ಮುಂಬಯಿ: ಅಪ್ರಾಪ್ತ ಹಿಂದೂ ಹುಡುಗಿಯರಿಗೆ ಕಿರುಕುಳ ನೀಡಿದ ಅಮೀನ್‌.

  • ನಡು ರಸ್ತೆಯಲ್ಲಿ ಅಮೀನ್‌ ನನ್ನು ಥಳಿಸಿದ ಸಂತ್ರಸ್ತೆಯ ತಾಯಿ

  • ತಾಯಿಗೆ ನಾಗರಿಕರ ಬೆಂಬಲ

ಮುಂಬಯಿ – ಹಾಲಿನ ಡೈರಿ ನಡೆಸುತ್ತಿದ್ದ ಮತಾಂಧ ಅಮೀನ್ ತನ್ನ ಅಂಗಡಿಗೆ ಬರುತ್ತಿದ್ದ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ಅವರ ಸಂಪರ್ಕ ಸಂಖ್ಯೆಗಳನ್ನು ಕದ್ದು, ‘ಸ್ನ್ಯಾಪ್ ಚಾಟ್’ (Snapchat) ಎಂಬ ಅಪ್ಲಿಕೇಶನ್ ಮೂಲಕ ಅವರನ್ನು ಸಂಪರ್ಕಿಸುತ್ತಿದ್ದನು. ಇದೇ ರೀತಿ 14 ವರ್ಷದ ಬಾಲಕಿಗೆ ಕಿರುಕುಳ ನೀಡಿದಾಗ, ಆಕೆ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದಳು. ನಂತರ ಹುಡುಗಿಯ ತಾಯಿ ರಸ್ತೆಯ ಮಧ್ಯೆ ಅಮೀನ್‌ ಗೆ ಕಪಾಳಮೋಕ್ಷ ಮಾಡುತ್ತಾ, ಅವನ ತಪ್ಪಿನ ಅರಿವು ಮಾಡಿಸಿದರು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಹಿಂದೂ ಸಮುದಾಯದವರು ಹುಡುಗಿಯ ತಾಯಿಗೆ ಬೆಂಬಲ ನೀಡಿದರು. ಈ ಘಟನೆಯ ವಿಡಿಯೋವನ್ನು ಸುದ್ದಿವಾಹಿನಿಗಳಲ್ಲಿ ತೋರಿಸಲಾಯಿತು.

ಈ ಸಮಯದಲ್ಲಿ, ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ, ಇದು ಲವ್ ಜಿಹಾದ್ ಎಂದು ಸ್ಪಷ್ಟವಾಗಿ ಹೇಳಿದರು. ಈ ಸಂದರ್ಭದಲ್ಲಿ ಸಂತ್ರಸ್ತೆಯ ತಾಯಿ, ನೀನು ನಮ್ಮ ಧರ್ಮದ ಹುಡುಗಿಯರನ್ನು ಏಕೆ ಸಂಪರ್ಕಿಸುತ್ತೀಯಾ? ನಿನಗೆ ಬೇಕಿದ್ದರೆ ನಿನ್ನ ಧರ್ಮದ ಹುಡುಗಿಯರನ್ನು ಸಂಪರ್ಕಿಸು, ಎಂದು ಹೇಳಿ ರಸ್ತೆಯ ಮಧ್ಯೆ ಅಮೀನ್‌ ಗೆ ಚೆನ್ನಾಗಿ ಥಳಿಸಿದರು. ಮತ್ತೊಬ್ಬ ವ್ಯಕ್ತಿ, ಹುಡುಗಿ ಮನೆಯಲ್ಲಿ ಹೇಳಿದ್ದರಿಂದ ಈ ಎಲ್ಲ ವಿಷಯ ಬಹಿರಂಗವಾಯಿತು, ಇಲ್ಲದಿದ್ದರೆ ಗೊತ್ತಾಗುತ್ತಲೇ ಇರಲಿಲ್ಲ, ಎಂದು ಹೇಳಿದರು.
ಈ ಬಗ್ಗೆ ಭಾಜಪ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಎಂದು ಭರವಸೆ ನೀಡಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನಿದೆ. ಅಷ್ಟೇ ಅಲ್ಲ, ಹುಡುಗಿಯರಿಗೆ ಕಿರುಕುಳ ನೀಡಿದರೂ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಕಿರುಕುಳ ನೀಡುವವರಿಗೆ ಶಿಕ್ಷೆ ನೀಡಿ ಅವರಿಗೆ ತಕ್ಕ ಪಾಠ ಕಲಿಸುತ್ತದೆ ಮತ್ತು ಅವರನ್ನು ಪದೇ-ಪದೇ ಕ್ಷಮೆ ಕೇಳಲು ಹೇಳಿ ಇಡೀ ಹಳ್ಳಿಯ ಸುತ್ತ ಸುತ್ತಿಸುತ್ತದೆ. ಮಹಾರಾಷ್ಟ್ರ ಸರಕಾರವೂ ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಇಂತಹ ಶಿಕ್ಷೆ ನೀಡಬೇಕು ಎಂದು ಮಹಾರಾಷ್ಟ್ರದ ನಾಗರಿಕರು ಈಗ ತೀವ್ರ ಬೇಡಿಕೆ ಇಡುತ್ತಿದ್ದಾರೆ.