|

ಇಸ್ಲಾಮಾಬಾದ್ – 2001 ರಲ್ಲಿ ಭಾರತೀಯ ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿ ಸೇರಿದಂತೆ ಅನೇಕ ಭಯೋತ್ಪಾದಕ ಚಟುವಟಿಕೆಗಳ ಮುಖ್ಯ ಸೂತ್ರಧಾರ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜಹರ್, ಪಾಕಿಸ್ತಾನದ ಪ್ರತಿಯೊಂದು ಜಿಲ್ಲೆಯಲ್ಲಿ ಮಹಿಳಾ ಭಯೋತ್ಪಾದನಾ ಕೇಂದ್ರದ ಶಾಖೆಯನ್ನು ತೆರೆಯುವುದಾಗಿ ಘೋಷಿಸಿದ್ದಾನೆ. ಈ ಕೇಂದ್ರವು ಭಯೋತ್ಪಾದಕರಾಗಲು 15 ದಿನಗಳ ಅಧ್ಯಯನ ಕ್ರಮವನ್ನು ನಡೆಸಲಿದೆ. ಈ ಮಹಿಳಾ ಭಯೋತ್ಪಾದಕರನ್ನು ಆತ್ಮಾಹುತಿ ದಾಳಿಗಳಲ್ಲಿ ಬಳಸುವ ಸಾಧ್ಯತೆ ಇದೆ.
🚨 Masood Azhar reportedly opening female terror training centres in every district of Pakistan – 15-day courses promising “Jannat”.
What are the UN & international human-rights bodies doing about this? 🌍
Hindus everywhere – wake up, strengthen community security, legal… pic.twitter.com/Lx3mgDb4yq
— Sanatan Prabhat (@SanatanPrabhat) October 30, 2025
1. ಮಾಧ್ಯಮಗಳು ನೀಡಿರುವ ವರದಿಗಳ ಪ್ರಕಾರ, ಪ್ರತಿ ಶಾಖೆಯ ಮುಖ್ಯಸ್ಥರು ‘ಜಿಲ್ಲಾ ಮುಂತೇಜಿಮಾ’ ಆಗಿರುತ್ತಾರೆ, ಇವರು ಸ್ಥಳೀಯ ಮಹಿಳೆಯರನ್ನು ನೇಮಕ ಮಾಡುತ್ತಾರೆ. ಇದಕ್ಕಾಗಿ ಕಠಿಣ ನಿಯಮಗಳನ್ನು ಸಹ ಮಾಡಲಾಗಿದೆ, ಅವುಗಳ ಪ್ರಕಾರ, ಈ ಮಹಿಳೆಯರು ಮೊಬೈಲ್ ಮೂಲಕ ಅಪರಿಚಿತ ಪುರುಷರೊಂದಿಗೆ ಮಾತನಾಡಲು ಸಾಧ್ಯವಿಲ್ಲ.
2. ಈ ಶಾಖೆಯಲ್ಲಿ ಸೇರಿಕೊಳ್ಳುವ ಮಹಿಳೆಯರಿಗೆ ಅವರ ಕಬ್ರದಿಂದ ನೇರವಾಗಿ ಸ್ವರ್ಗ ಸಿಗುತ್ತದೆ ಎಂದು ಅಜಹರ್ ಭರವಸೆ ನೀಡಿದ್ದಾನೆ. ಪುರುಷ ಸೈನಿಕರು ಮಹಿಳೆಯರೊಂದಿಗೆ ಸೇರಿ ಜಗತ್ತಿನಾದ್ಯಂತ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಕೆಲಸ ಮಾಡುತ್ತಾರೆ ಎಂದು ಸಹ ಅವನು ಹೇಳಿದ್ದಾನೆ.
3. ಅಜಹರ್ 21 ನಿಮಿಷಗಳ ಒಂದು ಆಡಿಯೋವನ್ನು ಪ್ರಸಾರ ಮಾಡಿ ಇದರಲ್ಲಿ, ‘ಜಾಗತಿಕ ಜಿಹಾದ್’ನಲ್ಲಿ ಮಹಿಳೆಯರನ್ನು ನೇಮಕ ಮಾಡುವುದು, ತರಬೇತಿ ನೀಡುವುದು ಮತ್ತು ಅವರನ್ನು ಬಳಸಿಕೊಳ್ಳುವ ಸಂಪೂರ್ಣ ಯೋಜನೆಯನ್ನು ವಿವರವಾಗಿ ವಿವರಿಸಲಾಗಿದೆ.
