಂದ್ರಪ್ರಸ್ಥದಲ್ಲಿ ಸ್ಥಾಪಿಸಿದ್ದರು ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ.

೪. ಮೌರ್ಯರ ಕಾಲದಿಂದ ಗುಪ್ತರ ಕಾಲದವರೆಗೆ ಇಂದ್ರಪ್ರಸ್ಥವು ವ್ಯಾಪಾರ, ಸಂಸ್ಕೃತಿ ಮತ್ತು ಆಡಳಿತದ ಪ್ರಮುಖ ಕೇಂದ್ರವಾಗಿತ್ತು. ೧೧ನೇ-೧೨ನೇ ಶತಮಾನಗಳಲ್ಲಿ ರಜಪೂತ ಕಾಲದಲ್ಲಿ ತೋಮರ ರಾಜರು ಈ ಪ್ರದೇಶವನ್ನು ‘ದಿಲ್ಲಿಕಾ’ ಎಂದು ಕರೆದರು, ಆ ಬಳಿಕ ‘ದಿಲ್ಲಿ’ ಎಂಬ ಹೆಸರು ಬಂತು.