
ಬೀಜಿಂಗ (ಚೀನಾ) – ದಕ್ಷಿಣ ಚೀನಾ ಸಮುದ್ರದಲ್ಲಿ ಕೇವಲ ಅರ್ಧ ಗಂಟೆಯ ಅಂತರದಲ್ಲಿಯೇ ಅಮೆರಿಕದ ಎರಡು ವಿಮಾನಗಳು ಅಕ್ಟೋಬರ್ 26 ರಂದು ಪತನಗೊಂಡಿವೆ. ‘ಎಂಎಚ್-60 ಆರ್ ಸೀಹಾಕ್’ ಹೆಲಿಕಾಪ್ಟರ್ ಮತ್ತು ಇನ್ನೊಂದು ‘ಎಫ್/ಎ – 18 ಎಫ್ ಸೂಪರ್ ಹಾರ್ನೆಟ್’ ಪತನಗೊಂಡ ಯುದ್ಧ ವಿಮಾನವಾಗಿವೆ. ಎರಡೂ ವಿಮಾನಗಳು ಅಮೆರಿಕದ ‘ಯುಎಸ್‌ಎಸ್ ನಿಮಿಟ್ಜ್’ ವಿಮಾನವಾಹಕ ಯುದ್ಧನೌಕೆಯಿಂದ ನಿಯಮಿತ ಕಾರ್ಯಾಚರಣೆಗಾಗಿ ಹೊರಟಿದ್ದವು. ಅಪಘಾತದ ನಂತರ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತರಲಾಯಿತು. ಈ ಘಟನೆಯಾದ ಕೇವಲ 30 ನಿಮಿಷಗಳ ನಂತರ ‘ಎಫ್/ಎ – 18 ಎಫ್ ಸೂಪರ್ ಹಾರ್ನೆಟ್’ ಯುದ್ಧ ವಿಮಾನವೂ ಕೂಡ ಪತನಗೊಂಡಿತು. ಈ ವಿಮಾನದ ಪೈಲಟ್ ಕೂಡ ಸಮಯಕ್ಕೆ ಹೊರಬಂದು ತಮ್ಮ ಪ್ರಾಣ ಉಳಿಸಿಕೊಳ್ಳಲು ಯಶಸ್ವಿಯಾದರು. ಪೈಲಟ್ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಎರಡೂ ಘಟನೆಗಳ ಕುರಿತು ನೌಕಾದಳವು ತನಿಖೆ ಪ್ರಾರಂಭಿಸಿದೆ.
ಭೂ-ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದು ಕ್ಲಿಷ್ಟಕರ ಘಟನೆ
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಚಟುವಟಿಕೆಗಳಿಂದಾಗಿ ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಿರುವಾಗ ಈ ಅಪಘಾತ ಸಂಭವಿಸಿದೆ. ಚೀನಾ ಈ ಸಮುದ್ರದ ದೊಡ್ಡ ಪ್ರದೇಶದ ಮೇಲೆ ತನ್ನ ಹಕ್ಕನ್ನು ಸಾಧಿಸುತ್ತದೆ, ಆದರೆ ಚೀನಾಗ ಈ ಹಕ್ಕನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ತಿರಸ್ಕರಿಸಿದೆ. ಅಮೆರಿಕ ಈ ಪ್ರದೇಶದಲ್ಲಿ ನಿಯಮಿತವಾಗಿ ತನ್ನ ಯುದ್ಧನೌಕೆಗಳು ಮತ್ತು ವಿಮಾನಗಳನ್ನು ಕಳುಹಿಸುವ ಮೂಲಕ ಚೀನಾದ ಹಕ್ಕಿಗೆ ಸವಾಲೊಡ್ದುತ್ತಿದೆ. ‘ಯುಎಸ್‌ಎಸ್ ನಿಮಿಟ್ಜ್’ ವಿಮಾನವಾಹಕ ಯುದ್ಧನೌಕೆಯು ಅಕ್ಟೋಬರ್ 17 ರಂದು ಈ ಸಮುದ್ರವನ್ನು ತಲುಪಿತ್ತು.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers