ಮುಂಬಯಿಯಲ್ಲಿ ದೀರ್ಘಕಾಲ ವಾಸ್ತವ್ಯ

ಮುಂಬಯಿ – ಅಲೆಕ್ಸಾಂಡರ್ ಪಾಲ್ಮರ್ ಅಲಿಯಾಸ್ ಅಕ್ತರ ಕುತುಬುದ್ದೀನ್ ಹುಸೇನಿ ಎಂಬ ಗೂಢಚಾರನನ್ನು ಪೊಲೀಸರು ಬಂಧಿಸಿದ್ದಾರೆ. ಆತ ವಿದೇಶಿ ಪ್ರಜೆಯಾಗಿದ್ದು, ತನ್ನನ್ನು ತಾನು ಅಂತರರಾಷ್ಟ್ರೀಯ ವಿಜ್ಞಾನಿ ಎಂದು ನಟಿಸುತ್ತಿದ್ದ. ಈ ಪ್ರಕರಣದ ಬಗ್ಗೆ ಮುಂಬಯಿ ಪೊಲೀಸ್, ಗುಪ್ತಚರ ವಿಭಾಗ (ಐ.ಬಿ. – ಇಂಟೆಲಿಜೆನ್ಸ್ ಬ್ಯೂರೋ), ಗುಪ್ತಚರ ಸಂಸ್ಥೆ (ರಾ – ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್), ಮಿಲಿಟರಿ ಗುಪ್ತಚರ ನಿರ್ದೇಶನಾಲಯ (ಎಂ.ಐ. – ಮಿಲಿಟರಿ ಇಂಟೆಲಿಜೆನ್ಸ್), ದೆಹಲಿ ಪೊಲೀಸ್ ಮತ್ತು ಜಾರ್ಖಂಡ್ ಪೊಲೀಸ್ ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸುತ್ತಿದ್ದಾರೆ.
ಆತ ಭಾರತದಲ್ಲಿ ನಕಲಿ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ಸರಕಾರಿ ದಾಖಲೆಗಳನ್ನು ಸಿದ್ಧಪಡಿಸಿ ಭಾರತೀಯ ಪ್ರಜೆ ಎಂದು ನಟಿಸುತ್ತಿದ್ದ. ಆತ ಜುಹೂದ ಸೌರ ಐಲ್ಯಾಂಡ್‌ನಲ್ಲಿರುವ ಒಂದು ಮನೆಯಲ್ಲಿ ದೀರ್ಘಕಾಲ ವಾಸಿಸುತ್ತಿದ್ದ. ಬಂಧನದ ಸಮಯದಲ್ಲಿ ಆತನ ಪತ್ನಿ ಮತ್ತು ಮಗ ಕೂಡ ಅಲ್ಲಿದ್ದರು. ಆತನ ಮನೆಯಿಂದ ಪೊಲೀಸರು ನಕಲಿ ಗುರುತುಪತ್ರಗಳು, ವಿದೇಶಕ್ಕೆ ಹೋಗಲು ನಕಲಿ ದಾಖಲೆಗಳು, ಅನೇಕ ಮೊಬೈಲ್ ಫೋನ್‌ಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆತನ ಬಳಿ ಅನೇಕ ‘ಸಿಮ್ ಕಾರ್ಡ್’ಗಳು ಮತ್ತು ಮೊಬೈಲ್ ಸಂಖ್ಯೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ಕೆಲವು ಪಾಕಿಸ್ತಾನದ ಸಂಖ್ಯೆಗಳಾಗಿವೆ. ಆತನ ಬಳಿ ಇದ್ದ ಬ್ಯಾಂಕ್ ಖಾತೆ, ‘ಕ್ರೆಡಿಟ್ ಕಾರ್ಡ್’ ಮತ್ತು ಅನೇಕ ಸಂಸ್ಥೆಗಳಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿ ಇರುವುದನ್ನು ತೋರಿಸುವ ನಕಲಿ ಪ್ರಮಾಣಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನ ಸಹಚರ ಮುಜಾಫರ್‌ನಿಂದ ೪೮ ವಿದೇಶಿ ಕರೆನ್ಸಿ ನೋಟುಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವುಹುಸೇನಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಮತ್ತು ಸರಕಾರಿ ದಾಖಲೆಗಳನ್ನು ಪಡೆಯುವವರೆಗೆ ಪೊಲೀಸ್ ಮತ್ತು ಆಡಳಿತ ನಿದ್ರಿಸುತ್ತಿತ್ತೇ? ಶತ್ರು ಗೂಢಚಾರ ದೀರ್ಘಕಾಲದಿಂದ ಮುಂಬಯಿಯಲ್ಲಿ ವಾಸಿಸುತ್ತಿದ್ದರೂ ಅದನ್ನು ಸಮಯಕ್ಕೆ ಸರಿಯಾಗಿ ಏಕೆ ಗಮನಿಸಲಿಲ್ಲ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’