ರಾಷ್ಟ್ರೀಯ ಬಜರಂಗ ದಳದ ನಗರ ಅಧ್ಯಕ್ಷ ಅಕ್ಷಯ ಓತಾರಿ ಮೇಲೆ ದಾಳಿ; ತೀವ್ರ ಗಾಯ

ದೂರು ದಾಖಲಿಸಲು ಪೊಲೀಸರ ವಿಳಂಬ; ಕುಟುಂಬದವರ ಆರೋಪ.

ಕೊಲ್ಲಾಪುರ, ಅಕ್ಟೋಬರ 25 (ವರದಿ) – ರಾಷ್ಟ್ರೀಯ ಬಜರಂಗ ದಳದ ನಗರ ಅಧ್ಯಕ್ಷ ಶ್ರೀ. ಅಕ್ಷಯ ಓತಾರಿ ಅವರ ಮೇಲೆ ಸಿಂಗಣಾಪುರ ಫಾಟಾದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾದ ಕಾರಣಕ್ಕಾಗಿ ಅರಬಾಜ ಫೈಯಾಜ್ ಬಾಗವಾನ ಎಂಬಾತ ದಾಳಿ ಮಾಡಿದನು. ಶ್ರೀ. ಅಕ್ಷಯ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಾಗ ಅವರ ಬೆರಳುಗಳಿಗೆ ತೀವ್ರ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಅರಬಾಜ ಕೂಡ ಗಾಯಗೊಂಡಿದ್ದಾನೆ. ಈ ಕುರಿತು ಅರಬಾಜ ಬಾಗವಾನ್ ನೀಡಿದ ದೂರಿನ ಆಧಾರದ ಮೇಲೆ ಶ್ರೀ. ಅಕ್ಷಯ ಓತಾರಿ ಅವರನ್ನು ತಕ್ಷಣವೇ ಬಂಧಿಸಲಾಗಿದೆ. ಶ್ರೀ. ಅಕ್ಷಯ್ ಓತಾರಿ ಅವರು ಬಾಗವಾನ್ ಮೇಲೆ ಮಚ್ಚಿನಿಂದ ಹೊಡೆಯಲು ಯತ್ನಿಸಿದ್ದಾರೆ ಎಂದು ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ಶ್ರೀ. ಅಕ್ಷಯ ಅವರು ಕೇವಲ ಆತ್ಮರಕ್ಷಣೆಗಾಗಿ ಬಾಗವಾನ ಮೇಲೆ ದಾಳಿ ಮಾಡಿದ್ದರು, ಹಾಗಿದ್ದರೂ ಕೂಡ, ಪೊಲೀಸರು ಓತಾರಿ ಕುಟುಂಬದವರ ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ ಎಂದು ಕುಟುಂಬದವರು ದೈನಿಕ ‘ಸನಾತನ ಪ್ರಭಾತ’ದೊಂದಿಗೆ ಮಾತನಾಡುವಾಗ ಆರೋಪಿಸಿದರು. (ದೂರು ದಾಖಲಿಸುವ ಮೊದಲು ಪೊಲೀಸರು ಘಟನೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದಿಲ್ಲವೇ? ‘ಸಿಸಿಟಿವಿ’ ದೃಶ್ಯಾವಳಿಗಳನ್ನು ಪರಿಶೀಲಿಸುವುದಿಲ್ಲವೇ? ಯಾರಾದರೂ ಇನ್ನೊಬ್ಬರ ಮೇಲೆ ದಾಳಿ ಮಾಡಿ ತಾವೇ ಮೊದಲು ಸುಳ್ಳು ದೂರು ದಾಖಲಿಸಬಹುದು. – ಸಂಪಾದಕರು)

1. ಈ ಪ್ರಕರಣ ಅಕ್ಟೋಬರ್ 22 ರ ಸಂಜೆ, ಅಂದರೆ ಪಾಡ್ಯದಂದು ನಡೆದಿದೆ. ಪೊಲೀಸರು ಮೊದಲು ಅರಬಾಜ ಫೈಯಾಜ್ ಬಾಗವಾನ ನೀಡಿದ ದೂರಿನ ಮೇರೆಗೆ ಶ್ರೀ. ಅಕ್ಷಯ ಅವರನ್ನು ಬಂಧಿಸಿದರು, ಆದರೆ ಯಾರು ಶ್ರೀ. ಅಕ್ಷಯ ಮೇಲೆ ದಾಳಿ ಮಾಡಿದ್ದಾರೋ, ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು 3 ದಿನ ವಿಳಂಬ ಮಾಡಿದ್ದಾರೆ ಎಂದು ಅಕ್ಷಯ ಅವರ ತಾಯಿ ಆರೋಪಿಸಿದರು.

2. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರಿಂದ, ಹಿಂದೂ ಕಾರ್ಯಕರ್ತರು ಕರವೀರ ಪೊಲೀಸ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿಕೊಳ್ಳುವ ಬಗ್ಗೆ ವಿಚಾರಿಸಿದರು. ಆದರೆ ಪೊಲೀಸರು ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಚಲಕರಂಜಿಯಿಂದಲೂ ರಾಷ್ಟ್ರೀಯ ಬಜರಂಗ ದಳದ ಪದಾಧಿಕಾರಿಗಳು, ಕಾರ್ಯಕರ್ತರು ಕರವೀರ ಪೊಲೀಸ ಠಾಣೆಗೆ ಬಂದು ಭೇಟಿ ನೀಡಿದ್ದರು.

3. ಶ್ರೀ. ಅಕ್ಷಯ ಅವರು ಗಂಭೀರವಾಗಿ ಗಾಯಗೊಂಡಿದ್ದರೂ, ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಶ್ರೀ. ಅಕ್ಷಯ ಅವರ ಬೆರಳಿಗೆ ಅನಸ್ತೇಷಿಯಾ ನೀಡದೆ ಹೊಲಿಗೆ ಹಾಕಿದ್ದಾರೆ ಎಂದು ಅವರ ತಾಯಿ ಆರೋಪಿಸಿದರು.

4. ಅಕ್ಟೋಬರ್ 24 ರಂದು, ಶ್ರೀ. ಅಕ್ಷಯ ಅವರ ತಂದೆ ಶ್ರೀ. ಆನಂದ ಓತಾರಿ ಅವರ ದೂರಿನ ಮೇರೆಗೆ ಕರವೀರ ಪೊಲೀಸ್ ಠಾಣೆಯಲ್ಲಿ ಅರಬಾಜ ಫೈಯಾಜ್ ಬಾಗವಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಕುರಿತು ಕರವೀರ ಪೊಲೀಸ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ ಶಿಂಧೆ ಅವರು ಮಾತನಾಡಿ, ಪೊಲೀಸರಿಂದ ದೂರು ದಾಖಲಿಸಿಕೊಳ್ಳಲು ಯಾವುದೇ ವಿಳಂಬ ಅಥವಾ ಹಿಂದೇಟು ಆಗಿಲ್ಲ. ಓತಾರಿ ಕುಟುಂಬದಿಂದ ದೂರು ನೀಡಲು ಯಾರೂ ಮುಂದೆ ಬರದ ಕಾರಣ ದೂರು ದಾಖಲಾಗಿರಲಿಲ್ಲ. ಶ್ರೀ. ಅಕ್ಷಯ ಅವರ ತಂದೆಯಿಂದ ದೂರು ದಾಖಲಿಸಿಕೊಂಡು ಅದರಂತೆ ತನಿಖೆ ನಡೆಸಲಾಗುತ್ತಿದೆ ಎಂದವರು ಹೇಳಿದರು.