
ಸಿಲ್ಚರ್ (ಅಸ್ಸಾಂ) – ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿಧು ಭೂಷಣ್ ದಾಸ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ‘ಅಮರ್ ಸೋನಾರ್ ಬಾಂಗ್ಲಾ, ಆಮಿ ತೋಮಾಯ್ ಭಾಲೋಬಾಶಿ’ ಹಾಡಿದ್ದಾರೆ. ಈ ಘಟನೆ ಶ್ರೀಭೂಮಿ ಜಿಲ್ಲೆಯ ಇಂದಿರಾ ಭವನದ ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ. ಆ ಸಮಯದಲ್ಲಿ ಕರೀಮ್‌ಗಂಜ್ (ಶ್ರೀಭೂಮಿ) ಜಿಲ್ಲಾ ಸೇವಾದಳದ ಕಾರ್ಯಕಾರಿ ಸಮಿತಿಯ ಸಭೆ ನಡೆಯುತ್ತಿತ್ತು. ಸೇವಾದಳದ ಮಾಜಿ ಜಿಲ್ಲಾಧ್ಯಕ್ಷರಾದ ದಾಸ್ ಅವರು ಭಾಷಣ ಪ್ರಾರಂಭಿಸುವಾಗ ಈ ಗೀತೆಯನ್ನು ಹಾಡಿದರು. ಈ ಗೀತೆಯನ್ನು ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್ ಅವರು ೧೯೦೫ ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಬಂಗಾಳದ ಮೊದಲ ವಿಭಜನೆಯ ಸಮಯದಲ್ಲಿ ಬರೆದಿದ್ದರು.
🇮🇳 SHOCKING! Congress leader sings the Bangladesh National Anthem at a party meeting in Sribhumi, Assam
Tomorrow, will they not hesitate to sing Pakistan's anthem for vote-bank politics?
Such actions threatens India’s unity. Time to make #CongressMuktBharat
🎥 Courtesy:… pic.twitter.com/rBBbeVTR8H
— Sanatan Prabhat (@SanatanPrabhat) October 29, 2025
ಈ ಘಟನೆಯ ಬಗ್ಗೆ ಅಸ್ಸಾಂನ ಭಾಜಪ ಸರಕಾರದ ಸಚಿವ ಕೃಷ್ಣೇಂದು ಪಾಲ್ ಅವರು, “ನನಗೆ ಮಾಹಿತಿ ಸಿಕ್ಕಿದೆ, ಕಾಂಗ್ರೆಸ್‌ನಲ್ಲಿ ಏನು ಬೇಕಾದರೂ ನಡೆಯಬಹುದು. ಈ ಪಕ್ಷ ಸಂಪೂರ್ಣವಾಗಿ ದಾರಿ ತಪ್ಪಿದೆ. ಅವರಿಗೆ ಯಾವಾಗ ಮತ್ತು ಯಾವ ಹಾಡನ್ನು ಹಾಡಬೇಕು ಎಂಬ ಅರಿವು ಕೂಡ ಉಳಿದಿಲ್ಲ. ಈ ಕಾರ್ಯಕ್ರಮದ ವಿಡಿಯೋ ನೋಡಿ ಪೊಲೀಸರಿಂದ ತನಿಖೆ ಮಾಡುವಂತೆ ಬೇಡಿಕೆ ಇಡಲಾಗುವುದು. ಆರೋಪಗಳು ನಿಜವೆಂದು ಸಾಬೀತಾದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
|
‘ಇದು ರಾಜಕೀಯ ಪಿತೂರಿ!'(ಅಂತೆ) – ಕಾಂಗ್ರೆಸ್ ಸಮರ್ಥನೆ
ಕಾಂಗ್ರೆಸ್ ಈ ಎಲ್ಲಾ ಪ್ರಕರಣವನ್ನು ‘ರಾಜಕೀಯ ಪಿತೂರಿ’ ಎಂದು ಹೇಳಿ ನಿರಾಕರಿಸಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಮುಖ್ಯಸ್ಥ ಶಹಾದತ್ ಅಹ್ಮದ್ ಚೌಧರಿ ಅವರು ಬಿಧು ಭೂಷಣ್ ದಾಸ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅವರು, “ದಾಸ್ ಅವರು ಕೇವಲ ಒಂದು ರವೀಂದ್ರ ಸಂಗೀತವನ್ನು ಹಾಡಿದ್ದಾರೆ, ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನಲ್ಲ. ಭಾಷಣವನ್ನು ಪ್ರಾರಂಭಿಸುವ ಮೊದಲು ಅವರು ತಾವು ಟಾಗೋರ್ ಅವರ ಒಂದು ಗೀತೆಯನ್ನು ಹಾಡುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದರು. (‘ಜನ ಗಣ ಮನ..’ ಇದು ಕೂಡ ರವೀಂದ್ರನಾಥ ಟಾಗೋರ್ ಅವರು ಬರೆದ ಭಾರತದ ರಾಷ್ಟ್ರಗೀತೆ. ಅದು ದಾಸ್ ಅವರಿಗೆ ಏಕೆ ನೆನಪಾಗಲಿಲ್ಲ? – ಸಂಪಾದಕರು) ಈ ಗೀತೆ ಭಾರತೀಯ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ. ಬಿಧು ಭೂಷಣ್ ದಾಸ್ ಅವರು ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಇಂದಿರಾ ಭವನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಇಂತಹ ದೇಶಭಕ್ತ ವ್ಯಕ್ತಿ ಎಂದಿಗೂ ಬೇರೆ ದೇಶದ ರಾಷ್ಟ್ರಗೀತೆಯನ್ನು ಹಾಡಲು ಸಾಧ್ಯವಿಲ್ಲ. ಈ ವಿವಾದವನ್ನು ಕಾಂಗ್ರೆಸ್ ಪಕ್ಷದ ಮಾನಹಾನಿ ಮಾಡಲು ಮಾತ್ರ ಸೃಷ್ಟಿಸಲಾಗಿದೆ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುನಾಳೆ ಕಾಂಗ್ರೆಸ್ ನಾಯಕರು ಮುಸ್ಲಿಮರ ಮತಗಳನ್ನು ಪಡೆಯಲು ಪಾಕಿಸ್ತಾನದ ರಾಷ್ಟ್ರಗೀತೆ ಹಾಡಲು ಸಹ ಹಿಂಜರಿಯುವುದಿಲ್ಲ! ಹಾಗಾಗಿ ಭಾರತದಿಂದ ರಾಜಕೀಯವಾಗಿ ಕಾಂಗ್ರೆಸ್ ಮುಕ್ತಗೊಳಿಸುವುದು ಅವಶ್ಯಕ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!