ಇಸ್ಲಾಂ ಘೋಷಣೆಗಳನ್ನು ಕೂಗುತ್ತಾ ಗಣಪತಿಯ ಚಿತ್ರಕ್ಕೂ ಕೋಲಿನಿಂದ ಹೊಡೆದ!

ಬೆಂಗಳೂರು – ಒಬ್ಬ ದಿವ್ಯಾಂಗ ಮತಾಂಧನು ದೇವಸ್ಥಾನದೊಳಗೆ ನುಗ್ಗಿ, ಚಪ್ಪಲಿ ಹಾಕಿದ ಕಾಲಿನಿಂದ ಮೂರ್ತಿಗೆ ಒದ್ದು, ಮೂರ್ತಿಯನ್ನು ಹೊರಗೆ ಎಳೆದೊಯ್ದಿದ್ದಾನೆ. ಆತನ ಹೆಸರು ಕಬೀರ್ ಎಂದು ತಿಳಿದುಬಂದಿದ್ದು, ಅಕ್ಟೋಬರ್ 28 ರಂದು ಈ ಘಟನೆ ನಡೆದಿದೆ. ಈ ಕೃತ್ಯದ ನಂತರ ಸ್ಥಳೀಯರು ಆತನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಆತ ಬಾಂಗ್ಲಾದೇಶಿ ಎಂದು ತಿಳಿಸಿದ್ದಾನೆ.
🚨 Disturbing incident from Devarabeesanahalli, Bengaluru:
A Bangladeshi national desecrated a Hindu temple idol – even kicking it!Why are Islamic leaders silent when such extremist acts are committed in the name of religion that claims to preach peace?
🎥 Courtesy:… pic.twitter.com/hUn1SSPL6H
— Sanatan Prabhat (@SanatanPrabhat) October 29, 2025
1. ದೇವರ ಬೀಸನಹಳ್ಳಿಯಲ್ಲಿ ಕಬೀರ್ ಎಂಬ ಈ ದಿವ್ಯಾಂಗ ಚಪ್ಪಲಿ ಹೊಲಿಯುವ ಅಂಗಡಿಯನ್ನು ನಡೆಸುತ್ತಿದ್ದಾನೆ.
2. ಬೆಳಗ್ಗೆ 8.30 ರ ಸುಮಾರಿಗೆ ಇಸ್ಲಾಂ ಧರ್ಮದ ಘೋಷಣೆಗಳನ್ನು ಕೂಗುತ್ತಾ ಬಂದ ಕಬೀರ, ದೇವಸ್ಥಾನದ ಸಮೀಪವಿರುವ ಔಷಧಾಲಯದ ಮುಂದೆ ಇಟ್ಟಿದ್ದ ಗಣಪತಿಯ ಚಿತ್ರಕ್ಕೂ ಕೋಲಿನಿಂದ ಹೊಡೆದಿದ್ದಾನೆ. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆತನನ್ನು ತಡೆದಿದ್ದಾರೆ.
3. ನಂತರ ಆತ ಅಲ್ಲಿಂದ ಸಮೀಪದಲ್ಲಿದ್ದ ದೇವಸ್ಥಾನದ ಕಡೆಗೆ ಓಡಿ ಕೂಗಾಟ ಮಾಡಿ, ಕಲ್ಲಿನಿಂದ ದೇವಸ್ಥಾನದ ಗರುಡ ಸ್ತಂಭಕ್ಕೆ ಹೊಡೆದಿದ್ದಾನೆ. ಆತನ ಕೈಯಲ್ಲಿ ಎಣ್ಣೆಯಂತಹ ಪದಾರ್ಥವಿದ್ದ ವಸ್ತು ಇತ್ತು. ನಂತರ ಚಪ್ಪಲಿ ಹಾಕಿಕೊಂಡೇ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ದೇವರ ಮೂರ್ತಿಯನ್ನು ಎಳೆದು, ಚಪ್ಪಲಿ ಹಾಕಿದ ಕಾಲುಗಳಿಂದ ಒದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
4. ಮತಾಂಧ ಕಬೀರನ ಈ ವಿಕೃತ ಕೃತ್ಯವನ್ನು ನೋಡಿ ಅಲ್ಲಿ ನೆರೆದಿದ್ದ ಸ್ಥಳೀಯರು ಆತನನ್ನು ಎಳೆದು ದೇವಸ್ಥಾನದಿಂದ ಹೊರಗೆ ತಂದು, ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. (ಇಂತಹ ವಿಕೃತ ಮನಃಸ್ಥಿತಿಯ ಮತಾಂಧನನ್ನು ಆಸ್ಪತ್ರೆಗೆ ದಾಖಲಿಸದೆ ಹಾಗೆಯೇ ಇಡಬೇಕು ಎಂದು ಯಾರಿಗಾದರೂ ಅನಿಸಿದರೆ, ಅದರಲ್ಲಿ ತಪ್ಪೇನಿದೆ? – ಸಂಪಾದಕರು)
5. ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಬಳಿ ಇದ್ದ ಎಣ್ಣೆಯ ಬಾಟಲಿ, ಚಪ್ಪಲಿ ಮತ್ತು ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕಿತ್ಸೆಯ ನಂತರ ಪೊಲೀಸರು ಆರೋಪಿಯ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!