ಭಾವನಗರ (ಗುಜರಾತ)ಇಲ್ಲಿ ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ಮುಸಲ್ಮಾನರಿಂದ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ : Hindu Brothers Attacked

ಸಮೀರ ಮತ್ತು ಅಸ್ಲಂ ಬಂಧನ

ಭಾವನಗರ (ಗುಜರಾತ) – ಇಲ್ಲಿ ದೀಪಾವಳಿ ಹಬ್ಬದ ದಿನದಂದು ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ಇಬ್ಬರು ಹಿಂದೂ ಸಹೋದರರ ಮೇಲೆ ಮುಸ್ಲಿಂ ಯುವಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಮೀರ, ರಿಯಾಜ ಮತ್ತು ಅಸ್ಲಂ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಲ್ಲಿ ಸಮೀರ ಮತ್ತು ಅಸ್ಲಂ ಅವರನ್ನು ಬಂಧಿಸಿದ್ದಾರೆ. ಈ ಘಟನೆ ಅಕ್ಟೋಬರ್ 19 ರಂದು ಕುಂಭಾರವಾಡ ಪ್ರದೇಶದ ಮಢಿಯಾ ರಸ್ತೆಯಲ್ಲಿರುವ ಮಹಮ್ಮದಿ ಮಸೀದಿಯ ಸಮೀಪದ ಮಾಫನಗರ ಪ್ರದೇಶದಲ್ಲಿ ನಡೆದಿದೆ.

2-3 ಮುಸ್ಲಿಂ ಯುವಕರು ಓರ್ವ ಹಿಂದೂ ಯುವಕನಿಗೆ ಪಟಾಕಿ ಸಿಡಿಸಿದ್ದಕ್ಕಾಗಿ ಬೈಯುತ್ತಿದ್ದರು. ಆತನ ಸಹೋದರ ಅಲ್ಲಿಗೆ ಬಂದಾಗ, ಆತನ ಮೇಲೆಯೂ ಹಲ್ಲೆ ಮಾಡಿದರು. ಸಹೋದರನ ಹೇಳಿಕೆಯಂತೆ, ರಿಯಾಜ ಪಠಾಣ, ಸಮೀರ್ ಹುಸೇನ್ ಸಯ್ಯದ್ ಮತ್ತು ಅಸ್ಲಂ ಪಠಾಣ್ ಕೈಯಲ್ಲಿ ಪೈಪ್ ಮತ್ತು ಕತ್ತಿಗಳನ್ನು ಹಿಡಿದುಕೊಂಡು ನಿಂತಿದ್ದರು. ಅಸ್ಲಂ ಪಠಾಣ್ ಬೈದಾಗ, ಅದನ್ನು ಪ್ರಶ್ನಿಸಿದ್ದಕ್ಕೆ ರಿಯಾಜ್ ಪಠಾಣ್ ಪೈಪ್‌ನಿಂದ ತಲೆಗೆ ಹೊಡೆದನು. ನಂತರ ಸಮೀರ್ ಮತ್ತು ಅಸ್ಲಂ ಕೂಡ ಪೈಪ್‌ನಿಂದ ಥಳಿಸಿದ್ದಾರೆ. ಆತನನ್ನು ರಕ್ಷಿಸಲು ಸಹೋದರ ಹೋದಾಗ, ಆರೋಪಿಗಳು ಆತನ ಮೇಲೆಯೂ ಹಲ್ಲೆ ಮಾಡಿದ್ದಾರೆ. ಸಮೀರ್ ಎಂಬ ಆರೋಪಿ ಕತ್ತಿ ಹಿಡಿದು ಬಂದು ಸಹೋದರನ ತಲೆಗೆ ಕತ್ತಿಯಿಂದ ಹೊಡೆದಿದ್ದಾನೆ. ನಂತರ ಜಗಳ ಹೆಚ್ಚಾದಾಗ, ಸ್ನೇಹಿತರು ಬಂದು ಇಬ್ಬರೂ ಸಹೋದರರನ್ನು ರಕ್ಷಿಸಿದ್ದಾರೆ. ಸದ್ಯ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಾಂಗ್ರೆಸ್ ಮಹಿಳಾ ನಾಯಕಿಯ ಕೈವಾಡವಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ! – ಸಂತ್ರಸ್ತರ ಆರೋಪ

ಸಂತ್ರಸ್ತ ಯುವಕ ಪೊಲೀಸರ ಮೇಲೆ ಪಕ್ಷಪಾತದ ವರ್ತನೆಯ ಆರೋಪ ಹೊರಿಸಿದ್ದಾನೆ. ತನ್ನ ದೂರಿನಲ್ಲಿ ತಾನು ಹೆಸರಿಸಿದ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಖತೀಜಾ ಖಾತೂನ್ ಎಂಬ ಸ್ಥಳೀಯ ಕಾಂಗ್ರೆಸ್ ನಾಯಕಿ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದು, ಆಕೆ ಆ ಪ್ರದೇಶದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾಳೆ. (ಭಾಜಪ ಆಡಳಿತವಿರುವ ರಾಜ್ಯದಲ್ಲಿ ಹೀಗಾಗಬಾರದು ಎಂಬುದೇ ಅಪೇಕ್ಷೆ – ಸಂಪಾದಕರು)

ಸಂಪಾದಕೀಯ ನಿಲುವು

ಗುಜರಾತ್‌ನಲ್ಲಿ ಹಲವು ವರ್ಷಗಳಿಂದ ಭಾಜಪ ಸರಕಾರವಿದ್ದರೂ ಇಂತಹ ಘಟನೆ ನಡೆಯಬಾರದಿತ್ತು ಎಂದು ಹಿಂದೂಗಳಿಗೆ ಅನಿಸುತ್ತದೆ. !