|

ರಿಯೋ ಡಿ ಜನೈರೋ (ಬ್ರೆಜಿಲ್) – ಇಲ್ಲಿನ ಪೊಲೀಸರು ಮಾದಕ ವಸ್ತು ಮಾಫಿಯಾಗಳ ವಿರುದ್ಧ ಕೈಗೊಂಡ ಇಲ್ಲಿಯವರೆಗಿನ ಅತಿದೊಡ್ಡ ಕಾರ್ಯಾಚರಣೆಯಲ್ಲಿ ೪ ಪೊಲೀಸರು ಸೇರಿದಂತೆ ೬೪ ಜನರು ಮೃತಪಟ್ಟರು. ಪೊಲೀಸರು ೮೦ ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ‘ರೆಡ್ ಕಮಾಂಡ್’ ಎಂದು ಗುರುತಿಸಲಾದ ಕುಖ್ಯಾತ ಗ್ಯಾಂಗ್‌ನ ವಿರುದ್ಧ ಈ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ೨ ಸಾವಿರ ೫೦೦ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದರು.
ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ರೆಡ್ ಕಮಾಂಡ್ ಗ್ಯಾಂಗ್‌ನ ಗೂಂಡಾಗಳು ಅವರ ಮೇಲೆ ಗುಂಡು ಹಾರಿಸಿದರು, ಹಾಗೆಯೇ ಡ್ರೋನ್‌ಗಳಿಂದ ಬಾಂಬ್‌ಗಳನ್ನು ಎಸೆದರು. ಇದಕ್ಕೆ ಪೊಲೀಸರು ಸೂಕ್ತ ಪ್ರತ್ಯುತ್ತರ ನೀಡಿದರು. ಈ ಕಾರ್ಯಾಚರಣೆಯಿಂದಾಗಿ ಹತ್ತಿರದಲ್ಲಿ ವಾಸಿಸುವ ನಿವಾಸಿಗಳಲ್ಲಿ ಭಯ ಹರಡಿತು, ಅವರು ಪರಿಸ್ಥಿತಿಯನ್ನು ‘ಯುದ್ಧಭೂಮಿ’ ಎಂದು ವಿವರಿಸುತ್ತಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅನೇಕ ನಾಗರಿಕರು ಸಹ ಗಾಯಗೊಂಡರು. ಈ ಕಾರ್ಯಾಚರಣೆಯಲ್ಲಿ ೨೦೦ ಕೆಜಿಗಿಂತಲೂ ಹೆಚ್ಚು ಮಾದಕ ವಸ್ತುಗಳು, ಅನೇಕ ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವುಅಪರಾಧವನ್ನು ಮಟ್ಟಹಾಕಲು ಇಂತಹ ಕ್ರಮ ಕೈಗೊಳ್ಳುವುದು ಅನಿವಾರ್ಯ ! |
ತಾಲಿಬಾನ್ನಿಂದ ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ನೆಲೆಗಳ ಮೇಲೆ ಡ್ರೋನ್ ದಾಳಿ
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!