‘ನವರಾಷ್ಟ್ರ-ನವಭಾರತ’ಕ್ಕೆ ನೀಡಿದ ಸಂದರ್ಶನದಲ್ಲಿ ಸಿಕಂದರ್ ಶೇಖ್ ವಿರುದ್ಧ ಗಂಭೀರ ಆರೋಪ ಮಾಡಿದ ‘ಹಿಂದಕೇಸರಿ’ ದೀನಾನಾಥ್ ಸಿಂಗ್

ಕೊಲ್ಲಾಪುರ – ‘ಮಹಾರಾಷ್ಟ್ರ ಕೇಸರಿ’ ಪೈಲ್ವಾನ್ ಸಿಕಂದರ್ ಶೇಖ್‌ನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಸಿಕಂದರ್ ಶೇಖ್ ಅನೇಕ ಹಿಂದೂ ಹುಡುಗಿಯರನ್ನು ವಂಚಿಸಿದ್ದಾನೆ. (ಹಾಗಾದರೆ, ಲವ್ ಜಿಹಾದ್ ದೃಷ್ಟಿಯಿಂದ ಸಿಕಂದರ್‌ನ ವಿಚಾರಣೆ ನಡೆಸುವುದು, ಮತ್ತು ಸಿಕಂದರ್‌ನ ಹಿಂದೆ ಯಾರಿದ್ದಾರೆ? ಅವರ ಮೂಲವನ್ನು ಪತ್ತೆ ಹಚ್ಚಿ ಪೊಲೀಸರು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ! – ಸಂಪಾದಕರು) ಸಿಕಂದರ್‌ನ ಪಾಪದ ಕೊಡ ಈಗ ತುಂಬಿದೆ. ಇನ್ನು ಮುಂದೆ ಮತ್ತೊಮ್ಮೆ ಇಂತಹ ಸಿಕಂದರ್ ಶೇಖ್ ಸೃಷ್ಟಿಯಾಗದಂತೆ ನಾವು ಜಾಗ್ರತೆ ವಹಿಸುತ್ತೇವೆ, ಎಂದು ‘ಹಿಂದಕೇಸರಿ’ ದೀನಾನಾಥ್ ಸಿಂಗ್ ಅವರು ‘ನವರಾಷ್ಟ್ರ-ನವಭಾರತ’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ದೀನಾನಾಥ್ ಅವರು,
೧. ‘ಇಲ್ಲಿಯವರೆಗೆ ಕೊಲ್ಲಾಪುರದಲ್ಲಿ ಇಂತಹ ಸಿಕಂದರ್ ಎಂದಿಗೂ ಹುಟ್ಟಿಲ್ಲ ಮತ್ತು ಇನ್ನು ಮುಂದೆ ಇಂತಹ ಸಿಕಂದರ್ ಆಗಲೂ ಬಿಡುವುದಿಲ್ಲ’, ಎಂದು ಕೊಲ್ಲಾಪುರದ ಜನರು ಸೇರಿದಂತೆ ಮಲ್ಲರನ್ನು (ಪೈಲ್ವಾನರನ್ನು) ಸಿದ್ಧಪಡಿಸುವ ಎಲ್ಲಾ ವಸ್ತಾದ್‌ಗಳು ಸಂಕಲ್ಪ ಮಾಡುವುದು ಅಗತ್ಯವಾಗಿದೆ.
೨. ನಾನು ೧೯೬೪ ರಿಂದ ಕೊಲ್ಲಾಪುರದಲ್ಲಿ ಇದ್ದೇನೆ; ಆದರೆ ಅಂತಹ ಘಟನೆ ಇಲ್ಲಿ ಎಂದಿಗೂ ನಡೆದಿಲ್ಲ. ಸಿಕಂದರ್ ಮೊದಲಿನಿಂದಲೂ ತಪ್ಪು ದಾರಿಯಲ್ಲಿದ್ದನು, ಆಗಲೇ ಅವನನ್ನು ತಡೆಯಬೇಕಿತ್ತು; ಆದರೆ ಅದಾಗಲಿಲ್ಲ.
೩. ಸಿಕಂದರ್ ಶೇಖ್ ಗಂಗಾವೇಸ್ ತಾಲಿಂ (ಅಖಾಡ) ಮತ್ತು ಕೆಂಪು ಮಣ್ಣಿನ ಘನತೆಯನ್ನು ಹಾಳು ಮಾಡಿದ್ದಾನೆ. ಅವನು ನಿಜವಾದ ‘ಮಹಾರಾಷ್ಟ್ರ ಕೇಸರಿ’ ಅಲ್ಲ. ಹಣಕ್ಕಾಗಿ ಇಂತಹ ಕೆಲಸ ಮಾಡುವುದು ಎಂದರೆ ‘ಕುಸ್ತಿ’ ಎಂಬ ಕ್ರೀಡೆಗೆ ಮಾಡಿದ ಅವಮಾನ. ಅವನು ವಸ್ತಾದ್ ಮಾತನ್ನು ಕೇಳದ ಪೈಲ್ವಾನ್. ಅವನು ಕುಸ್ತಿಯ ಹೆಸರನ್ನು ಹಾಳು ಮಾಡಿದ್ದಾನೆ.
ಸಿಕಂದರ್ ನಿರಪರಾಧಿ; ಕುಟುಂಬದವರ ವಾದ!
ಸಿಕಂದರ್ ಶೇಖ್‌ನ ತಾಯಿ-ತಂದೆಗೆ ಈ ಪ್ರಕರಣದಲ್ಲಿ ತಮ್ಮ ಮಗನನ್ನು ಸಿಲುಕಿಸಲಾಗಿದೆ ಎಂದು ಅನಿಸುತ್ತಿದೆ. ‘ಹಿಂದಕೇಸರಿ’ ಸ್ಪರ್ಧೆ ಹತ್ತಿರ ಬಂದಿರುವುದರಿಂದ ಅವನು ಸಿದ್ಧತೆ ಮಾಡುತ್ತಿದ್ದನು. ಅವನು ಆಟ ಆಡದಂತೆ ಮಾಡಲು ಬಳಸಲಾದ ಸಂಚಿರಬಹುದೆಂದು ನಮಗೆ ಅರ್ಥವಾಗುತ್ತಿಲ್ಲ’, ಎಂದು ಸಿಕಂದರ್‌ನ ತಂದೆ ಪೈಲ್ವಾನ್ ರಶೀದ್ ಶೇಖ್ ಶಂಕೆ ವ್ಯಕ್ತಪಡಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!