ದೀಪಾವಳಿ ಶುಭಾಶಯ ಹೇಳುವಾಗ ‘ನಮಸ್ಕಾರ’ ಹೇಳಿದ ನ್ಯೂಜಿಲೆಂಡ್ ಯೂಟ್ಯೂಬರ್‌ಗೆ ಮತಾಂಧ ಮುಸಲ್ಮಾನನಿಂದ ‘ಸಲಾಮ್ ವಾಲೇಕುಮ್’ ಹೇಳಿಸುವಂತೆ ಒತ್ತಾಯ!

(ಯೂಟ್ಯೂಬರ್ಃ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವೀಡಿಯೊಗಳನ್ನು ಪ್ರಸಾರ ಮಾಡುವ ವ್ಯಕ್ತಿ)

ದೆಹಲಿ – ಭಾರತಕ್ಕೆ ಬಂದಿದ್ದ ವಿದೇಶಿ ‘ಯೂಟ್ಯೂಬರ್’ ಒಬ್ಬನು ಇಲ್ಲಿನ ಮೊಹಮ್ಮದಿನ್ ಬೀದಿಯ ಜನರಿಗೆ ಉತ್ಸಾಹದಿಂದ ದೀಪಾವಳಿ ಶುಭಾಶಯ ಹೇಳುತ್ತಾ ‘ನಮಸ್ಕಾರ’ ಎನ್ನುತ್ತಿದ್ದಾಗ, ಕೋಪಗೊಂಡ ಅಲ್ಲಿನ ಮುಸಲ್ಮಾನನೊಬ್ಬನು ಆತನಿಗೆ ‘ಸಲಾಮ್ ವಾಲೇಕುಮ್’ ಎಂದು ಹೇಳುವಂತೆ ಒತ್ತಾಯಿಸಿದ.

೧. ನ್ಯೂಜಿಲೆಂಡ್‌ ಮೂಲದ ಈ ‘ಯೂಟ್ಯೂಬರ್’ ಸದ್ಯ ಭಾರತಕ್ಕೆ ಬಂದಿದ್ದಾನೆ. ದೀಪಾವಳಿಯ ಉತ್ಸಾಹಭರಿತ ವಾತಾವರಣದಲ್ಲಿ ಅವನು ಅಂಗಡಿಗಳಲ್ಲಿರುವ ಜನರಿಗೆ ಶುಭಾಶಯ ಹೇಳುತ್ತಿದ್ದ. ಒಂದು ಉಪಾಹಾರ ಗೃಹದ ಹೊರಗೆ ನಿಂತು ಅಲ್ಲಿನ ಅಡುಗೆಯವರಿಗೆ ದೀಪಾವಳಿ ಶುಭಾಶಯ ಹೇಳಿ ‘ನಮಸ್ಕಾರ’ ಎಂದನು; ಇದರಿಂದ ಕೋಪಗೊಂಡ ಒಬ್ಬ ಮತಾಂಧ ಮುಸಲ್ಮಾನನು ‘ಯೂಟ್ಯೂಬರ್’ಗೆ, “ಸಲಾಮ್ ವಾಲೇಕುಮ್! ನೋ ನಮಸ್ಕಾರ. ದಿಸ್ ಈಸ್ ಮೊಹಮ್ಮದಿನ್ ಸ್ಟ್ರೀಟ್” (ಸಲಾಮ್ ವಾಲೇಕುಮ್ ಹೇಳಿ! ನಮಸ್ಕಾರ ಬೇಡ. ಇದು ಮೊಹಮ್ಮದಿನ್ ಬೀದಿ), ಎಂದು ಹೇಳಿ, ಅವನಿಂದಲೂ ‘ಸಲಾಮ್ ವಾಲೇಕುಮ್’ ಹೇಳಿಸಿದ.

೨. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜನರು ಈ ಬಗ್ಗೆ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು ಪ್ರತಿಕ್ರಿಯಿಸುತ್ತಾ, ‘ಬೆಳಕಿನ ಹಬ್ಬದಲ್ಲಿ ಶುಭಾಶಯಗಳ ಬಗ್ಗೆ ವಾದ ಮಾಡುವುದಕ್ಕಿಂತ ದುಃಖದ ವಿಷಯ ಬೇರೊಂದಿಲ್ಲ’. ‘ಕೆಲವರಿಗೆ ಸ್ವಲ್ಪ ಬೆಳಕೂ ಸಹಿಸಲು ಆಗುವುದಿಲ್ಲ’, ಎಂದಿದ್ದಾರೆ.

೩. ‘ಸಲಾಮ್ ವಾಲೇಕುಮ್’ ಎನ್ನುವುದು ಸಮಸ್ಯೆಯಲ್ಲ; ಆದರೆ ಆ ಮತಾಂಧ ಮುಸಲ್ಮಾನನು ‘ನಮಸ್ಕಾರ’ ಹೇಳಲು ಯಾವ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದನೋ, ಅದರಿಂದ ಅವನಿಗೆ ಸಾಕಷ್ಟು ಬುದ್ಧಿವಾದದ ಅಗತ್ಯವಿದೆ ಎಂದು ಕಂಡುಬರುತ್ತದೆ. ಅವನನ್ನು ಹಿಡಿದು ಪ್ರೀತಿಯಿಂದ ಅಥವಾ ಬೆದರಿಕೆಯಿಂದ ತಿಳಿಹೇಳಬೇಕು; ಇಲ್ಲದಿದ್ದರೆ ಅವನಿಗೆ ಅರ್ಥವಾಗದು ಎಂದನಿಸುತ್ತದೆ’, ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ. ಹಾಗೆಯೇ ಈ ಘಟನೆಯ ಬಗ್ಗೆ ಅವರು ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ, ಮುಖ್ಯಮಂತ್ರಿ ಕಚೇರಿ, ದೆಹಲಿ ಪೊಲೀಸ್ ಮತ್ತು ಪೊಲೀಸ್ ಆಯುಕ್ತರ ‘ಎಕ್ಸ್’ (X) ಖಾತೆಗಳಿಗೆ ಕೂಡ ಮಾಹಿತಿ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ‘ನಮಸ್ಕಾರ್’ ಬದಲಿಗೆ ‘ಸಲಾಮ್ ವಾಲೇಕುಮ್’ ಎಂದು ಹೇಳಲು ಇದೇನು ಪಾಕಿಸ್ತಾನವೇ?
  • ಸರಳವಾದ ‘ನಮಸ್ಕಾರವನ್ನೂ ಸಹ ಸಹಿಸಲಾರದ ಮತಾಂಧರು ಹಿಂದೂಗಳ ಬಗ್ಗೆ ಎಷ್ಟೊಂದು ದ್ವೇಷವನ್ನು ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ!