ಮುಸಲ್ಮಾನರ ಪೂರ್ವಜರು ಹಿಂದೂಗಳಾಗಿದ್ದರು! – Jaihak Tanveer Video Viral

  • ಜೈಹಕ ತನ್ವೀರ ಎಂಬ ಮುಸ್ಲಿಂ ಯುವಕನ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

  • ಮುಸಲ್ಮಾನರಿಂದ ವಿರೋಧ

ನವದೆಹಲಿ – ‘ಜೈಹಕ ತನ್ವೀರ’ ಹೆಸರಿನ ಒಬ್ಬ ಮುಸ್ಲಿಂ ಯುವಕನ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಅವನು ‘ಮುಸಲ್ಮಾನರ ಪೂರ್ವಜರು ಹಿಂದೂಗಳಾಗಿದ್ದರು’, ಎಂದು ಹೇಳಿಕೆ ನೀಡಿದ್ದಾನೆ. ಈ ಮುಸ್ಲಿಂ ಯುವಕನು ವೀಡಿಯೊದಲ್ಲಿ ತನ್ನನ್ನು ‘ಲೇಖಕ’ ಮತ್ತು ‘ಭಾರತೀಯ’ ಎಂದು ಪರಿಚಯಿಸಿಕೊಂಡಿದ್ದಾನೆ. ಹಿಂದೂ ಸಮಾಜದ ಅನೇಕರು ಅವನ ಈ ಹೇಳಿಕೆಯನ್ನು ಸ್ವಾಗತಿಸಿದರೆ, ಮುಸ್ಲಿಂ ಸಮಾಜದ ಅನೇಕ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊವನ್ನು ಇದುವರೆಗೆ 90 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

1. ‘ಭಾರತದಲ್ಲಿ ವಾಸಿಸುವ ಮುಸಲ್ಮಾನರಿಗೆ ಯಾವಾಗಲೂ, ನಿಮ್ಮ ಪೂರ್ವಜರು ಹಿಂದೂಗಳಾಗಿದ್ದರೇ? ಎಂದು ಕೇಳಲಾಗುತ್ತದೆ, ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ವಾಸ್ತವವಾಗಿ ನಮ್ಮ ಪೂರ್ವಜರು ಹಿಂದೂಗಳೇ ಆಗಿದ್ದರು, ಎಂದು ತನ್ವೀರ ವೀಡಿಯೊದಲ್ಲಿ ಹೇಳಿದ್ದಾನೆ.

2. ಅವನು ಮಾತು ಮುಂದುವರೆಸಿ, ಅನೇಕ ಪ್ರಸಿದ್ಧ ಮುಸಲ್ಮಾನರ ಜನ್ಮ ‘ಮುಸಲ್ಮಾನ’ ಆಗಿ ಹುಟ್ಟಿರಲಿಲ್ಲ. ಹಜರತ್ (ಪ್ರವಾದಿ ಅವರ ಸೋದರ ಸಂಬಂಧಿ) ಅವರು 6 ವರ್ಷದವರಿದ್ದಾಗ ಇಸ್ಲಾಂ ಸ್ವೀಕರಿಸಿದರು. ಅನೇಕ ಶಹಬಾ (ಪ್ರವಾದಿ ಮಹಮ್ಮದ್ ಅವರ ಸಹಚರರು) ಅವರು ಮೊದಲು ಹಿಂದೂಗಳಾಗಿದ್ದರು ಮತ್ತು ನಂತರ ಅವರು ಇಸ್ಲಾಂ ಅನ್ನು ಸ್ವೀಕರಿಸಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರ ಪೂರ್ವಜರು ಹಿಂದೂಗಳಾಗಿದ್ದರು ಎಂಬುದು ಇತಿಹಾಸವೇ ಇದೆ; ಏಕೆಂದರೆ ಇಸ್ಲಾಂ ಧರ್ಮವು ಸ್ಥಾಪನೆಯಾಗಿದ್ದು ಕೇವಲ 1ಸಾವಿರದ 400 ವರ್ಷಗಳ ಹಿಂದೆ. ಅದಕ್ಕೂ ಮೊದಲು ಕೊಲ್ಲಿ ದೇಶಗಳಲ್ಲಿ ಹಿಂದೂ ಧರ್ಮದಂತೆ ಆಚರಣೆ ಮಾಡುವ ಜನರು ವಾಸಿಸುತ್ತಿದ್ದರು. ಅಲ್ಲಿ ಮೂರ್ತಿಪೂಜೆಯನ್ನು ಮಾಡಲಾಗುತ್ತಿತ್ತು ಮತ್ತು ಇದಕ್ಕೆ ಪುರಾವೆಗಳೂ ಇವೆ. ಹಾಗಾಗಿ, ಈ ಸತ್ಯವನ್ನು ಒಬ್ಬ ಮುಸಲ್ಮಾನನೇ ಹೇಳುತ್ತಿದ್ದರೆ, ಅದರಲ್ಲಿ ತಪ್ಪೇನಿದೆ?
  • ಮೂಲತಃ ಈ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಕಲಿಸುವುದು ಅವಶ್ಯಕವಾಗಿದೆ. ಇದರಿಂದ, ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿ ಮುಸಲ್ಮಾನರನ್ನಾಗಿ ಮಾಡಲಾಗಿದೆ ಎಂಬುದು ಸದಾ ನೆನಪಿನಲ್ಲಿ ಉಳಿಯುತ್ತದೆ!