4. ಮಹಿಳಾ ಭಯೋತ್ಪಾದಕರ ನಾಯಕತ್ವವನ್ನು ಮಸೂದ್ ಅಜಹರ್‌ನ ಸಹೋದರಿ ಸಾದಿಯಾ ಅಜಹರ್ ವಹಿಸಿದ್ದಾಳೆ, ಇವಳ ಪತಿ ಯೂಸುಫ್ ಅಜಹರ್ ಮೇ 7 ರಂದು ‘ಆಪರೇಷನ್ ಸಿಂದೂರ್’ನಲ್ಲಿ ಹತನಾಗಿದ್ದಾನೆ.
5. ಪುರುಷರಿಗಾಗಿ ‘ದೌರಾ-ಎ-ತರಬಿಯತ್’ ಎಂಬ ಅಧ್ಯಯನ ಕ್ರಮ ಇರುವಂತೆ, ಮಹಿಳೆಯರಿಗಾಗಿ ಮೊದಲ ‘ದೌರಾ-ಎ-ತಸ್ಕಿಯಾ’ ಎಂಬ ಅಧ್ಯಯನ ಕ್ರಮ ಇರುತ್ತದೆ, ಇದನ್ನು ಬಹಾವಲಪುರ ಕೇಂದ್ರದಲ್ಲಿ ನಡೆಸಲಾಗುತ್ತದೆ ಎಂದು ಅಜಹರ್ ಹೇಳಿದ್ದಾನೆ. ಅಧ್ಯಯನ ಕ್ರಮದ ಎರಡನೇ ಹಂತವು ‘ದೌರಾ-ಆಯತ್-ಉಲ್-ನಿಸಾಹ್’ ಆಗಿರುತ್ತದೆ, ಇದರಲ್ಲಿ ಮಹಿಳೆಯರಿಗೆ ಇಸ್ಲಾಮಿಕ್ ಪುಸ್ತಕಗಳ ಮೂಲಕ ಜಿಹಾದ್ ಮಾಡುವ ವಿಧಾನವನ್ನು ಕಲಿಸಲಾಗುತ್ತದೆ.
6. ಕಳೆದ 20 ವರ್ಷಗಳಿಂದ ಈ ಅಧ್ಯಯನ ಕ್ರಮವು ಪುರುಷರನ್ನು ಜಿಹಾದಗಾಗಿ ಸಿದ್ಧಪಡಿಸುತ್ತಿದೆ, ಹಾಗೆಯೇ ಭಾರತದ ವಿರುದ್ಧ ಹೋರಾಡಲು ಅವರಿಗೆ ಸ್ವರ್ಗದ ಭರವಸೆ ನೀಡುತ್ತಿದೆ. ಈಗ ಮಹಿಳೆಯರಿಗೂ ಅದೇ ವಿಷಯವನ್ನು ಕಲಿಸಲಾಗುತ್ತದೆ.
7. ಮಹಿಳಾ ಭಯೋತ್ಪಾದನಾ ಕೇಂದ್ರಗಳನ್ನು ತೆರೆಯುವ ಹಿಂದಿನ ಕಾರಣವನ್ನು ಹೇಳುತ್ತಾ ಅಜಹರ್, “ಜೈಶ್ ನ ಶತ್ರುಗಳು ಹಿಂದೂ ಮಹಿಳೆಯರನ್ನು ಸೈನ್ಯಕ್ಕೆ ನೇಮಕ ಮಾಡಿದರು ಮತ್ತು ಮಹಿಳಾ ಪತ್ರಕರ್ತರನ್ನು ನಮ್ಮ ವಿರುದ್ಧ ನಿಲ್ಲಿಸಿದರು. ಈಗ ನಾನು ನನ್ನ ಮಹಿಳೆಯರನ್ನು ಅವರೊಂದಿಗೆ ಹೋರಾಡಲು ಸಿದ್ಧಪಡಿಸುತ್ತಿದ್ದೇನೆ” ಎಂದಿದ್ದಾನೆ.
