ಮಾರುಕಟ್ಟೆ ಮೌಲ್ಯ 1 ಲಕ್ಷದ 77 ಸಾವಿರ ಕೋಟಿ ತಲುಪಿದೆ!

ನವದೆಹಲಿ – ‘ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಅಂಡ್ ಕನ್ಸಲ್ಟನ್ಸಿ’ಗೆ ಸಂಬಂಧಿಸಿದ ‘ಕೆನ್ ರಿಸರ್ಚ್’ ಎಂಬ ಸಂಸ್ಥೆಯು ಭಾರತದ ಹಲಾಲ್ ಆಹಾರ ಮಾರುಕಟ್ಟೆಯ ಕುರಿತು ಪ್ರಕಟಿಸಿದ ‘ಇಂಡಿಯಾ ಹಲಾಲ್ ಫುಡ್ ಮಾರ್ಕೆಟ್ ಔಟ್ಲುಕ್ ಟು 2030’ ವರದಿಯಲ್ಲಿ, ದೇಶದ ಹಲಾಲ್ ಆಹಾರ ಮಾರುಕಟ್ಟೆಯ ಮೌಲ್ಯವು $19 ಶತಕೋಟಿ ಅಂದರೆ 1 ಲಕ್ಷ 77 ಸಾವಿರ ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಹೇಳಿದೆ.
1. ಕೆನ್ ರಿಸರ್ಚ್‌ನ ವರದಿಯ ಪ್ರಕಾರ, ಮುಸ್ಲಿಮರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮುಸ್ಲಿಮೇತರರಿಂದಲೂ ಹಲಾಲ್ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಭಾರತದಲ್ಲಿ ಹಲಾಲ್ ಆಹಾರ ಪದಾರ್ಥಗಳ ವ್ಯವಹಾರ ನಿರಂತರವಾಗಿ ವಿಸ್ತರಿಸುತ್ತಿದೆ.
2. ಹಲಾಲ್ ಆಹಾರ ಪದಾರ್ಥಗಳ ಬೇಡಿಕೆ ಮುಖ್ಯವಾಗಿ ಲಕ್ಮಣಪುರಿ, ಮುಂಬಯಿ ಮತ್ತು ಭಾಗ್ಯನಗರ ಈ ನಗರಗಳಲ್ಲಿ ಹೆಚ್ಚಿದೆ. ಈ ನಗರಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಮನಾರ್ಹವಾಗಿದೆ. ಈ ನಗರಗಳಲ್ಲಿ ಹಲಾಲ್ ಪದಾರ್ಥಗಳ ವಿತರಣೆಯನ್ನು ಉತ್ತಮವಾಗಿ ಮಾಡಲಾಗುತ್ತಿರುವುದರಿಂದ, ಈ ನಗರಗಳು ಹಲಾಲ್-ಪ್ರಮಾಣೀಕೃತ ಆಹಾರ ಉತ್ಪನ್ನಗಳ ಪ್ರಮುಖ ಕೇಂದ್ರಗಳಾಗಿವೆ.
3. ಭಾರತೀಯ ಹಲಾಲ್ ಆಹಾರ ಪದಾರ್ಥಗಳ ರಫ್ತು ಕೂಡ ಹೆಚ್ಚಾಗಿದೆ, ವಿಶೇಷವಾಗಿ ಗಲ್ಫ್ ಸಹಕಾರ ಮಂಡಳಿ ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಈ ರಫ್ತು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.
4. ಭಾರತದ ಹಲಾಲ್ ಆಹಾರ ಮಾರುಕಟ್ಟೆಯಲ್ಲಿ ಎಲಾನಸನ್ಸ್ ಪ್ರೈವೇಟ್ ಲಿಮಿಟೆಡ್, ಅಲ್ ಕಬೀರ್ ಗ್ರೂಪ್, ಅಮರಾ ಹಲಾಲ್ ಫುಡ್ಸ್, ಬಿಆರ್‌ಎಫ್ ಎಸ್.ಎ. ಮತ್ತು ನೆಸ್ಲೆ ಎಸ್.ಎ. ಯಂತಹ ಪ್ರಮುಖ ಸಂಸ್ಥೆಗಳು ಸಕ್ರಿಯವಾಗಿವೆ. ಅವುಗಳ ವಿತರಣಾ ವ್ಯವಸ್ಥೆ, ರಫ್ತು ಸಾಮರ್ಥ್ಯ ಮತ್ತು ‘ಬ್ರ್ಯಾಂಡ್’ (ವ್ಯಾಪಾರಿ ಚಿಹ್ನೆ) ಗುರುತಿನಿಂದಾಗಿ ಅವು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿವೆ.
ಎಮ್ಮೆಯ ಮಾಂಸದ ರಫ್ತಿನಲ್ಲಿ ಜಗತ್ತಿನಲ್ಲಿ 10ನೇ ಸ್ಥಾನದಲ್ಲಿ ಭಾರತ
ಭಾರತ ಸರಕಾರದ ಶಾಸನಬದ್ಧ ಸಂಸ್ಥೆಯಾದ ‘ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ದ (‘ಅಪೆಡಾ’ದ) ಪ್ರಕಾರ, ಎಮ್ಮೆಯ ಮಾಂಸವನ್ನು ಅತಿ ಹೆಚ್ಚು ರಫ್ತು ಮಾಡುವ ಜಗತ್ತಿನ 10ನೇ ಅತಿದೊಡ್ಡ ದೇಶ ಭಾರತವಾಗಿದೆ. ಬ್ರೆಜಿಲ್, ಅಮೇರಿಕಾ, ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಕೆನಡಾ ಈ ಉತ್ಪನ್ನದ ಪ್ರಮುಖ ರಫ್ತುದಾರ ಆಗಿದೆ.
ಸಂಪಾದಕೀಯ ನಿಲುವು
|
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!