ಭಯೋತ್ಪಾದಕ ಸಂಘಟನೆಗಳಲ್ಲಿ ಬಡ ಮಹಿಳೆಯರ ನೇಮಕ
ಜೈಶ್-ಎ-ಮೊಹಮ್ಮದ್ ಬಹಾವಲಪುರ್, ಕರಾಚಿ, ಮುಜಫ್ಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮಾನಸೆಹರಾ ಮುಂತಾದ ಸ್ಥಳಗಳಲ್ಲಿನ ಮದರಸಾಗಳಲ್ಲಿ ಶಿಕ್ಷಣ ಪಡೆಯುವ ಭಯೋತ್ಪಾದಕರ ಪತ್ನಿಯರು ಮತ್ತು ಬಡ ಮಹಿಳೆಯರನ್ನು ನೇಮಕ ಮಾಡುತ್ತಿದೆ.
‘ಆಪರೇಷನ್ ಸಿಂದೂರ್’ ನಂತರ ಭಯೋತ್ಪಾದಕರ ನಿಯಮಗಳಲ್ಲಿ ಬದಲಾವಣೆ
ಜೈಶ್-ಎ-ಮೊಹಮ್ಮದ್ ಈ ಹಿಂದೆ ಮಹಿಳೆಯರಿಗೆ ಜಿಹಾದ್ ಯುದ್ಧದಲ್ಲಿ ಪ್ರವೇಶ ನೀಡಿರಲಿಲ್ಲ; ಆದರೆ ಪಹಲಗಾಮ್ ದಾಳಿ ಮತ್ತು ‘ಆಪರೇಷನ್ ಸಿಂದೂರ್’ ನಂತರ ನಿಯಮಗಳನ್ನು ಬದಲಾಯಿಸಲಾಯಿತು. ಮಸೂದ್ ಅಜಹರ್ ಮತ್ತು ಅವನ ಸಹೋದರ ತಲ್ಹಾ ಅಲ್-ಸೈಫ್ ಅವರು ಮಹಿಳೆಯರನ್ನು ಸೇರಿಸಿಕೊಳ್ಳಲು ನಿರ್ಧರಿಸಿದರು.
‘ಐಸಿಸ್’ ಮತ್ತು ‘ಬೋಕೋ ಹರಾಮ್’ ನಂತಹ ಸಂಘಟನೆಗಳು ಆತ್ಮಾಹುತಿ ದಾಳಿಗಳಲ್ಲಿ ಮಹಿಳೆಯರನ್ನು ಬಳಸುತ್ತವೆ.
ಭಯೋತ್ಪಾದಕ ಅಡ್ಡಾಗಳನ್ನು ಖೈಬರ್ ಪಖ್ತುನ್ಖ್ವಾಕ್ಕೆ ಸ್ಥಳಾಂತರಿಸಲಾಗಿದೆ!
‘ಆಪರೇಷನ್ ಸಿಂದೂರ್’ ನಂತರ ಜೈಶ್-ಎ-ಮೊಹಮ್ಮದ್, ಹಿಜಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಳು ತಮ್ಮ ನೆಲೆಗಳನ್ನು ಪಾಕಿಸ್ತಾನದ ಅಶಾಂತ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಕ್ಕೆ ಸ್ಥಳಾಂತರಿಸಿವೆ. ‘ಆಪರೇಷನ್ ಸಿಂದೂರ್’ನಲ್ಲಿ ನಾಶವಾದ ಭಯೋತ್ಪಾದಕ ನೆಲೆಗಳನ್ನು ಪುನಃ ನಿರ್ಮಿಸಲು ಈ ಭಯೋತ್ಪಾದಕ ಸಂಘಟನೆಗಳು ಸಾಮಾನ್ಯ ಜನರಿಂದ ದೇಣಿಗೆ ಕೇಳುತ್ತಿವೆ. ಆಗಸ್ಟ್ 2025 ರಿಂದ ಜೈಶ್ ಪಾಕಿಸ್ತಾನದಲ್ಲಿ 313 ಹೊಸ ಮರಕಜ್ ಗಳನ್ನು (ಕೇಂದ್ರಗಳನ್ನು) ನಿರ್ಮಿಸಲು 3.91 ಶತಕೋಟಿ (3 ಅಬ್ಜ 91 ಕೋಟಿ ರೂಪಾಯಿ) ಪಡೆಯಲು ಆನ್ ಲೈನ್ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದೆ.
ಸಂಪಾದಕೀಯ ನಿಲುವು
|
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !